ಸಿಬಿಐ ವಶಕ್ಕೆ ಈಗಲ್ ಟ್ರೇಡರ್ಸ್ ಡೈರಿ
ಕ.ಪ್ರ.ವಾರ್ತೆ ಬಳ್ಳಾರಿ ನ. 5-
ಆದಾಯ ತೆರಿಗೆ (ಐಟಿ) ಇಲಾಖೆ ಹಾಗೂ ಸಿಬಿಐ ಅಧಿಕಾರಿಗಳು ದಾಳಿ ಸಂದರ್ಭದಲ್ಲಿ ದೊರೆತ ಪ್ರತಿಯೊಂದೂ ವಸ್ತು, ಬರವಣಿಗೆ ರೂಪದಲ್ಲಿ ವಶಪಡಿಸಿಕೊಂಡ ದಾಖಲೆಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ನಾಗೇಂದ್ರ ಎಂಬವರಿಗೆ ಸೇರಿದ ಈಗಲ್ ಟ್ರೇಡರ್ಸ್ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ಡೈರಿಯೊಂದನ್ನು ವಶಪಡಿಸಿಕೊಳ್ಳಲಾಗಿತ್ತು. ಆ ಡೈರಿಯಲ್ಲಿ ಯಾವುದೆ ಸಹಿ, ಅಧಿಕೃತ ಮುದ್ರೆಗಳು ಇಲ್ಲ. ಆದರೂ ಡೈರಿಯಲ್ಲಿನ ಕೆಲವು ವಿಷಯವನ್ನು ಸೂಕ್ಷ್ಮವಾಗಿ ಪರಿಗಣಿಸಿ, ಡೈರಿಯ ಬರವಣಿಗೆ ಬಗ್ಗೆ ತನಿಖೆ ನಡೆಸುವ ಸಾಧ್ಯತೆ ಇದೆ.
ಕುತೂಹಲ ಮತ್ತು ಆಶ್ಚರ್ಯದ ವಿಷಯವೆಂದರೆ ಈ ಡೈರಿಯಲ್ಲಿ 'ಎಸ್ಪಿ ಪೇಮೆಂಟ್' ಎಂದು ನಮೂದಾಗಿದ್ದು, ಎಸ್ಪಿ ಹೆಸರು ದಾಖಲಾಗಿಲ್ಲ. 2009-10ರ ಅವಧಿಯ ಆ ಡೈರಿಯಲ್ಲಿ ಈ ಪದ ಬಳಸಲಾಗಿದೆ. ಆದರೆ, ಯಾವ ಎಸ್ಪಿ? ಯಾವ ಜಿಲ್ಲೆಯ ಎಸ್ಪಿ? ಎಂಬುದು ಸ್ಪಷ್ಟವಾಗಿಲ್ಲ. ಇದೇ ಪದದಿಂದ ಈಗ ಸಿಬಿಐ ತನ್ನ ತನಿಖೆಯನ್ನು ವಿಸ್ತರಿಸುವ ಸಾಧ್ಯತೆ ಇದೆ.
ಎಸ್‌ಪಿ ಎಂಬ ಹೆಸರಿನ ಯಾವುದೇ ಗಣಿ ಕಂಪನಿಯಾಗಲಿ, ಟ್ರೇಡರ್ಸ್ ಆಗಲಿ ಗಣಿ ವಲಯದಲ್ಲಿಲ್ಲ. ಆದರೆ ಪ್ರಶ್ನೆ ಇರುವುದು ಈ ಎಸ್ಪಿ ಎಂದರೆ ಯಾರು? ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇರಬಹುದೆಂಬ ಅನುಮಾನವೂ ಇದೆ.
ಎಸ್ಪಿ ಪೇಮೆಂಟ್ 26 ಲಕ್ಷ: ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವ ದಾಖಲೆಗಳನ್ನು ಸಿಬಿಐ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಈಗಲ್ ಟ್ರೇಡರ್ಸ್ ಕೋಟ್ಯಂತರ ರುಪಾಯಿ ವ್ಯವಹಾರ ಮಾಡಿರುವುದು, ಅದಿರು ಮಾರಿರುವ ವಿಷಯ ಸೇರಿದಂತೆ ಹಲವಾರು ಮಾಹಿತಿಗಳನ್ನು ಈ ಡೈರಿಯಲ್ಲಿ ರಫ್ ಆಗಿ ಬರೆಯಲಾಗಿದೆ. ಆ ಡೈರಿಯಲ್ಲಿ ಎಸ್ಪಿ ಪೇಮೆಂಟ್ ಎಂದು ಬರೆದು ಅ.9, 2009, 2010 ಮಾರ್ಚ್‌ವರೆಗೆ 3.25 ಲಕ್ಷ ್ಢ 8.26 ಲಕ್ಷ ಎಂದು ನಮೂದಿಸಿದ್ದಾರೆ. ಈ ಅವಧಿಯಲ್ಲಿಯೇ ಬೇಲೆಕೇರಿಗೆ ಅದಿರು ಸಾಗಾಣೆ ಉತ್ತುಂಗದಲ್ಲಿತ್ತು. ಆಗಲೇ ಎಸ್ಪಿ ಪೇಮೆಂಟ್ ಎಂದು ಬರೆದಿರುವುದು ಮತ್ತಷ್ಟು ಕುತೂಹಲ, ಅನುಮಾನಗಳಿಗೆ ಎಡೆ ಕೊಟ್ಟಿದೆ.
ಇತರರಿಗೆ ನೀಡಿದ ಹಣದ ಮಾಹಿತಿ: ಸಣ್ಣದೊಂದು ಮಾಹಿತಿಯನ್ನು ಅಗೆದು ನೋಡುವ ಸಿಬಿಐ ಅಧಿಕಾರಿಗಳು, ಬೇಲೆಕೇರಿ ಅದಿರು ಪ್ರಕರಣ, ಅಕ್ರಮ ಗಣಿಗಾರಿಕೆ ಆರೋಪ ಪ್ರಕರಣವನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ದಾಳಿ ಸಂದರ್ಭದಲ್ಲಿ ಸಿಕ್ಕಿರುವ 6 ಪುಟಗಳ ಡೈರಿಯಲ್ಲಿನ ಮಾಹಿತಿ ಆಧರಿಸಿ ಆ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಎಸ್ಪಿಗಳನ್ನು ತನಿಖೆ ವ್ಯಾಪ್ತಿಗೆ ಒಳಪಡಿಸಿದರೂ ಆಶ್ಚರ್ಯವಿಲ್ಲ.
ಡೈರಿಯಲ್ಲಿ ಮಹೇಶ್ ಮತ್ತು ನಾಗರಾಜ್‌ಗೆ 2010ರಲ್ಲಿ ತಲಾ 4.59 ಕೋಟಿ ಸಂದಾಯ ಮಾಡಲಾಗಿದೆ ಎಂದು ನಮೂದಿಸಲಾಗಿದೆ. ಇನ್ನು ಪಿ.ಕೆ. ಹಳ್ಳಿ ಸ್ಟಾಕ್‌ಯಾರ್ಡ್, ಎಸ್‌ವಿಕೆ, ಎಸ್‌ಕೆಎಂಪಿಎಲ್, ವಿಎಂಪಿಎಲ್ ಎಂದು ನಮೂದಿಸಿದ್ದು, ಅದಿರು ಪಡೆದಿರುವ ಬಗ್ಗೆ ಬರೆದಿದ್ದಾರೆ. ಇದಕ್ಕೆಲ್ಲ ಯಾವುದೇ ಇತರೆ ಅಧಿಕೃತದಾಖಲೆಗಳೂ ಇಲ್ಲ. ಆದರೂ ಈ ಬಗ್ಗೆ ಸಿಬಿಐ ತನಿಖೆ ನಡೆಸಿ, ಸತ್ಯಾಸತ್ಯತೆ ತಿಳಿಯುವ ಪ್ರಯತ್ನಕ್ಕೆ ಮುಂದಾಗುತ್ತಿದೆ.
ಕುತೂಹಲ ಕೆರಳಿಸಿದ ಎಸ್ಪಿ ಪೇಮೆಂಟ್: 'ಬೆರಳು ತೋರಿದರೆ ಹಸ್ತ ನುಂಗುವ' ರೀತಿಯಲ್ಲಿ ಸಿಬಿಐ ತನಿಖೆ ಸಾಗಿದೆ. ಚಿಕ್ಕದೊಂದು ಮಾಹಿತಿ ಸಿಕ್ಕರೆ ಅದೇ ಮಾಹಿತಿಯ ಜಾಡು ಹಿಡಿದು ಸಿಬಿಐ ತನಿಖೆ ನಡೆಸುತ್ತಿದೆ. ಇದೀಗ ಡೈರಿಯಲ್ಲಿನ ರಫ್ ಆದ ಬರವಣಿಗೆ ಮಾಹಿತಿಯನ್ನೂ ಸಿಬಿಐ ಗಂಭೀರವಾಗಿ ಪರಿಗಣಿಸಿದೆ. ಇದರಿಂದ ದುಡ್ಡು ಕೊಟ್ಟವರು ಹಾಗೂ ಪಡೆದವರನ್ನು ವಿಚಾರಣೆ ನಡೆಸಿ, ತನಿಖೆಗೆ ಒಳಪಡಿಸಲಿದೆ.
ಹಣ ಕೊಟ್ಟವರು ಈಗಾಗಲೇ ಜೈಲಿನಲ್ಲಿದ್ದರೆ, ಅವರಿಂದ ಸಿಬಿಐ ಈ ನಿಟ್ಟಿನಲ್ಲಿ ಮಾಹಿತಿ ಸಂಗ್ರಹಿಸಿರಬಹುದು. ಆದರೆ, ಹಣ ಪಡೆದವರಿಂದ ಮಾಹಿತಿ ಸಂಗ್ರಹಿಸಲು ಅವರನ್ನು ತನಿಖೆಗೆ ಒಳಪಡಿಸಬಹುದು. ಡೈರಿಯೊಳಗಿನ ಎಸ್ಪಿ ಪೇಮೆಂಟ್ ಪದದ ಸತ್ಯಾಸತ್ಯತೆ ತನಿಖೆಯಿಂದಲೇ ಬಹಿರಂಗಗೊಳ್ಳಬೇಕಿದೆ.
- ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

