ಜಬ್ಬರಿಸಿದ ಜವರಾಯ

ಮೆಹಬೂಬ್ನಗರ/ಹೈದರಾಬಾದ್/ನವದೆಹಲಿ:
ಬೆಂಗಳೂರಿನಿಂದ ಹೈದರಾಬಾದ್ಗೆ ಹೊರಟಿದ್ದ ಜಬ್ಬಾರ್ ಟ್ರಾವೆಲ್ಸ್ಗೆ ಸೇರಿದ ವೋಲ್ವೋ ಬಸ್ ಮೆಹಬೂಬ್ನಗರ ಸಮೀಪದ ಪಾಲೇಂ ಎಂಬಲ್ಲಿ ದುರಂತಕ್ಕೀಡಾಗಿ 44 ಮಂದಿ ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಇವರಲ್ಲಿ ಕರ್ನಾಟಕದ 24 ಮಂದಿ ಸೇರಿದ್ದಾರೆ. ದುರಂತದಲ್ಲಿ ಚಾಲಕ ಫಿರೋಜ್ ಖಾನ್ ಮತ್ತು ಕ್ಲೀನರ್ ಅಯಾಜ್ ಸುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅವರೊಂದಿಗೆ ಮೂವರು ಪ್ರಯಾಣಿಕರೂ ಪಾರಾಗಿದ್ದಾರೆ. ನತದೃಷ್ಟ ಬಸ್ನಲ್ಲಿ ಒಟ್ಟು 52 ಮಂದಿ ಇದ್ದರು.
ಎಲ್ಲರೂ ನಿದ್ರಿಸುತ್ತಿದ್ದರು: ದುರಂತ ನಡೆದ ಸಂದರ್ಭದಲ್ಲಿ ಪ್ರಯಾಣಿಕರೆಲ್ಲರೂ ನಿದ್ರಿಸುತ್ತಿದ್ದರೆಂದು ಕ್ಲೀನರ್ ಅಯಾಜ್ ಪೊಲೀಸರಿಗೆ ತಿಳಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹೈದರಾಬಾದ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ತಮ್ಮನ್ನು ಚಾಲಕ ಬಸ್ನಿಂದ ಎಳೆದು ಹೊರ ತೆಗೆದರು ಎಂದು ಕ್ಲೀನರ್ ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಎಚ್ಚರಗೊಂಡ ಪ್ರಯಾಣಿಕರಿಗೆ ಏನಾಗಿದೆ ಎಂದು ತಿಳಿಯುವಷ್ಟರಲ್ಲಿ ಬೆಂಕಿ ಬಸ್ಗೆ ವ್ಯಾಪಿಸಿ ಬಿಟ್ಟಿತ್ತು ಎಂದು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ. ಘಟನೆ ನಡೆದ ಹೊತ್ತಿನಲ್ಲಿ ಪ್ರಯಾಣಿಕರೆಲ್ಲ ನಿದ್ರಿಸುತ್ತಿದ್ದರು ಎಂದಿದ್ದಾರೆ.
ಗುರುತಿಗೆ ಡಿಎನ್ಎ ಪರೀಕ್ಷೆ
ಬೆಂಕಿಯಿಂದ ಸುಟ್ಟು ಕರಕಲಾಗಿರುವ ಪ್ರಯಾಣಿಕರಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಯಾರು ಎಂದು ಗುರುತು ಹಿಡಿಯುವುದೇ ಕಷ್ಟ ಎಂದು ಮೆಹಬೂಬ್ನಗರ ಜಿಲ್ಲಾಧಿಕಾರಿ ಗಿರಿಜಾ ಶಂಕರ್ ತಿಳಿಸಿದ್ದಾರೆ. ಅದಕ್ಕಾಗಿ ಡಿಎನ್ಎ ಪರೀಕ್ಷೆ ಮತ್ತು ಹತ್ತಿರದ ಬಂಧುಗಳ ರಕ್ತ ಪರೀಕ್ಷೆ ನಡೆಸಿ ಅಸುನೀಗಿದವರ ವಿವರ ಪತ್ತೆ ಹಚ್ಚುವ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಮೃತರ ಸಂಬಂಧಿಕರಿಗೆ ಹೈದರಾಬಾದ್ಗೆ ಬರುವಂತೆ ಸೂಚನೆ ನೀಡಲಾಗಿದ್ದು, ಅವರು ಬಂದ ಬಳಿಕ ಡಿಎನ್ಎ ಪರಿಕ್ಷೆ ನಡೆಸಿ ಶವಗಳನ್ನು ಹಸ್ತಾಂತರಿಸಲಾಗುತ್ತದೆ. ಇದೇ ವೇಳೆ ರಾಜ್ಯದ 24 ಮಂದಿಯನ್ನು ಗುರುತಿಸುವುದೂ ಕಷ್ಟವಾಗಿದೆ. ಆರ್ಟಿಓ ಮೂಲಗಳು 24 ಮಂದಿ ಮೃತರಾಗಿದ್ದಾರೆ ಎಂದು ಹೇಳಿದ್ದು, ಇವರ ವಿವರ ಬಹಿರಂಗಪಡಿಸಿಲ್ಲ.
ಸಹಾಯವಾಣಿ
09740810006
ಶಿವರಾಜ್ ಪಾಟೀಲ್,
ಪ್ರಾದೇಶಿಕ ಸಾರಿಗೆ
ಆಯುಕ್ತರು
ಪಕ್ಷಿ ನೋಟ
ಎಲ್ಲಿ? ಆಂಧ್ರದ ಮೆಹಬೂಬ್ನಗರದ ಪಾಲೆಂನಲ್ಲಿ
ಹೇಗೆ? ವೇಗವಾಗಿ ಚಲಿಸುತ್ತಿದ್ದ ಬಸ್ ರಸ್ತೆ ವಿಭಜಕಕ್ಕೆ ಡಿಕ್ಕಿ
ಸಾವು ನೋವು? 44 ಮಂದಿ ಸಾವು, 5 ಮಂದಿ ಗಾಯಗೊಂಡು ಪಾರು
ಎಲ್ಲಿಂದ ಎಲ್ಲಿಗೆ ಬೆಂಗಳೂರಿನಿಂದ ಹೈದರಾಬಾದ್ಗೆ ಹೊರಟಿತ್ತು
ಕಾರಣವೇನು? ಅತಿ ವೇಗದ ಚಾಲನೆ (ಪೊಲೀಸರ ಹೇಳಿಕೆ)
ಉಲ್ಲಂಘನೆ
ಸಾಮರ್ಥ್ಯ 432. ಆದರೆ ಬಸ್ನಲ್ಲಿದ್ದ ಪ್ರಯಾಣಿಕರ ಸಂಖ್ಯೆ 50ಕ್ಕೂ ಮೀರಿತ್ತು. ಟ್ರಾವೆಲ್ಸ್ ಕಚೇರಿಯಲ್ಲಿ 44 ಪ್ರಯಾಣಿಕರು ಎಂದು ನಮೂದಿಸಲಾಗಿದೆ.
'ಒಪ್ಪಂದದ ಮೇರೆ'ಗೆ ಮಾತ್ರ ಬಳಸಲು ಕರ್ನಾಟಕ ಸಾರಿಗೆ ಪ್ರಾಧಿಕಾರ ಅನುಮತಿ ನೀಡಿತ್ತು. ಆದರೆ, ಪ್ರಯಾಣಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುವ ಅನುಮತಿ ಹೊಂದಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


