ಚಿನ್ನ ನಿನ್ನ ಬೆಲೆ ಎಷ್ಟು ಚೆನ್ನ..?!

ನವದೆಹಲಿ/ಬೆಂಗಳೂರು: ಭಾರತೀಯರಿಗೆ ಶುಭ ಶುಕ್ರವಾರದ ಸಂಭ್ರಮ... ಒಂದೆಡೆ ಚಿನ್ನದ ದರ 23 ತಿಂಗಳಲ್ಲೇ ಅತ್ಯಂತ ಕಡಿಮೆಯಾಗಿದೆ. ಡಾಲರ್ ಎದುರು ರುಪಾಯಿ ಮೌಲ್ಯ ಶುಕ್ರವಾರ ಚೇತರಿಕೆ ಕಾಣುತ್ತಿದ್ದಂತೆಯೇ(59.39) ಜಾಗತಿಕ ಮಟ್ಟದಲ್ಲಿ ಚಿನ್ನದ ದರ ಭಾರಿ ಕುಸಿತ ಕಂಡಿತು. ದೇಶೀಯ ಷೇರುದಾರರು ಮತ್ತು ಹೂಡಿಕೆದಾರರು ಚಿನ್ನದ ಭಾರಿ ಮಾರಾಟದಲ್ಲಿ ತೊಡಗಿದ ಹಿನ್ನೆಲೆಯಲ್ಲಿ ಹಳದಿ ಲೋಹದ ದರ ದಾಖಲೆಯ ಕುಸಿತ ಕಂಡಿತು. ದೆಹಲಿಯಲ್ಲಿ ಒಂದೇ ದಿನ ಹಳದಿ ಲೋಹದ ಬೆಲೆ 10 ಗ್ರಾಂಗೆ 1,150ರಷ್ಟು ಕಡಿಮೆಯಾಗಿದೆ. ಹೀಗಾಗಿ 10 ಗ್ರಾಂ ಚಿನ್ನದ ದರ 25,650 ಆಗಿದೆ. ಅಲ್ಲಿ ಸ್ಟ್ಯಾ. ಚಿನ್ನದ ದರ 10 ಗ್ರಾಂಗೆ 25,130 ಆಗಿದ್ದರೆ, ಶುದ್ಧ ಚಿನ್ನಕ್ಕೆ 25,265 ಆಗಿತ್ತು. ಇದು 23 ತಿಂಗಳಲ್ಲೇ ಆದ ಅತ್ಯಧಿಕ ಇಳಿಕೆಯಾಗಿದೆ. 2011ರ ಆಗಸ್ಟ್ನಲ್ಲಿ ಚಿನ್ನದ ದರದಲ್ಲಿ ಇಷ್ಟೊಂದು ಕುಸಿತ ಆಗಿತ್ತು.
ಸಂತಸದ ಮುಗುಳ್ನಗೆ
ಷೇರುಪೇಟೆ ಹೂಡಿಕೆದಾರರ ಮುಖದಲ್ಲೂ ಶುಕ್ರವಾರ ಸಂತಸದ ಮುಗುಳ್ನಗೆ. ಯುಎಸ್ ಫೆಡರಲ್ ಹಣಕಾಸು ಉತ್ತೇಜನಾ ಪ್ಯಾಕೇಜ್ ಸದ್ಯದಲ್ಲಿ ಕಡಿತಗೊಳಿಸುವುದಿಲ್ಲ ಎಂಬ ಮುನ್ಸೂಚನೆ ಸಿಕ್ಕಿರುವುದು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಏರಿಕೆಗೆ ಕಾರಣವಾಯಿತು. ಅದರಂತೆ ಸೆನ್ಸೆಕ್ಸ್ 520 ಅಂಕ ಏರಿಕೆಯಾಗಿ ದಿನಾಂತ್ಯಕ್ಕೆ 19,395ರ ಲ್ಲಿ ಕೊನೆಗೊಂಡಿತು. ನಿಫ್ಟಿ 159 ಅಂಕ ಏರಿಕೆಯಾಗಿ, ದಿನದ ಅಂತ್ಯಕ್ಕೆ 5,842ರಲ್ಲಿ ಕೊನೆಗೊಂಡಿತು.
ನವದೆಹಲಿಯಲ್ಲಿ 10 ಗ್ರಾಂ.ಗೆ 1,150 ಇಳಿಕೆ
ದೆಹಲಿಯಲ್ಲಿ 10 ಗ್ರಾಂ.ಗೆ 25,650
ಬೆಂಗಳೂರಲ್ಲಿ 10 ಗ್ರಾಂ.ಗೆ 25,440
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


