ಉತ್ತರಾಖಂಡ ಪ್ರವಾಹ: ಗುಲ್ಬರ್ಗದ ಉದ್ಯಮಿ ಅಪಾಯದಿಂದ ಪಾರು
ಗುಲ್ಬರ್ಗ: ಉತ್ತರಾಖಂಡದಲ್ಲಿ ಭಾರಿ ಮಳೆ, ಪ್ರವಾಹದಲ್ಲಿ ಸಿಲುಕಿಕೊಂಡಿರುವ ಸಾವಿರಾರು ಯಾತ್ರಿಕರಲ್ಲಿ ಗುಲ್ಬರ್ಗ ನಗರದ ಉದ್ಯಮಿ ಕೇದಾರನಾಥ ಜಾಜಿ, ಅವರ ಪತ್ನಿ ಸುಜಾತಾ ಜಾಜಿ ಮತ್ತು ಜೇವರ್ಗಿ ಪಟ್ಟಣದ ನಿವೃತ್ತ ಶಿಕ್ಷಕ ಶೇಷಾಚಾರ್ಯ ಜೋಶಿ ಹರವಾಳ ಮತ್ತು ಅವರ ಪತ್ನಿ ಪದ್ಮಾವತಿಬಾಯಿ ಅವರೂ ಸೇರಿದ್ದು, ಸದ್ಯ ಅಪಾಯದಿಂದ ಪಾರಾಗಿದ್ದಾರೆಂದು ಅವರ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ. ತಮಗೆ ಮತ್ತು ತಮ್ಮ ಪತ್ನಿಯನ್ನು ಖಾಸಗಿ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ. ಬದರಿನಾಥದಿಂದ 50 ಕಿ.ಮೀ. ದೂರದಲ್ಲಿರುವ ಜೋಶಿ ಮಠದಲ್ಲಿ ತಂಗಿದ್ದೇವೆ. ಪ್ರವಾಹ ಕೊಂಚ ಕಡಿಮೆಯಾದ ನಂತರ ರಸ್ತೆ ಮಾರ್ಗವಾಗಿ ಹೃಷಿಕೇಶಗೆ ಆಗಮಿಸಿ ಅಲ್ಲಿಂದ ದೆಹಲಿಗೆಯಿಂದ ಬೆಂಗಳೂರಿಗೆ ಬಂದು ಮೂರ್ನಾರು ದಿನಗಳಲ್ಲಿ ಗುಲ್ಬರ್ಗಕ್ಕೆ ಬರುತ್ತೇವೆ ಎಂದು ಕೇದಾರನಾಥ ಜಾಜಿ ಅವರು ತಮ್ಮ ಸಹೋದರ ಅಶೋಕ ಜಾಜಿ ಜತೆ ದೂರವಾಣಿಯಲ್ಲಿ ತಿಳಿಸಿದ್ದಾರೆ ಎಂದು ಅವರ ಕುಟುಂಬ ಮೂಲಗಳಿಂದ ತಿಳಿದು ಬಂದಿದೆ. ಬದರಿ ಯಾತ್ರೆಗಾಗಿ ಜೇವರ್ಗಿಯ ಶೇಷಾಚಾರ್ಯ ಜೋಶಿ ದಂಪತಿ ಜೂನ್ 2ರಂದು ಹೈದ್ರಾಬಾದ್ನಿಂದ ಪ್ರಯಾಣ ಆರಂಭಿಸಿದ್ದಾರೆ. ಅಲ್ಲಿಂದ ವಿವಿಧ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ ಉತ್ತರಖಂಡ ಪ್ರದೇಶಿಸುವವರೆಗೂ ಎಲ್ಲವೂ ಪೂರ್ವನಿಗದಿಯಂತೆ ಸುಗಮವಾಗಿಯೇ ಯಾತ್ರೆ ಸಾಗಿತ್ತು. ಆದರೆ, ಬದರಿನಾರಾಯಣನ ದರ್ಶನಕ್ಕಾಗಿ ಬದರಿಗೆ ತೆರಳುತ್ತಿದ್ದಂತೆಯೇ ಮಳೆ ಸುರಿಯಲಾರಂಭಿಸಿ ಎಲ್ಲವೂ ಅಸ್ತವ್ಯಸ್ತಗೊಂಡಿತ್ತು. ಮಳೆ ಮತ್ತು ಪ್ರವಾಹ ಇದ್ದುದರಿಂದ ಬದರಿಯಲ್ಲಿನ ಧರ್ಮಶಾಲೆಯೊಂದರಲ್ಲಿ ಉಳಿದುಕೊಂಡಿದ್ದೇವೆ. ಈಗ ನಾವು ಸುರಕ್ಷಿತವಾಗಿದ್ದೇವೆ ಎಂದು ಜೋಶಿ ಅವರು ತಮ್ಮ ಮಗ ಭೀಮಸೇನ ಅವರಿಗೆ ದೂರವಾಣಿಯಲ್ಲಿ ತಿಳಿಸಿದ್ದಾರೆ ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

