ಪ್ರಧಾನ ಸುದ್ದಿ

ಸಬ್ಸಿಡಿ ನೇರ ವರ್ಗಾವಣೆ: ಜೂ.1ರಿಂದ ಜಾರಿ

Published On :

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಎಲ್‌ಪಿಜಿ ಸಬ್ಸಿಡಿ ಗ್ರಾಹಕರ ಖಾತೆಗೆ ನೇರ ವರ್ಗಾವಣೆ ಯೋಜನೆ ತುಮಕೂರು ಸೇರಿದಂತೆ ದೇಶದ 18 ಜಿಲ್ಲೆಗಳಲ್ಲಿ ಜೂನ್ 1ರಿಂದ ಜಾರಿಯಾಗಲಿದೆ. ಆದರೆ, ಮೈಸೂರಿನಲ್ಲಿ ಮಾತ್ರ ಯೋಜನೆ ಜಾರಿಗೆ ಇನ್ನೂ ಒಂದು ತಿಂಗಳು ಬೇಕು.
 ಯೋಜನೆಯಂತೆ, ಎಲ್‌ಪಿಜಿ ಸಿಲಿಂಡರ್‌ಗೆ ಬುಕ್ ಮಾಡಿರುವ ಗ್ರಾಹಕರ ಖಾತೆಗೆ ನೇರವಾಗಿ 435 ವರ್ಗಾವಣೆಯಾಗಲಿದೆ.
ಚುನಾವಣೆ ಹಿನ್ನೆಲೆಯಲ್ಲಿ ಮುಂದಕ್ಕೆ: ಆರಂಭದಲ್ಲಿ ದೇಶದ 20 ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿತ್ತು. ಆದರೆ, ವಿಧಾನಸಭೆ ಉಪಚುನಾವಣೆಯಿದ್ದ ಕಾರಣ ಕರ್ನಾಟಕದ ಮೈಸೂರು ಹಾಗೂ ಹಿಮಾಚಲಪ್ರದೇಶದ ಮಂಡಿಯಲ್ಲಿ ಒಂದು ತಿಂಗಳ ಬಳಿಕ ಯೋಜನೆ ಜಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊಯ್ಲಿಯಿಂದ ಚಾಲನೆ: ಇದೇ ವೇಳೆ, ತುಮಕೂರಿನಲ್ಲಿ ಕೇಂದ್ರ ತೈಲ ಸಚಿವ ವೀರಪ್ಪಮೊಯ್ಲಿ ಅವರು ಜೂ.1ರಂದು ಯೋಜನೆಗೆ ಚಾಲನೆ ನೀಡಲಿದ್ದಾರೆ. ಅಂತೆಯೇ, ಹೈದರಾಬಾದ್‌ನಲ್ಲಿ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವರಾದ ಪನಬಕ ಲಕ್ಷ್ಮಿ ಅವರು ಯೋಜನೆಗೆ ಹಸಿರು ನಿಶಾನೆ ತೋರಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.