ಖಾಸಗಿ, ಸರ್ಕಾರದ ನಡುವೆ 'ಎಣ್ಣೆ' ಗಲಾಟೆ
ಬೆಂಗಳೂರು: ರಾಜ್ಯದ ಪ್ರಭಾವಿ ಖಾಸಗಿ ವೈನ್ಸ್‌ಸ್ಟೋರ್‌ಗಳೂ ಸರ್ಕಾರಿ ವೈನ್ಸ್‌ಸ್ಟೋರ್‌ಗೂ ಮತ್ತೇರಿ ಕಚ್ಚಾಡ ತೊಡಗಿವೆ!
ತಾಲೂಕು ಮತ್ತು ಗ್ರಾಮೀಣ ಭಾಗದಲ್ಲಿ ಮದ್ಯದಂಗಡಿ ತೆರೆಯುವ ವಿಚಾರದಲ್ಲಿ ಖಾಸಗಿ ಬಾರ್‌ಗಳು ಸರ್ಕಾರದ ವಿರುದ್ಧವೇ ಆವಾಜ್ ಹಾಕುತ್ತಿವೆ. ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆ ಸ್ಥಾಪಿಸುವುದಕ್ಕೆ ಸ್ಥಾಪಿತ ಬಾರ್, ವೈನ್ಸ್‌ಸ್ಟೋರ್‌ಗಳೇ ಅಡ್ಡಿಯಾಗಿವೆ. ಇದರಿಂದ ಅಬಕಾರಿ ಇಲಾಖೆಯೇ ಅಲ್ಲಾಡಿ ಹೋಗಿದ್ದು, ಪ್ರಭಾವೀ ವೈನ್ಸ್‌ಸ್ಟೋರ್‌ಗಳು ಎಂಎಸ್‌ಐಎಲ್ ಮಳಿಗೆಗಳನ್ನೇ ಒಕ್ಕಲೆಬ್ಬಿಸುತ್ತಿದ್ದರೂ ಮೌನವಹಿಸುವಂತಾಗಿದೆ.
ರಾಜ್ಯದಲ್ಲಿ ಪರವಾನಗಿ ಪಡೆದ 9000ಕ್ಕೂ ಹೆಚ್ಚು ಬಾರ್‌ಗಳಿವೆ. ಆದರೆ, ಮೂರು ವರ್ಷಗಳ ಹಿಂದೆ ಸರ್ಕಾರ ಹೊಸ ಪರವಾನಗಿ ನೀಡಬಾರದೆಂದು ತೀರ್ಮಾನಿಸಿತ್ತು. ಇದರಿಂದ ಹೊಸ ಬಾರ್‌ಗಳಿಗೆ ಅವಕಾಶ ಸಿಗಲೇ ಇಲ್ಲ. ನಂತರ ಸರ್ಕಾರ ಖಾಸಗಿ ಬಾರ್‌ಗಳಿಗೆ ಪರವಾನಗಿ ನೀಡಿ ಬೆಳೆಸುವುದಕ್ಕಿಂತ ತನ್ನದೇ ನಿಗಮದ ಮೂಲಕ ಮದ್ಯ ಮರಾಟ ನಡೆಸಿದರೆ ಹೇಗೆ ಎಂದು ಮೂರು ವರ್ಷಗಳ ಹಿಂದೆಯೇ ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆ ಆರಂಭಿಸಲು ಮುಂದಾಗಿತ್ತು.
ತೀರ್ಮಾನದಂತೆ ಜಿಲ್ಲೆ, ತಾಲೂಕುಗಳಿಗೆ ತಲಾ 2 ಮತ್ತು ಹೋಬಳಿ ಮಟ್ಟದಲ್ಲಿ 1 ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆ ತೆರೆಯಲು ಸಿದ್ಧತೆ ನಡೆಸಲಾಗಿತ್ತು. ಇದರಂತೆ ರಾಜ್ಯಾದ್ಯಂತ ಇಷ್ಟೋತ್ತಿಗೆ 463 ಮಳಿಗೆ ತೆರೆಯಬೇಕಿತ್ತು. ಆದರೆ, ಸರ್ಕಾರಕ್ಕೆ ಇದು ಸಾಧ್ಯವಾಗಲೇ ಇಲ್ಲ. ಮೂರು ವರ್ಷಗಳಿಂದ ಒದ್ದಾಡಿಕೊಂಡು 362 ಮಳಿಗೆಗಳನ್ನು ಮಾತ್ರ ತೆರೆಯಿತು. ಇನ್ನೂ 100ಕ್ಕೂ ಹೆಚ್ಚು ಎಂಎಸ್‌ಐಎಲ್ ಮಳಿಗೆ ತೆರೆಯಲು ಸರ್ಕಾರ ಪರದಾಡುತ್ತಿದ್ದು, 7ಕ್ಕೂ ಹೆಚ್ಚು ಮಳಿಗೆಗಳನ್ನು ಆರಂಭಿಸಿದರೂ ಮದ್ಯ ಮಾರಾಟ ಅಸಾಧ್ಯವಾಗಿದೆ. ಏಕೆಂದರೆ, ಪ್ರಭಾವೀ ವೈನ್ಸ್‌ಸ್ಟೋರ್ ಮಾಲೀಕರು ಎಂಎಸ್‌ಐಎಲ್ ಮಳಿಗೆಗಳು ಮುಂದೆ ಹೆಜ್ಜೆ ಇಡುವುದಕ್ಕೇ ಬಿಡುತ್ತಿಲ್ಲ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಇದೊಂದು ರೀತಿ ಎಣ್ಣೆ ಗಲಾಟೆ: 10ವರ್ಷಗಳಿಂದಲೂ ಪಟ್ಟಣಗಳಲ್ಲಿ ನೆಲೆಯೂರಿರುವ ಈಗಿನ ವೈನ್ಸ್‌ಸ್ಟೋರ್‌ಗಳು ಸ್ಥಳೀಯವಾಗಿ ಬಹಳ ಪ್ರಭಾವಿಗಳ ಸಖ್ಯದಲ್ಲಿವೆ. ಅಂದರೆ, ವೈನ್ಸ್‌ಸ್ಟೋರ್‌ಗಳಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರಾಜಕೀಯ ನಾಯಕರ ಬಲವಿದೆ. ಈ ಮದ್ಯದಂಗಡಿಗಳು ತಡರಾತ್ರಿವರೆಗೂ ವ್ಯಾಪಾರ ನಡೆಸುತ್ತವೆ.
ಅಲ್ಲದೆ, ಕೆಲವು ಕಡೆ ನಿಗದಿಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತವೆ. ಇಂಥ ವೈನ್ಸ್‌ಸ್ಟೋರ್‌ಗಳ ಜತೆ ಅಬಕಾರಿ ಇಲಾಖೆ ಸ್ಥಳೀಯ ಸಿಬ್ಬಂದಿಯೂ ಕೈಜೋಡಿಸಿರುವುದರಿಂದ ಇದೊಂದು ರೀತಿ ಗೊತ್ತಿದ್ದೂ ಗೊತ್ತಿಲ್ಲದಂತೆ ನಡೆಯುತ್ತಿದೆ.
ಇಂಥ ಪ್ರದೇಶಗಳಲ್ಲಿ ಎಂಎಸ್‌ಐಎಲ್ ಮಳಿಗೆ ಆರಂಭಿಲು ಮುಂದಾಗುತ್ತಿದ್ದಂತೆ ಪ್ರಭಾವಿ ವೈನ್ಸ್‌ಸ್ಟೋರ್‌ಗಳ ಮಾಲೀಕರು ಈ ಮಳಿಗೆಗೆ ಜಾಗವೇ ಸಿಗದಂತೆ ಮಾಡುತ್ತಿದ್ದಾರೆ. ಅಬಕಾರಿ ಇಲಾಖೆ ಒತ್ತಡ ಹೆಚ್ಚಾದರೆ, ಸ್ಥಳೀಯ ರಾಜಕೀಯ ನಾಯಕರ ಮೂಲಕ ಎಂಎಸ್‌ಐಎಲ್ ಮಳಿಗೆಯನ್ನು ಊರಿಂದ ಹೊರ ಹಾಕಿಸುತ್ತಿದ್ದಾರೆ. ಇದರಿಂದ ಎಂಎಸ್‌ಐಎಲ್ ಮಳಿಗೆ ನಿರೀಕ್ಷಿತ ವ್ಯಾಪಾರ ನಡೆಯದೆ ಪರದಾಡುತ್ತಿವೆ. ಇದೇರೀತಿ ಹೋಬಳಿ ಮಟ್ಟದಲ್ಲಿರುವ ಮಳಿಗೆಗಳು ಊರಿಂದ ಹೊರಗೆ ಉಳಿಯುವಂತೆಯೂ ಇಲ್ಲ.
ಹೀಗಾಗಿ ಸರ್ಕಾರ ಹೊಸ ಮಳಿಗೆ ಆರಂಭಿಸುವ ನಾಟಕ ಆಡುತ್ತಿದ್ದೆಯೇ ವಿನಃ ಹೊಸ ಆಂಗಡಿಗಳನ್ನು ಮಾತ್ರ ತೆರೆಯುತ್ತಿಲ್ಲ. ಹೋಗಲಿ ಇರುವ ವೈನ್ಸ್‌ಸ್ಟೋರ್‌ಗಳನ್ನೂ ನಿಯಂತ್ರಿಸುತ್ತಿಲ್ಲ. ಏಕೆಂದರೆ, ಅಕ್ರಮವೋ, ಸಕ್ರಮವೋ ಹೆಚ್ಚಿನ ಮದ್ಯ ಮಾರಾಟ ಮಾಡಿ ಇಲಾಖೆ ಆದಾಯಕ್ಕೆ ತರುವ ಈ ವೈನ್ಸ್‌ಸ್ಟೋರ್‌ಗಳೇ ಜೀವಾಳ.
ಕೆಲವು ಪಟ್ಟಭದ್ರರು ಎಂಎಸ್‌ಐಎಲ್ ಮಳಿಗೆ ಆರಂಭಕ್ಕೆ ತೊಂದರೆ ನೀಡುತ್ತಿರುವುದು ನಿಜ. ಆದ್ದರಿಂದಲೇ ಬಾರ್‌ಗಳಿರುವ ಕಡೆ ಮತ್ತು ಗ್ರಾಮೀಣ ಭಾಗದಲ್ಲಿ ಮದ್ಯ ಮಾರಾಟ ಮತ್ತು ಜನಸಾಂಧ್ರತೆ ಕುರಿತು ಒಂದು ಸಮೀಕ್ಷೆ ನಡೆಸುತ್ತಿದ್ದೇವೆ. ನಂತರ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ.
- ಸೋಮಶೇಖರ್, ಅಬಕಾರಿ ಆಯುಕ್ತ
ಶಿವಕುಮಾರ್ ಬೆಳ್ಳಿತಟ್ಟೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

