ಪ್ರಧಾನ ಸುದ್ದಿ

ಯುದ್ಧಕ್ಕೆ ರೆಡಿ ಸಂಸತ್ ಒಪ್ಪಲಿ

ಯುದ್ಧಕ್ಕೆ ರೆಡಿ ಸಂಸತ್ ಒಪ್ಪಲಿ
Published On :

ವಾಷಿಂಗ್ಟನ್: ಸಿರಿಯಾ ಮೇಲೆ ದಾಳಿ ಮಾಡಿಯೇ ತೀರುವುದಾಗಿ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಒಬಾಮ,  ಅಚ್ಚರಿಯ ಬೆಳವಣಿಗೆಯೆಂಬಂತೆ ಈಗ ದಾಳಿಗೆ ಕಾಂಗ್ರೆಸ್‌ನ ಒಪ್ಪಿಗೆ ಬೇಕೆಂದು ಕೋರಿದ್ದಾರೆ.
ತುಂಬಾ ಎಚ್ಚರಿಕೆಯ ಪರಿಶೀಲನೆಯ ಬಳಿಕ ನಾನು ಸಿರಿಯಾ ವಿರುದ್ಧ ಸೀಮಿತ ಸೇನಾ ದಾಳಿ ನಡೆಸಲು ನಿರ್ಧರಿಸಿದ್ದೇನೆ. ಆದರೆ, ಅದಕ್ಕೆ ಅಮೆರಿಕ ಕಾಂಗ್ರೆಸ್ ಸದಸ್ಯರು ಬೆಂಬಲ ನೀಡಬೇಕು ಎಂದು ಒಬಾಮ ಶನಿವಾರ ವೈಟ್‌ಹೌಸ್‌ನಲ್ಲಿ ಮಾಡಿದ ಭಾಷಣದ ವೇಳೆ ಕೇಳಿಕೊಂಡಿದ್ದಾರೆ. ಕಾಂಗ್ರೆಸ್ ಸದಸ್ಯರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಿರಿಯಾ ಮೇಲಿನ ದಾಳಿಗೆ ಒಪ್ಪಿಗೆ ನೀಡಬೇಕು ಎಂದೂ ಕೋರಿದ್ದಾರೆ. ಬಳಿಕ ದಾಳಿಗೆ ಸಂಬಂಧಿಸಿದ ಕರಡು ನಿರ್ಣಯವನ್ನು ವೈಟ್‌ಹೌಸ್ ಕಾಂಗ್ರೆಸ್‌ಗೆ ಕಳುಹಿಸಿಕೊಟ್ಟಿತು.
ಕಾಂಗ್ರೆಸ್ ಬೆಂಬಲ ಕೋರಿದ ಒಬಾಮ ಅವರ ನಡೆಯನ್ನು ಸ್ವಾಗತಿಸಿರುವ ಅಮೆರಿಕದ ಕೆಲವು ಉನ್ನತ ಜನಪ್ರತಿನಿಧಿಗಳು, ತಾವು ಒಬಾಮಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.  ಏತನ್ಮಧ್ಯೆ, ಸಿರಿಯಾ ವಿರುದ್ಧ ದಾಳಿ ನಡೆಸುವ ಬ್ರಿಟನ್ ಪ್ರಧಾನಿ ಕೆಮೆರಾನ್ ನಿರ್ಧಾರಕ್ಕೆ ಬ್ರಿಟನ್ ಸಂಸತ್‌ನಲ್ಲಿ ಬೆಂಬಲ ದೊರೆಯದಿರುವುದು ಯುದ್ಧ-ವಿರೋಧಿ ನಾಗರಿಕರಿಗೆ ಖುಷಿ ತಂದಿದೆ. ಈ ಹಿನ್ನೆಲೆಯಲ್ಲಿ ಅವರು ಭಾನುವಾರ ಲಂಡನ್‌ನ ಟ್ರಫಲ್ಗಾರ್ ಸ್ಕ್ವೇರ್‌ನಲ್ಲಿ ರ್ಯಾಲಿ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.