ಮರಾಠಿ ಸಾಹಿತಿ ಮಾಧವಿ ದೇಸಾಯಿ ನಿಧನ
ಬೆಳಗಾವಿ: ಖ್ಯಾತ ಮರಾಠಿ ಸಾಹಿತಿ ಮಾಧವಿ ದೇಸಾಯಿ (80) ಸೋಮವಾರ ನಗರದಲ್ಲಿ ನಿಧನರಾದರು. ದಾದಾಸಾಹೇಬ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಮರಾಠಿ ಚಲನಚಿತ್ರ ನಿರ್ದೇಶಕ ಭಾಲ್ಜಿ ಪೆಡಣೇಕರ ಮತ್ತು ಚಿತ್ರತಾರೆ ಲೀಲಾಬಾಯಿ ದಂಪತಿ ಪುತ್ರಿಯಾಗಿರುವ ಮಾಧವಿ ಸಣ್ಣ ಕಥೆ, ಕವನ ಸಂಕಲನ, ಪ್ರವಾಸ ಕಥನ, ಕಾದಂಬರಿ ಸೇರಿದಂತೆ 35ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮುಂದಿನವಾರವೇ ಅವರ ಎರಡು ಕೃತಿಗಳ ಬಿಡುಗಡೆ ಸಮಾರಂಭವನ್ನು ಬೆಳಗಾವಿಯಲ್ಲಿ ಆಯೋಜಿಸಲಾಗಿತ್ತು. ಅವರ ಆತ್ಮಚರಿತ್ರೆ 'ನಾಛಗಾ ಗ ಘುಮಾ' ಕೃತಿ ಸಾಹಿತ್ಯಿಕ ವಲಯದಲ್ಲಿ ತೀವ್ರ ವಿವಾದಕ್ಕೆ ಒಳಗಾಗಿತ್ತು. 'ನಾಛಗಾ ಗ ಘುಮಾ' ಮತ್ತು 'ಏಕ ರಾಜಾಚಿ ಗೋಸ್ಟ್' ಕೃತಿಗಳನ್ನು ಚಂದ್ರಕಾಂತ ಪೋಕಳೆ ಹಾಗೂ ಡಾ.ಸರಜೂ ಕಾಟ್ಕರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇತ್ತೀಚೆಗಷ್ಟೇ ಗೋವಾಕ್ಕೆ ತೆರಳಿದ್ದ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಳಗಾವಿಗೆ ಮರಳಿದ್ದರು. ಮಾಧವಿ ಅವರು ಕಡೋಲಿ ಗ್ರಾಮೀಣ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಿದ್ದರು. ಅಲ್ಲದೇ, ಪ್ರತಿ ವರ್ಷ ಮರಾಠಿ ಬಹುಭಾಷಿಕ ಪ್ರದೇಶಗಳಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸುತ್ತ ಬಂದಿದ್ದ ಮಾಧವಿ ಅವರಿಗೆ ಪ್ರತಿಷ್ಠಿತ ಕುಸುಮರಾಜ ಸಾಹಿತ್ಯ ಪ್ರಶಸ್ತಿ ಹಾಗೂ ದಾಮನಿ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ದೊರೆತಿವೆ. ಮೃತರಿಗೆ ಮರಾಠಿ ಕವಿಯತ್ರಿ ಮೀರಾ ಸೇರಿದಂತೆ ಮೂವರು ಪುತ್ರಿಯರಿದ್ದಾರೆ. ಶಹಾಪುರದ ಸ್ಮಶಾನಭೂಮಿಯಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

