ತೈಲ ಸಚಿವರಿಗೆ ಆಮದು ಲಾಬಿ ಬೆದರಿಕೆ

ನವದೆಹಲಿ: ಬಹು ಹಿಂದಿನಿಂದಲೂ ತೈಲ ಸಚಿವರ ಮೇಲೆ 'ಆಮದು ಲಾಬಿ' ಬೆದರಿಕೆ ಇದೆ ಎಂಬ ಆಘಾತಕಾರಿ ಅಂಶವನ್ನು ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಹೊರಹಾಕಿದ್ದಾರೆ.
ರಿಲಾಯನ್ಸ್ ಪರವಾಗಿ ವೀರಪ್ಪ ಮೊಯ್ಲಿ ವರ್ತಿಸುತ್ತಿದ್ದಾರೆ ಎಂಬ ಸಿಪಿಐ ಆರೋಪಕ್ಕೆ ಉತ್ತರಿಸಿರುವ ಸಚಿವರು, ಹಿಂದಿನ ಎಲ್ಲಾ ಪೆಟ್ರೋಲಿಯಂ ಸಚಿವರು ಆಮದು ಬೆದರಿಕೆಗೆ ಒಳಗಾದವರೇ ಎಂದಿದ್ದಾರೆ. ಆದರೆ ತಾವು ಈ ಲಾಬಿಗೆ ಒಳಗಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳುವುದರಿಂದ ಭಾರತದ ಮೇಲೆ 160 ಶತಕೋಟಿ ಡಾಲರ್ ಹೊರೆಯಾಗುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿ ಭಾರತದಲ್ಲೇ ಉತ್ಪಾದಿಸುವ ಬಗ್ಗೆ ಪ್ರಸ್ತಾವ ಮಾಡಲಾಗುತ್ತಿದೆ. ಆದರೆ ಕಾಣದ ಕೈಗಳು, ಆಮದು ಲಾಬಿ ನಡೆಸಿ ಇದಕ್ಕೆ ಅಡ್ಡಿಯಾಗುತ್ತಿವೆ ಎಂದಿದ್ದಾರೆ.
ಸಿಪಿಐನ ಗುರುದಾಸ್ ದಾಸ್ಗುಪ್ತಾ ವೀರಪ್ಪ ಮೊಯ್ಲಿ ನೈಸರ್ಗಿಕ ಅನಿಲದ ದರವನ್ನು ಹೆಚ್ಚಿಸುವ ಮೂಲಕ ರಿಲಾಯನ್ಸ್ಗೆ ನೆರವಾಗುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಶುಕ್ರವಾರ ಉತ್ತರ ನೀಡಿರುವ ಮೊಯ್ಲಿ ಅವರು, ತೈಲ ಸಚಿವರಿಗೆ ಆಮದು ಲಾಬಿಯ ಬೆದರಿಕೆಗಳನ್ನು ಹೇಳಿದ್ದಾರೆ. ನಮ್ಮಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡಲ್ಲಿ, ಇಲ್ಲೇ ನಮಗೆ ಬೇಕಾದಷ್ಟು ನೈಸರ್ಗಿಕ ಅನಿಲವನ್ನು ಉತ್ಪಾದಿಸಿಕೊಳ್ಳಬಹುದು. ಆಗ ವಿದೇಶಗಳಿಂದ ನೈಸರ್ಗಿಕ ಅನಿಲವನ್ನು ತರಿಸಿಕೊಳ್ಳುವುದನ್ನು ಸ್ಥಗಿತಗೊಳಿಸಬಹುದು. ಆದರೆ ಇದಕ್ಕೆ ಆಡಳಿತಾತ್ಮಕವಾಗಿ ಕೆಲ ತೊಂದರೆಗಳಿದ್ದು, ತಡವಾಗುತ್ತಿದೆ.
ಆದರೆ ಇದಕ್ಕೆ ಇನ್ನೂ ಒಂದು ದೊಡ್ಡ ಬೆದರಿಕೆ ಇದೆ. ಆಮದು ಲಾಬಿಯೊಂದು ಇದ್ದು, ಇದು ವಿದೇಶಗಳಿಂದ ನೈಸರ್ಗಿಕ ಅನಿಲದ ಆಮದು ನಿಲ್ಲಬೇಕಿಲ್ಲ. ಇದು ಮುಂದುವರಿಯಲೇಬೇಕು. ಹೀಗಾಗಿ ಹಿಂದಿನ ಎಲ್ಲಾ ತೈಲ ಸಚಿವರ ಮೇಲೆ ಒತ್ತಡ ತಂದು ಆಮದು ಮುಂದುವರಿಯುವಂತೆ ಮಾಡಿವೆ ಎಂದು ಆರೋಪಿಸಿದ್ದಾರೆ.
ಆದರೆ ಲಾಬಿ ಮೂಲಕ ಬೆದರಿಕೆ ಹಾಕುತ್ತಿರುವವರು ಯಾರು ಎಂಬುದನ್ನು ವೀರಪ್ಪ ಮೊಯ್ಲಿ ಅವರು ಬಿಟ್ಟುಕೊಟ್ಟಿಲ್ಲ.
ಪೆಟ್ರೋಲಿಯಂ ಸಚಿವರ ಮೇಲೆ ಆಮದು ಲಾಬಿ ಬೆದರಿಕೆ ಇದೆ. ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳುವುದರಿಂದ ದೇಶಕ್ಕೆ 160 ಶತಕೋಟಿ ಡಾಲರ್ ಹೊರೆಯಾಗುತ್ತಿದೆ. ಇದನ್ನು ತಪ್ಪಿಸಲು ಭಾರತದಲ್ಲೇ ಉತ್ಪಾದಿಸುವ ಬಗ್ಗೆ ಪ್ರಸ್ತಾಪವಿದೆ. ಕಾಣದ ಕೈಗಳು, ಆಮದು ಲಾಬಿ ನಡೆಸಿವೆ.
- ವೀರಪ್ಪ ಮೊಯ್ಲಿ, ಪೆಟ್ರೋಲಿಯಂ ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


