ಪ್ರಧಾನ ಸುದ್ದಿ

ಹಾವೇರಿ: ಮೃತರ ಗುರುತು ಪತ್ತೆ

Published On :

ಹುಬ್ಬಳ್ಳಿ: ಹಾವೇರಿ ಬಳಿ ಸಂಭವಿಸಿದ ವೋಲ್ವೋ ಬಸ್ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಗುರುತು ಪತ್ತೆಯಾಗಿದೆ. ಶುಕ್ರವಾರ ಹುಬ್ಬಳ್ಳಿಯ ಕಿಮ್ಸ್‌ಗೆ ಆಗಮಿಸಿದ್ದ ಮೃತರ ಸಂಬಂಧಿಕರು ಮೃತ ದೇಹಗಳ ಗುರುತು ಪತ್ತೆಗಾಗಿ ತಮ್ಮ ರಕ್ತದ ಮಾದರಿ ನೀಡಿದ್ದಾರೆ.
ಮುಂಬೈನ ಪೀಠೋಪಕರಣ ವ್ಯಾಪಾರಿ ಖಲೀಂ ಅಹ್ಮದ್ ಖಾನ್, ಶಮೀಮ್ ಬಾನು, ಅಮನ್ ಖಲೀಮ್ ಖಾನ್, ನೌಮನ್ ಖಲೀಮ್ ಖಾನ್, ಮಹ್ಮದ್ ಕೈಫ್ ಖಲೀಂ ಅಪಘಾತದಲ್ಲಿ ಮೃತಪಟ್ಟ ಒಂದೇ ಕುಟುಂಬದವರು. ಅಲ್ಲದೇ ಸೂರತ್ ಟೆಕ್ಸ್‌ಟೈಲ್ಸ್ ಎಂಜಿನಿಯರ್ ಹೇಮಂತ್ ಹಾಗೂ ನಯಾಝ್ ಪಾಷಾ ಎಂದು ಗುರುತಿಸಲಾಗಿದೆ.
ಮೃತ ಖಲೀಂ ಅಹ್ಮದ್ ಖಾನ್ ಅವರ ಸಂಬಂಧಿ ಫೈರೋಜ್‌ಖಾನ್ ಅವರು ಮೃತರ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರೆ ದಾಖಲೆಗಳನ್ನು ಗುರುತು ಪತ್ತೆಗೆ ತಂದಿದ್ದರು. ಟೆಕ್ಸ್‌ಟೈಲ್ ಎಂಜಿನಿಯರ್ ಹೇಮಂತ್ ಅವರ ಸಹೋದರ ಶಶಿಕಾಂತ್ ಮೃತ ದೇಹದ ಹಸ್ತಾಂತರಕ್ಕೆ ದಾಖಲೆಗಳನ್ನು ಸಲ್ಲಿಸಿದರು. ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿರುವ ಮೃತ ದೇಹಗಳನ್ನೂ ಗುರುತಿಸುತ್ತೇವೆ. ಆದ್ದರಿಂದ ದೇಹಗಳನ್ನು ಹಸ್ತಾಂತರಿಸಿ ಎಂದು ಕೆಲವು ಸಂಬಂಧಿಗಳು ಕೇಳಿಕೊಂಡಿದ್ದಾರೆ. ಆದರೆ, ಪೊಲೀಸರು ಅಧಿಕೃತವಾಗಿ ಮೃತ ದೇಹ ಗುರುತಿಸುವ ತನಕ ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ಕಿಮ್ಸ್ ನಿರ್ದೇಶಕಿ ಡಾ. ವಸಂತಾ ಕಾಮತ್ ಸ್ಪಷ್ಟಪಡಿಸಿದ್ದಾರೆ. 

ಕುಣಿಮೆಳ್ಳಳ್ಳಿಗೆ ತಜ್ಞರ ಭೇಟಿ, ಮಾಹಿತಿ ಸಂಗ್ರಹ
ಹಾವೇರಿ:
ಇಲ್ಲಿಗೆ ಸಮೀಪದ ಕುಣಿಮೆಳ್ಳಳ್ಳಿ ಬಳಿ ರಾ.ಹೆ. 4ರಲ್ಲಿ ಗುರುವಾರ ಸಂಭವಿಸಿದ ನ್ಯಾಷನಲ್ ಟ್ರಾವೆಲ್ಸ್‌ಗೆ ಸೇರಿದ ವೋಲ್ವೋ ಬಸ್ ದುರಂತ ಸ್ಥಳವನ್ನು ಪರಿಶೀಲಿಸಲು ನ್ಯಾಟ್ರಿಪ್ (ನ್ಯಾಷನಲ್ ಅಟೋಮೋಟಿವ್ ಟೆಸ್ಟಿಂಗ್ ಇನ್‌ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್) ತಾಂತ್ರಿಕ ತಜ್ಞರ ತಂಡ ಶುಕ್ರವಾರ ಭೇಟಿ ನೀಡಿ ಮಾಹಿತಿ ಕಲೆ ಹಾಕುವ ಕಾರ್ಯ ಆರಂಭಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.