ನಾಲಗೆ ಮಡಚದ ನಾಯಕರು

ಮತದಾರರ ಓಲೈಕೆ ಭರದಲ್ಲಿ ನಾಯಕರ ನಾಲಗೆ ಈ ಬಾರಿ ಹದ್ದು ಮೀರಿದೆ. ಕೆಪಿಸಿಸಿ ಅಧ್ಕಕ್ಷ ಪರಮೇಶ್ವರ್ ಬಳಿಕ, ವಿವಾದಾಸ್ಪದ ಹೇಳಿಕೆ ಸರದಿ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು
ಸಿಎಂ ಸಿದ್ದರಾಮಯ್ಯ ಹೇಳಿಕೆ ದುರದೃಷ್ಟಕರ. ಇಂಥ ಘಟನೆಗೆ ಸರ್ಕಾರದ ಲೋಪದೋಷಗಳೂ ಕಾರಣ. ಸರ್ಕಾರದ ನ್ಯೂನತೆ ಸರಿಪಡಿಸಿಕೊಳ್ಳುವ ಬದಲು ಸಬೂಬು ಹೇಳುವುದು ಸರಿಯಲ್ಲ. ಸಿದ್ದರಾಮಯ್ಯ, ನಾನು ಒಟ್ಟಿಗೆ ಇದ್ದಾಗ ಕೃಷ್ಣ ಅವಧಿಯಲ್ಲಿ ರೈತರ ಆತ್ಮಹತ್ಯೆ ವಿರುದ್ಧ ದೆಹಲಿಗೆ ನಿಯೋಗ ಹೋಗಿದ್ದೆವು. ಆಗ ಸಿದ್ದರಾಮಯ್ಯ ಏನು ಹೇಳಿದ್ದರೆಂದುಬು ನನ್ನ ಬಳಿ ದಾಖಲೆ ಇದೆ.
- ದೇವೇಗೌಡ,
ಬಿ.ವಿ.ನಾಯಕ ಒಬ್ಬ ಜ್ಯೂನಿಯರ್ ಉಮೇಶ್ರೆಡ್ಡಿ. ಈತನ, ವಿರುದ್ಧ ಅತ್ಯಾಚಾರ ಪ್ರಕರಣಗಳಿವೆ.
-ಶಿವನಗೌಡ ನಾಯಕ್
ಬಿಜೆಪಿ ಅಭ್ಯರ್ಥಿ
ರೈತರ ಅಭ್ಯುದಯ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ರೈತರಿಗೆ ಅವಮಾನ ಮಾಡುತ್ತಿದ್ದಾರೆ. ಕ್ಷುಲ್ಲಕ ಹೇಳಿಕೆ ನೀಡಿರುವ ಸಿಎಂ ಕ್ಷಮೆಯಾಚಿಸಬೇಕು. ಸೋಲುವ ಹತಾಶೆಯಲ್ಲಿ ನಾಲಿಗೆ ಮೇಲಿನ ಹಿಡಿತ ಕಳೆದುಕೊಂಡಿದ್ದಾರೆ.
- ಸದಾನಂದಗೌಡ
ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿ ರೈತ ವಿಠಲ ಅರಭಾವಿ ಸಾವಿಗೂ ಸರ್ಕಾರಕ್ಕೂ ಸಂಬಂಧ ಇಲ್ಲ. ಆತ ಕುಡಿದಿದ್ದ, ಸತ್ತ.
(ಮಡಿಕೇರಿಯ ನಾಪೊಕ್ಲುವಿನಲ್ಲಿ ಬುಧವಾರ ರಾತ್ರಿ)
ನನ್ನ ಹೇಳಿಕೆ ತಿರುಚಲಾಗಿದೆ. ರೈತ ಕುಡಿದು ಸತ್ತ ಎಂದು ಹೇಳಲೇ ಇಲ್ಲ. ತನಿಖಾ ವರದಿಯೂ ನನ್ನ ಕೈಸೇರಿಲ್ಲ. ವಿಪಕ್ಷಗಳು ಹೇಳಿಕೆ ತಪ್ಪಾಗಿ ಅರ್ಥೈಸಿವೆ.
(ಮಡಿಕೇರಿಲಿ ಗುರುವಾರ ಬೆಳಗ್ಗೆ)
- ಸಿದ್ದರಾಮಯ್ಯ
ದೇವೇಗೌಡರ ವಿರುದ್ಧ ಕಟು ಶಬ್ದ ಬಳಸಿಲ್ಲ. ಮಾತಿನ ಭರದಲ್ಲಿ ವ್ಯಂಗ್ಯ ಮಾಡುವಾಗ ತಪ್ಪು ಅರ್ಥ ಕೊಟ್ಟಿದೆ. ದೇವೇಗೌಡರ ಮೇಲೆ ಅಗೌರವದಿಂದ ನಾನು ಈ ರೀತಿ ಹೇಳಿಲ್ಲ. ಅವರು ನೂರ್ಕಾಲ ಬಾಳಿಲಿ. ಇದಕ್ಕಾಗಿ ನಾನು ವಿಷಾದಿಸುತ್ತೇನೆ.
(ದೇವೇಗೌಡರು ವಿಷ ಸೇವಿಸಲಿ ಎಂದು ಬುಧವಾರದ ನೀಡಿದ ಹೇಳಿಕೆ ಕುರಿತು)
- ಡಾ. ಪರಮೇಶ್ವರ
ರೈತನ ಆತ್ಮಹತ್ಯೆ ವಿಚಾರದಲ್ಲಿ ದಿನಕ್ಕೊಂದು ಹೇಳಿಕೆ ಬದಲಿಸುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಹಿರಿಯ ರಾಜಕಾರಣಿ ದೇವೇಗೌಡರಿಗೆ ವಿಷ ಕುಡಿಯಲಿ ಎಂದ ಪರಮೇಶ್ವರ್ರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು. ಜಾತಿಗಳನ್ನು ಒಡೆದು ಕಾಂಗ್ರೆಸ್ನವರು ರಾಜಕಾರಣ ಮಾಡ್ತಿದ್ದಾರೆ.
- ಕೆ.ಎಸ್.ಈಶ್ವರಪ್ಪ,
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


