ವಿವಿಧೆಡೆ ಮಳೆ: ಜನ ಜೀವನ ಅಸ್ತವ್ಯಸ್ತ
ಕ.ಪ್ರ.ವಾರ್ತೆ ಬೆಂಗಳೂರು ಸೆ. 15-
ಯಾದಗಿರಿ, ದಾವಣಗೆರೆ, ರಾಯಚೂರು, ಬೆಂಗಳೂರು ಗ್ರಾಮಾಂತರ, ಬಳ್ಳಾರಿ ಜಿಲ್ಲೆಗಳಲ್ಲಿ ಶನಿವಾರ ರಾತ್ರಿಯಿಂದಚೆಗೆ ಭಾರಿ ಮಳೆಯಾಗಿದ್ದು, ಅನೇಕ ಕಡೆ ಜನಜೀವನ ಅಸ್ತವ್ಯವಸ್ತವಾಗಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ಹಾಗೂ ಯಾದಗಿರಿ ತಾಲೂಕುಗಳಲ್ಲಿ 5 ಗಂಟೆ ಹೆಚ್ಚೂ ಕಾಲ ಮಳೆಯಾಗಿದ್ದು, ಹಳ್ಳಗಳು ತುಂಬಿ ಹರಿದಿವೆ. ಯಾದಗಿರಿ ನಗರದ ಪ್ರಮುಖ ರಸ್ತೆಗಳಲ್ಲಿ ಧಾರಾಕಾರವಾಗಿ ನೀರು ಹರಿದಿದ್ದು, ಕೆಲಕಾಲ ವಾಹನ ಸಂಚಾರ ಕಡಿತಗೊಂಡಿತ್ತು.
ಗುಡುಗು, ಸಿಡಿಲು ಮಿಶ್ರಿತ ಮಳೆ ಕೆಲ ಗಂಟೆಗಳ ಕಾಲ ಜನತೆಯಲ್ಲಿ ಆತಂಕ ಸೃಷ್ಟಿಸಿತ್ತು. ಡಾನ್ಬಾಸ್ಕೋ ಶಿಕ್ಷಣ ಸಂಸ್ಥೆ ಸಂಪೂರ್ಣ ಜಲಾವೃತವಾಗಿದೆ. ಇದರಿಂದ ಸಂಸ್ಥೆಯಲ್ಲಿನ ಪೀಠೋಕರಣ ಹಾಳಾಗಿವೆ. ಮಳೆಯಿಂದಾಗಿ ತಾಲೂಕಿನ ಸೈದಾಪುರ ಭಾಗದ ಕೆಲ ಗ್ರಾಮಗಳಲ್ಲಿನ ಮನೆಗಳ ಚಾವಣಿ ಭಾಗಶಃ ಮುರಿದು ಬಿದ್ದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಲಿಲ್ಲ. ಅದರಂತೆ ಮಳೆಯಿಂದಾಗಿ ತಾಲೂಕಿನ ಎಲ್ಲಾ ಕೆರೆಗಳು ತುಂಬಿ ಹರಿಯುತ್ತಿವೆ ಎಂದು ತಿಳಿದು ಬಂದಿದೆ.
ತುಂಬಿ ಹರಿದ ಹಳ್ಳ: ಕಳೆದ ರಾತ್ರಿ ಬಿದ್ದ ಮಳೆಯಿಂದಾಗಿ ಯಾದಗಿರಿ ಜಿಲ್ಲೆಯ ಹಿರೆವಡಗೇರಾ- ಯಾದಗಿರಿ ಮುಖ್ಯ ರಸ್ತೆಯ ಸಂಚಾರ ಸಂಪೂರ್ಣ ನಿಂತು ಹೋಗಿತ್ತು. ಇಲ್ಲಿಯ ಕೆಇಬಿ ಹತ್ತಿರವಿರುವ ಹಳ್ಳಕ್ಕೆ ಕಟ್ಟಿದ ಮೇಲ್ಸೇತುವೆ ಚಿಕ್ಕದಾಗಿರುವದರಿಂದ ಹಳ್ಳಕ್ಕೆ ನುಗ್ಗಿದ ನೀರು ಅದರ ಮೆಲಿಂದ ಹರಿಯುತ್ತಿರುವುದರಿಂದ ಬೆಳಿಗ್ಗೆ ಆರು ಗಂಟೆಯಿಂದ ಮದ್ಯಾಹ್ನ ಹನ್ನೆರಡು ಗಂಟೆಯವರೆಗೆ ಯಾದಗಿರಿ ಹಾಗೂ ರಾಯಚುರ ಎರಡು ಜಿಲ್ಲೆಗಳ ಸಂಪರ್ಕವನ್ನು ಈ ಭಾಗದ ಅನೇಕ ಗ್ರಾಮಸ್ತರು ಕಳೆದು ಕೊಂಡರು.
ಹರಪನಹಳ್ಳಿಯಲ್ಲಿ ಭಾರಿ: ದಾವಣಗೆರೆ ಜಿಲ್ಲೆಯ ಹರನಪನಹಳ್ಳಿ ತಾಲೂಕಿನ ಪಾವನಪುರ ಗ್ರಾಮದ 2 ಮನೆಗಳು ಕುಸಿದು ಬಿದ್ದು, 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡ ಘಟನೆ ಭಾನುವಾರ ನಡೆದಿದೆ. ಒಂದು ತಾಸಿಗೂ ಹೆಚ್ಚು ಧಾರಾಕಾರ ಮಳೆ ಸುರಿದಿದ್ದು, ಗ್ರಾಮದ ತಗ್ಗು ಪ್ರದೇಶದಲ್ಲಿದ್ದ ಎರಡು ಮನೆಗಳು ಕುಸಿದಿವೆ.
ಮಳೆಗೆ 5 ಜೋಪಡಿ ಕುಸಿತ, ಇಬ್ಬರಿಗೆ ಗಾಯ: ರಾಯಚೂರು ನಗರ ಸೇರಿದಂತೆ ಜಿಲ್ಲಾದ್ಯಂತ ಭಾರಿ ಮಳೆ ಸುರಿದಿದೆ. ನಗರದಲ್ಲಿ ಐದು ಜೋಪಡಿಗಳು ಕುಸಿದು ಇಬ್ಬರಿಗೆ ಗಾಯಗಳಾಗಿವೆ. ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಆತಂಕದಲ್ಲಿಯೇ ರಾತ್ರಿ ಕಳೆದರು. ಜಲಾಲ್ ನಗರದಲ್ಲಿ ಮಳೆಯ ನೀರು ನುಗ್ಗಿ ಆಹಾರ ಧಾನ್ಯ ಮತ್ತು ಪಾತ್ರೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ನಗರದ ಬಸವಬಾವಿ ವೃತ್ತದಿಂದ ರಾಜೇಂದ್ರ ಗಂಜ್ಗೆ ಸಂರ್ಪಕ ಕಲ್ಪಿಸುವ ಮಾರ್ಗದ ಇಕ್ಕೆಲಗಳಲ್ಲಿರುವ ಅನೇಕ ವಾಣಿಜ್ಯ ಮಳಿಗೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಸಿಮೆಂಟ್ ಸೇರಿ ಅನೇಕ ಸಾಮಗ್ರಿ ಹಾಳಾಗಿವೆ. ಇದೇ ವೇಳೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಭಾರಿ ಮಳೆಯಾಗಿದ್ದು, ಪಟ್ಟಣದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

