ಪ್ರಧಾನ ಸುದ್ದಿ

ಪ್ರಧಾನಿ ಸಿಂಗ್ ಜೇಬಲ್ಲಿ ಹಣವೇ ಇಲ್ಲವಂತೆ!

Published On :

ನವದೆಹಲಿ: ನಮ್ಮ ಪ್ರಧಾನಿ ಮನಮೋಹನ ಸಿಂಗ್ ಅವರ ಒಟ್ಟು ವಾರ್ಷಿಕ ಆದಾಯ ಎಷ್ಟು ಗೊತ್ತಾ? 40,51,964!
ಅಸ್ಸಾನಿಂದ ರಾಜ್ಯಸಭೆಗೆ ಪುನರಾಯ್ಕೆ ಬಯಸಿ ಬುಧವಾರ ನಾಮಪತ್ರ ಸಲ್ಲಿಸಿದ ವೇಳೆ ಸಿಂಗ್ ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ವಿಚಾರ ತಿಳಿಸಿದ್ದಾರೆ. ಆದರೆ, ಸಿಂಗ್ ಅವರ ಕೈಯಲ್ಲಿ ಯಾವುದೇ ನಗದು ಇಲ್ಲ. ಆದರೆ, ಪತ್ನಿ ಕೈಯಲ್ಲಿ 20 ಸಾವಿರ ನಗದು ಇದೆ. ವಿಶೇಷವೆಂದರೆ ದೇಶದ ಪ್ರಧಾನಿಯಾದರೂ ಸಿಂಗ್ ಅವರು ಈಗಲೂ ಇಟ್ಟುಕೊಂಡಿರುವುದು ಒಂದೇ ಕಾರು. ಅದು 1996ನೇ ಮಾಡೆಲ್‌ನ ಮಾರುತಿ- 800. ಇದರ ಮಾರುಕಟ್ಟೆ ಮೌಲ್ಯ 21,033 ಎಂದು ಅವರೇ ಹೇಳಿಕೊಂಡಿದ್ದಾರೆ.
ಚರ ಆಸ್ತಿ: ಸಿಂಗ್ ಅವರು ಒಟ್ಟು 38,763,188 ಚರ ಆಸ್ತಿ ಹೊಂದಿದ್ದಾರೆ. ಇವುಗಳನ್ನು ಐದು ನಿಶ್ಚಿತ ಠೇವಣಿ ಹಾಗೂ ಉಳಿತಾಯ ಖಾತೆಯಲ್ಲಿ ಇಟ್ಟಿದ್ದಾರೆ. ಗುವಾಹಟಿಯಲ್ಲಿ ಉಳಿತಾಯ ಖಾತೆ ಹೊಂದಿದ್ದು, ದೆಹಲಿಯಲ್ಲಿ 8.26 ಲಕ್ಷ ಮೊತ್ತದ ಎನ್‌ಎಸ್‌ಎಸ್ ಸರ್ಟಿಫಿಕೇಟ್ ಹೊಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.