ನರ್ಮ್ನಲ್ಲಿ ನಮ್ಮದೇ ಸಿಂಹಪಾಲು

ನವದೆಹಲಿ: ಜವಾಹರಲಾಲ್ ನೆಹರು ನಗರ ಪುನರ್ ನವೀಕರಣ ಯೋಜನೆಯಡಿ (ಜೆನರ್ಮ್) ಸಮರ್ಪಕ ಅನುದಾನ ಬಳಕೆ ಮಾಡಿಕೊಂಡಿರುವ ಕರ್ನಾಟಕಕ್ಕೆ ಕೇಂದ್ರ ನಗರಾಭಿವೃದ್ಧಿ ಇಲಾಖೆಯು 2104 ಬಸ್ಗಳನ್ನು ಮಂಜೂರು ಮಾಡಿದೆ.
ಈ ಬಸ್ಗಳು ಬೆಂಗಳೂರು ಮತ್ತು ಮೈಸೂರು ನಗರದಲ್ಲಿ ಸಂಚರಿಸಲಿವೆ. ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ರಚಿಸಿರುವ ಕೇಂದ್ರೀಯ ಮಂಜೂರು ಮತ್ತು ನಿಗಾ ಸಮಿತಿ (ಸಿಎಸ್ಎಂಸಿ)ಯು ಮಂಗಳವಾರ ಸಭೆ ಸೇರಿ ಒಟ್ಟು 2124 ಬಸ್ಗಳನ್ನು ಮಂಜೂರು ಮಾಡಿದೆ. ಈ ಪೈಕಿ ಶೇ.99ರಷ್ಟು ಬಸ್ಗಳು ಕರ್ನಾಟಕಕ್ಕೆ ದಕ್ಕಿವೆ. ಪಂಜಾಬ್ನ ಭಟಿಂಡಾ ನಗರಕ್ಕೆ 20 ಬಸ್ಗಳನ್ನು ಮಂಜೂರು ಮಾಡಲಾಗಿದೆ. ಈ ಬಸ್ಗಳ ಜತೆಗೆ ಬಸ್ ಡಿಪೋಗಳು, ವರ್ಕ್ಶಾಪ್ಗಳು, ಕಂಟ್ರೋಲ್ ಸೆಂಟರ್ಗಳು ಮತ್ತು ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಸೇರಿ ಎಲ್ಲ ಪೂರಕ ಪರಿಕರಗಳನ್ನು ಒದಗಿಸಲಾಗುತ್ತಿದೆ.
ನಗರ ಸಾರಿಗೆ ಸುಧಾರಣೆಗೆಂದು ಜೆನರ್ಮ್ ಯೋಜನೆಯಡಿ ಅತ್ಯಾಧುನಿಕ ಬಸ್ಗಳನ್ನು ಕೇಂದ್ರ ನಗರಾಭಿವೃದ್ಧಿ ಇಲಾಖೆ ಒದಗಿಸುತ್ತಿದೆ. 2009ರಿಂದೀಚೆಗೆ ನಗರ ಸಾರಿಗೆ ವಲಯದಲ್ಲಿ ಕರ್ನಾಟಕ ದೆಹಲಿ ನಂತರ ಅತಿ ಹೆಚ್ಚು ಅನುದಾನ ಪಡೆದುಕೊಂಡಿದೆ. ಪ್ರಸಕ್ತ ಸಾಲಿನಲ್ಲಿ ಜೆನರ್ಮ್ ಯೋಜನೆಯಡಿ 10,000 ಬಸ್ಗಳನ್ನು ಒದಗಿಸುವ ಗುರಿ ಕೇಂದ್ರದ್ದು. ಈ ಪೈಕಿ 2000 ಬಸ್ಗಳನ್ನು ಈಶಾನ್ಯ ರಾಜ್ಯಗಳಿಗೆ ಮೀಸಲಿರಿಸಲಾಗಿದೆ. ತಮಿಳುನಾಡು 3000 ಬಸ್ಗಳಿಗೆ ಬೇಡಿಕೆ ಇಟ್ಟಿದ್ದರೆ, ಆಂಧ್ರ ಪ್ರದೇಶ 1200 ಬಸ್ಗಳಿಗಾಗಿ ಕೋರಿದೆ. ಮೊದಲ ಸುತ್ತಿನಲ್ಲಿ 2124 ಬಸ್ಗಳನ್ನು ನೀಡಲಾಗಿದ್ದು, ಕರ್ನಾಟಕ ಸಲ್ಲಿಸಿದ್ದ ಪೂರ್ಣ ಬೇಡಿಕೆಯನ್ನು ಪರಿಗಣಿಸಿ 2104 ಬಸ್ಗಳನ್ನು ಒದಗಿಸಲಾಗಿದೆ.
ಸಿಎಸ್ಎಂಸಿ ಸಭೆಯಲ್ಲಿ ಮಾತನಾಡಿದ ಕೇಂದ್ರ ನಗರಾಭಿವೃದ್ಧಿ ಕಾರ್ಯದರ್ಶಿ ಡಾ.ಸುಧೀರ್ ಕೃಷ್ಣ, ಜೆನರ್ಮ್ ಯೋಜನೆಯಡಿ ಅನುದಾನವನ್ನು ಬಳಸಿಕೊಂಡು ಕರ್ನಾಟಕ ಸಾರಿಗೆ ಸುಧಾರಣೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ ಎಂದರು.
- ಕನ್ನಡಪ್ರಭ ಪ್ರತಿನಿಧಿಯಿಂದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


