ಪ್ರಧಾನ ಸುದ್ದಿ

ಸೆಮಿ ಫೈನಲ್

ಮುಂದಿನ ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ದಿನಾಂಕ ಪ್ರಕಟವಾಗಿದೆ.

ಸೆಮಿ ಫೈನಲ್
Published On :

ಪಿಟಿಐ  ನವದೆಹಲಿ  ಅ.4-
ಮುಂದಿನ ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ದಿನಾಂಕ ಪ್ರಕಟವಾಗಿದೆ. ತಕ್ಷಣದಿಂದಲೇ ಆ ರಾಜ್ಯಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ನಕ್ಸಲ್ ಪೀಡಿತ ರಾಜ್ಯವಾಗಿರುವ ಛತ್ತೀಸ್‌ಗಡದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಿಜೋರಂಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ ಎಂಟರಂದು ಮತ ಎಣಿಕೆ ನಡೆಯಲಿದೆ.
ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್ ಶುಕ್ರವಾರ ನವದೆಹಲಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಈ ಚುನಾವಣೆಯಲ್ಲಿ ಮತದಾರರಿಗೆ ಅಭ್ಯರ್ಥಿಗಳನ್ನು ತಿರಸ್ಕರಿಸುವ ಆಯ್ಕೆಯನ್ನು ವಿದ್ಯುನ್ಮಾನ ಮತಯಂತ್ರದಲ್ಲಿ ಅಳವಡಿಸಲಾಗುವುದು ಎಂದು ಸಂಪತ್ ತಿಳಿಸಿದರು.

11 ಕೋಟಿ ಮತದಾರರು: ಐದು ರಾಜ್ಯಗಳಲ್ಲಿ 11 ಕೋಟಿ ಮತದಾರರು ಈ ಬಾರಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. 630 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ.

ಯಾವಾಗ ಎಲ್ಲಿ?: ಸದ್ಯ ಬಿಜೆಪಿ ಆಡಳಿತದಲ್ಲಿರುವ ಮಧ್ಯಪ್ರದೇಶದಲ್ಲಿ ನ.25ರಂದು ಒಂದೇ ಹಂತದ ಚುನಾವಣೆ ನಡೆಯಲಿದೆ. ಇದಕ್ಕಾಗಿ ನ.1ರಂದು ಅಧಿಸೂಚನೆ  ಹೊರಬೀಳಲಿದೆ. ನಾಮಪತ್ರ ಸಲ್ಲಿಕೆಗೆ ನ.8 ಕೊನೆಯ ದಿನವಾಗಿದ್ದು, ಪರಿಶೀಲನೆ ನ.9ರಂದು ನಡೆಯಲಿದೆ. ಹಿಂಪಡೆಯಲು ನ.11ರಂದು ಅಂತಿಮ ದಿನ.
ರಾಜಸ್ಥಾನದಲ್ಲಿ ಡಿ.1ರಂದು ಮತದಾನ ನಡೆಯಲಿದೆ. ಇದಕ್ಕಾಗಿ ನ.5ರಂದು ಅಧಿಸೂಚನೆ ಹೊರಬೀಳುತ್ತದೆ. ನ.12 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಪರಿಶೀಲನೆ ನ.13, ಹಾಗೂ ಹಿಂಪಡೆಯಲು ನ.16 ಕೊನೆ ದಿನವಾಗಿರುತ್ತದೆ.  
ದೆಹಲಿಯಲ್ಲಿ ಮತ್ತು ಮಿಜೋರಮ್‌ನಲ್ಲಿ ಡಿ.4 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಎರಡೂ ರಾಜ್ಯಗಳಲ್ಲಿ ಅಧಿಸೂಚನೆ ನ.9ರಂದು ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಕೆಗೆ ನ.16 ಕೊನೆಯ ದಿನ. ಪರಿಶೀಲನೆ ನ.18ರಂದು ನಡೆಸಲಾಗುತ್ತದೆ. ಚುನಾವಣಾ ಕಣದಿಂದ ಹಿಂದೆ ಸರಿಯಲು ನ.20 ಅಂತಿಮ ದಿನ.
ಛತ್ತೀಸ್‌ಗಡದಲ್ಲಿ 2 ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಚುನಾವಣೆ 18 ಕ್ಷೇತ್ರಗಳಲ್ಲಿ ನ.11ರಂದು ನಡೆಯಲಿದೆ. ಇದಕ್ಕಾಗಿ ಅ.18ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಕೆಗೆ ಅ.25 ಕೊನೆಯ ದಿನ. ಪರಿಶೀಲನೆ 26ರಂದು ನಡೆಯಲಿದ್ದು, ಹಿಂಪಡೆಯಲು ಅ.28 ಅಂತಿಮ ದಿನ. 2ನೇ ಹಂತದ ಚುನಾವಣೆ ನ.19ರಂದು ನಡೆಯಲಿದ್ದು, ಇದಕ್ಕಾಗಿ ಅ.25ರಂದು ಅಧಿಸೂಚನೆ ಪ್ರಕಟಿಸಲಾಗುತ್ತದೆ.  ನಾಮಪತ್ರ ಸಲ್ಲಿಕೆಗೆ ನ.1 ಕೊನೆಯ ದಿನ. ಪರಿಶೀಲನೆ ನ.2ರಂದು ನಡೆಯಲಿದ್ದು, ಹಿಂಪಡೆಯಲು ನ.4 ಅಂತಿಮ ದಿನವಾಗಿರುತ್ತದೆ..25ರಂದು ಪ್ರಕಟಣೆ ಹೊರಬೀಳಲಿದೆ. ಅ.26ರಂದು ಪರಿಶೀಲನೆ ನಡೆಯಲಿದ್ದು, ಅ.28ರಂದು ನಾಮಪತ್ರ ಹಿಂಪಡೆಯಲು ಕೊನೆಯದಿನ. ನ.19ರಂದು 2ನೇ ಹಂತದ ಚುನಾವಣೆ ನಡೆಯಲಿದೆ. ಅ.25ರಂದು ನಾಮಪತ್ರ ಸಲ್ಲಿಸಲು ಶುರುವಾಗಲಿದೆ. ಅದೇ ದಿನ ಪ್ರಕಟಣೆ ಹೊರಡಿಸಲಾಗುತ್ತದೆ. ಹಿಂಪಡೆಯಲು ನ.1 ಕೊನೆಯ ದಿನ.

ದೃಢೀಕರಣ ಕೊಡಲು ಸಾಧ್ಯವೇ?
ಚುನಾವಣೆಯಲ್ಲಿ ಪ್ರತಿಯೊಂದು ಮತ ಚಲಾವಣೆಯಾದ ಬಳಿಕ ಅದರ ಬಗ್ಗೆ ದೃಢೀಕರಣ ಕೊಡುವಂಥ ವ್ಯವಸ್ಥೆ (ವಿ.ವಿ.ಪಿ.ಎ.ಟಿ) ಜಾರಿಗೊಳಿಸಲು ಸಾಧ್ಯವೇ ಎಂದು ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ಪ್ರಶ್ನಿಸಿದೆ. ಐದು ರಾಜ್ಯಗಳ ವಿಧಾನಸಭೆ ಅಥವಾ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅದನ್ನು ಅನುಷ್ಠಾನಕ್ಕೆ ತರಬೇಕು ಎಂದು ಕೋರ್ಟ್ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ಮತ್ತು ನ್ಯಾ.ರಂಜನ್ ಗೋಗೊಯ್ ನೇತೃತ್ವದ ಪೀಠ ಚುನಾವಣಾ ಆಯೋಗಕ್ಕೆ ಉತ್ತರಿಸಲು ಹತ್ತು ದಿನಗಳ ಸಮಯಾವಕಾಶ ನೀಡಿದೆ. ಈ ವರ್ಷದ ಫೆಬ್ರವರಿಯಲ್ಲಿ ನಾಗಾಲ್ಯಾಂಡ್ ವಿಧಾನಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಜಾರಿಗೊಳಿಸಲಾಗಿದ್ದ ಈ ವ್ಯವಸ್ಥೆ ಉತ್ತಮ ಫಲಿತಾಂಶ ನೀಡಿತ್ತು.

ಜಾಗೃತಿ ವೀಕ್ಷಕರು
ಈ  ಬಾರಿಯ ಚುನಾವಣೆಯಲ್ಲಿ ಹೊಸತೊಂದು ಪ್ರಯೋಗ ಮಾಡಲು ಆಯೋಗ ಮುಂದಾಗಿದೆ. ಚುನಾವಣಾ ವೀಕ್ಷಕರು ಇರುವಂತೆ ಚುನಾವಣಾ ಪ್ರಕ್ರಿಯೆಯ ನಿರ್ವಹಣೆ ಮೇಲ್ವಿಚಾರಣೆಗಾಗಿ ವೀಕ್ಷಕರನ್ನು ನೇಮಿಸಲಾಗುತ್ತದೆ. ಜನರು ಹೆಚ್ಚಿನ ಪ್ರಮಾಣದಲ್ಲಿ ಬಂದು ಮತಹಾಕುವಂತೆಯೂ ಮನವೊಲಿಸಲಿದ್ದಾರೆ. ಜತೆಗೆ 'ಪಾವತಿ ಸುದ್ದಿ'ಯ ಮೇಲೂ ಅವರು ಕಣ್ಣಿಡಲಿದ್ದಾರೆ.

ಆರ್‌ಟಿಪಿಎಸ್: 7ನೇ ಘಟಕ ಸ್ಥಗಿತ
ರಾಯಚೂರು: ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 7ನೇ ಘಟಕವು ತಾಂತ್ರಿಕ ದೋಷದಿಂದ ಶುಕ್ರವಾರ ಬೆಳಗ್ಗೆ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದೆ. ವಿದ್ಯುತ್ ಕೇಂದ್ರದ 7ನೇ ಘಟಕದ ಜನರೇಟರ್ ಟ್ರಾನ್ಸ್‌ಫಾರ್ಮರ್‌ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದ್ದು, ವಿದ್ಯುತ್ ಕೇಂದ್ರದಲ್ಲಿ ಈಗಾಗಲೇ 8ನೇ ಘಟಕವು ತಾಂತ್ರಿಕ ದೋಷದಿಂದ ಉತ್ಪಾದನೆ ಸ್ಥಗಿತಗೊಳಿಸಿದೆ. 2ನೇ ಘಟಕವು ವಾರ್ಷಿಕ ದುರಸ್ತಿಯಲ್ಲಿದೆ. ಹೀಗಾಗಿ ಸದ್ಯ ವಿದ್ಯುತ್ ಕೇಂದ್ರದ ಇನ್ನುಳಿದ ಐದು ಘಟಕಗಳಿಂದ ಶುಕ್ರವಾರ ಬೆಳಗ್ಗೆ ವರೆಗೆ 20ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದಿಸಲಾಗಿದೆ ಎಂದು ಆರ್ಟಿಪಿಎಸ್ ಮೂಲಗಳು ತಿಳಿಸಿವೆ.

ತಿರಸ್ಕಾರದ ಹಕ್ಕು
ಕಳೆದ ತಿಂಗಳ 27ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಈ ಬಾರಿಯ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿ ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕು (ನನ್ ಆಫ್ ದ ಎಬವ್) ಅನ್ನು ಜಾರಿಗೊಳಿಸಲು ಚುನಾವಣಾ ಆಯೋಗ ಮುಂದಾಗಿದೆ.  ಇದುವರೆಗಿನ ಚುನಾವಣೆಯಲ್ಲಿ ಮತಪತ್ರಗಳಲ್ಲಿ ಅಥವಾ ಇವಿಎಂಗಳಲ್ಲಿ ಮತದಾರರಿಗೆ ಈ ಆಯ್ಕೆ ಇರಲಿಲ್ಲ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಮತಯಂತ್ರಗಳ ಕೊನೆಯಲ್ಲಿ  'ನನ್ನ ಆಯ್ಕೆ ಯಾರೂ ಅಲ್ಲ' ಎಂದು ಮುದ್ರಿತವಾಗಿರುತ್ತದೆ. ಅಭ್ಯರ್ಥಿಗಳ ಪೈಕಿ ಯಾರೂ ಇಷ್ಟವಾಗದಿದ್ದರೆ ಮತದಾರ ಈ ಬಟನ್ ಒತ್ತಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.