ಆರು ಪಕ್ಷಗಳಿಗೆ 3,674 ಕೋಟಿ ಬೇನಾಮಿ ದೇಣಿಗೆ
ನವದೆಹಲಿ: ಇದು ಅಚ್ಚರಿ ಎನಿಸಿದರೂ ಸತ್ಯ. ಕಳೆದ 8 ವರ್ಷಗಳಲ್ಲಿ ದೇಶದ 6 ರಾಜಕೀಯ ಪಕ್ಷಗಳಿಗೆ ಬೇನಾಮಿಯಾಗಿ ಹರಿದು ಬಂದಿರುವ ಹಣ ಬರೋಬ್ಬರಿ 3674 ಕೋಟಿ!
ಈ ಅವಧಿಯಲ್ಲಿ ಈ ಆರೂ ರಾಜಕೀಯ ಪಕ್ಷಗಳಿಗೆ ಕೊಡುಗೆ ರೂಪದಲ್ಲಿ ಬಂದಿರುವ ಹಣ 4895 ಕೋಟಿ. ಅದರ ಮುಕ್ಕಾಲು ಭಾಗದಷ್ಟು ಹಣ, ಅಂದರೆ 3674 ಕೋಟಿಯಷ್ಟು ಹಣ ಬೇನಾಮಿ ರೂಪದಲ್ಲಿ ಪಕ್ಷಗಳ ಒಡಲು ಸೇರಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್(ಎಡಿಆರ್) ಈ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಕೇವಲ ಶೇ.8.9 ರಷ್ಟು ಹಣಕ್ಕೆ ಮೂಲ ಪತ್ತೆಯಾಗಿದೆ. ಶೇ.2.1 ರಷ್ಟು ಹಣ ಚುನಾವಣಾ ಟ್ರಸ್ಟ್‌ಗಳಿಂದ ಬಂದಿದೆ. ಉಳಿದ ಹಣ ಖಾಸಗಿ ಕಂಪನಿಗಳು ಕಟ್ಟಿಕೊಂಡಿರುವ ಟ್ರಸ್ಟ್‌ಗಳಿಂದ ಪಕ್ಷಗಳಿಗೆ ಹೋಗಿದೆ. ಆದರೆ ಉಳಿದ ಶೇ.75 ರಷ್ಟು ಹಣಕ್ಕೆ ಮಾತ್ರ ಮೂಲವೇ ಇಲ್ಲ ಎಂದು ಎಡಿಆರ್ ಹೇಳಿದೆ.
ಈ ಹಣ ಎಲ್ಲಿಂದ ಬಂತು ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ ಎಂದು ಎಡಿಆರ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ. ಚುನಾವಣಾ ಆಯೋಗದ ಪ್ರಕಾರ 20 ಸಾವಿರಕ್ಕಿಂತ ಹೆಚ್ಚು ಕೊಡುಗೆ ನೀಡುವ ದಾನಿಗಳ ಬಗ್ಗೆ ಪಕ್ಷಗಳು ವಿವರ ನೀಡಬೇಕು. ಆದರೆ ಇದಕ್ಕಿಂತ ಕಡಿಮೆ ಹಣ ನೀಡುವ ದಾನಿಗಳ ಬಗ್ಗೆ ಮಾಹಿತಿ ನೀಡಬೇಕಿಲ್ಲ..
ಇಂಥ ಹಣದ ಮೂಲ ಗೊತ್ತಾಗಬೇಕಾದರೆ ರಾಜಕೀಯ ಪಕ್ಷಗಳು ಆರ್‌ಟಿಐ ವ್ಯಾಪ್ತಿಗೆ ಬರಬೇಕು. ಆದರೆ ರಾಜಕೀಯ ಪಕ್ಷಗಳು ಜಾಣ ನಡೆ ಅನುಸರಿಸಿ, ಆರ್‌ಟಿಐ ವ್ಯಾಪ್ತಿಗೆ ಬರದಂತೆ ನಿಯಮ ರೂಪಿಸಿಕೊಂಡಿವೆ ಎಂದು ಆರೋಪಿಸಲಾಗಿದೆ.
ವಿಚಿತ್ರವೆಂದರೆ, ಭಾರತ ಸೇರಿದಂತೆ 20 ದೇಶಗಳಲ್ಲಿ ಮಾತ್ರ ರಾಜಕೀಯ ಪಕ್ಷಗಳು ಗೊತ್ತುಗುರಿ ಇಲ್ಲದ ಹಣ ಸ್ವೀಕರಿಸಲು ಅವಕಾಶ ನೀಡಲಾಗಿದೆ.
4895 ಕೋಟಿ
2004 ರಿಂದ 12ರವರೆಗೆ 6 ರಾಷ್ಟ್ರೀಯ ಪಕ್ಷಗಳಿಗೆ ಹರಿದು ಬಂದ ಹಣ
ಶೇ.75
ಭಾಗದಷ್ಟು ಹಣದ ಮೂಲವೇ ಪತ್ತೆಯಾಗಿಲ್ಲ. ಶೇ.25 ರಷ್ಟು ಹಣಕ್ಕೆ ಮಾತ್ರ ಮೂಲವುಂಟು.
ಕೊಡುಗೆ ಹಣ
ಕಾಂಗ್ರೆಸ್
ಒಟ್ಟಾರೆ 2365 ಕೋಟಿ
ಬೇನಾಮಿ 1,951ಕೋಟಿ
ಬಿಜೆಪಿ
ಒಟ್ಟಾರೆ 1304 ಕೋಟಿ
ಬೇನಾಮಿ 952 ಕೋಟಿ
ಸಿಪಿಎಂ
ಒಟ್ಟಾರೆ 521 ಕೋಟಿ
ಬೇನಾಮಿ 281 ಕೋಟಿ
ಬಿಎಸ್‌ಪಿ
ಒಟ್ಟಾರೆ 497 ಕೋಟಿ
ಬೇನಾಮಿ 308 ಕೋಟಿ
ಎನ್‌ಸಿಪಿ
ಒಟ್ಟಾರೆ 198 ಕೋಟಿ
ಬೇನಾಮಿ 182 ಕೋಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

