ಪ್ರಧಾನ ಸುದ್ದಿ

ಪ್ರಚಾರ ಪಟಾಕಿ

ಪ್ರಚಾರ ಪಟಾಕಿ
Published On :

ಸಸ್ರಾಮ್/ಕುರುಕ್ಷೇತ್ರ/ಗಾಜಿಯಾಬಾದ್: ಮೊದಲ ಹಂತದ ಮತದಾನಕ್ಕೆ ಕೇವಲ ನಾಲ್ಕು ದಿನಗಳು ಇರುವಂತೆಯೇ ಪ್ರಚಾರ ಕಾರ್ಯ ಬಿರುಸಾಗಿದೆ. ಗುರುವಾರ ಪ್ರಮುಖವಾಗಿ ಪ್ರಚಾರ ನಡೆಸಿದ್ದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ.
ಕುರುಕ್ಷೇತ್ರ ಮತ್ತು ಗಾಜಿಯಾಬಾದ್ಗಳಲ್ಲಿ ಪ್ರಚಾರ ನಡೆಸಿದ ಮೋದಿ ಸೋನಿಯಾ ಅಳಿಯ ರಾಬರ್ಟ್ ವಾದ್ರಾರ ಆಸ್ತಿ ವಿಚಾರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಸಸರಾಮ್ನಲ್ಲಿ ಪ್ರಚಾರ ಮಾಡಿದ ಕಾಂಗ್ರೆಸ್ ಅಧ್ಯಕ್ಷೆ ಬಿಹಾರ ಸಿಎಂ ವಿರುದ್ಧ ಟೀಕಾ ಪ್ರಹಾರ ಮಾಡಿದರು.
ಮೋದಿ ಹೇಳಿದ್ದೇನು?
ಟ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ದೇಶದ 125 ಕೋಟಿ ಮಂದಿ ಕಾವಲುಗಾರರಾಗಬೇಕೆಂದು ಹೇಳಿದ್ದರು. ಭೂಮಿ ಬೇರೆಯವರ ಪಾಲಾಗದಂತೆ ತಡೆಯಲು ಅವರ ಭಾವ (ರಾಬರ್ಟ್ ವಾದ್ರಾ) ಕಾವಲುಗಾರರಾಗುತ್ತಾರೆಯೇ?
ಟ ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪುಹಣ ಮತ್ತೆ ಸ್ವದೇಶಕ್ಕೆ ತರಲು ವಿಶೇಷ ಕ್ರಮ ಕೈಗೊಳ್ಳಲಾಗುವುದು. ದೇಶವನ್ನು ಲೂಟಿ ಮಾಡಿದವರು ಎಷ್ಟೇ ಪ್ರಭಾವಶಾಲಿಗಳಾಗಿರಲಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ.
ಟ ಬಿಜೆಪಿಗೆ ಜಾತ್ಯತೀತತೆ ಎಂದರೆ ದೇಶವನ್ನು ಒಂದುಗೂಡಿಸುವ ವಿಚಾರ. ಆದರೆ ಕಾಂಗ್ರೆಸ್ಗೆ ಅದು ದೇಶವನ್ನು ಒಡೆಯುವ ಸಾಧನ.
ಟ ಸುಭದ್ರ ಆಡಳಿತ ಮತ್ತು ಸರ್ಕಾರಕ್ಕಾಗಿ ಬಿಜೆಪಿಗೆ 300 ಸ್ಥಾನಗಳನ್ನು ಕೊಡಿ.
ಸೋನಿಯಾ ಹೇಳಿದ್ದೇನು?
ಟ 2004, 2009ರಲ್ಲಿ ದೇಶದ ಜನರಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ನೀಡಿದ್ದ ಭರವಸೆಗಳ ಪೈಕಿ ಹೆಚ್ಚಿನವುಗಳನ್ನು ಈಡೇರಿಸಿದ್ದೇವೆ.
ಟ 10 ವರ್ಷಗಳಲ್ಲಿ ದೇಶ ಏನೇನೂ ಅಭಿವೃದ್ಧಿ ಸಾಧಿಸಿಲ್ಲ ಎಂಬ ಪ್ರತಿಪಕ್ಷಗಳ ಆರೋಪ ಸತ್ಯಕ್ಕೆ ದೂರವಾದದ್ದು.
ಟ ನಮಗೆ ಆಗಾಗ ಮುಖವಾಡಗಳನ್ನು ಬದಲಾವಣೆ ಮಾಡುವ ವ್ಯಕ್ತಿಗಳು ಅಗತ್ಯವಿಲ್ಲ. ಅವರು ತಮ್ಮ ವೈಫಲ್ಯಗಳನ್ನು ಮರೆ ಮಾಚಲು ನಮ್ಮನ್ನು ದೂರುತ್ತಾರೆ.

ಆಡ್ವಾಣಿ - ಮೋದಿ ಹಾಜರಿ
ನವದೆಹಲಿ: ಎಲ್.ಕೆ. ಆಡ್ವಾಣಿ ವಿಚಾರವಾಗಿ ಪಕ್ಷದೊಳಗೆ ಎದ್ದಿದ್ದ ಭಿನ್ನಮತವನ್ನು ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸಲು ಬಿಜೆಪಿ ಈಗ ಮುಂದಾಗಿದೆ. ಗಾಂಧಿನಗರದಿಂದ ಶನಿವಾರ ಆಡ್ವಾಣಿ ನಾಮಪತ್ರ ಸಲ್ಲಿಸುವ ವೇಳೆ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಖುದ್ದು ಹಾಜರಿರಲು ನಿರ್ಧರಿಸಿದ್ದಾರೆ. ಚುನಾವಣಾ ಪ್ರಚಾದಲ್ಲಿ ಬ್ಯುಸಿಯಾಗಿರುವ ಮೋದಿ ವಿಶೇಷ ವಿಮಾನದ ಮೂಲಕ ಗುಜರಾತ್ ತಲುಪಲಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.