ಭಿನ್ನಗೀತೆಯ ಮರೆತ ಗುರು-ಶಿಷ್ಯರು

ಪಿಟಿಐ, ನವದೆಹಲಿ/ಗಾಂಧಿನಗರ, ಏ.5
ಬಿಜೆಪಿಯ ಹಿರಿಯ ತಲೆಯಾಳು ಎಲ್.ಕೆ.ಆಡ್ವಾಣಿ ಪ್ರತಿಷ್ಠಿತ ಗಾಂಧಿನಗರ ಕ್ಷೇತ್ರದಿಂದ ಶನಿವಾರ ನಾಮಪತ್ರ ಸಲ್ಲಿಸಿದ್ದಾರೆ. ಗಮನಾರ್ಹ ಅಂಶವೆಂದರೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಹಲವಾರು ಗಣ್ಯರ ನಡುವೆ ಉಪಸ್ಥಿತಿ. ಮೋದಿ ಮತ್ತು ಆಡ್ವಾಣಿ ನಡುವಿನ ಭಿನ್ನಮತ ಇದೆ ಎಂದು ಹಲವು ಮಾಧ್ಯಮ ವರದಿಗಳ ಬಳಿಕ ಮುಖಂಡದ್ವಯರು ಒಟ್ಟಾಗಿ ಕಾಣಿಸಿದ್ದು ಇದೇ ಮೊದಲು. ಈ ಮೂಲಕ ಇಬ್ಬರ ನಡುವೆ ಯಾವುದೇ ಭಿನ್ನಮತ ಇಲ್ಲ ಎಂದು ತೋರಿಸಲು ಬಿಜೆಪಿ ಪ್ರಯತ್ನ ನಡೆಸಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರೇ ಖುದ್ದಾಗಿ ತಮ್ಮ ಗುರು ಆಡ್ವಾಣಿಯವರ ನಾಮಪತ್ರವನ್ನು ಚುನಾವಣಾಧಿಕಾರಿಯವರ ಕೈಗೆ ಹಸ್ತಾಂತರಿಸಿದ್ದು ವಿಶೇಷ.
ಪರಸ್ಪರ ಹೊಗಳಿಕೆ
ನಾಮಪತ್ರ ಸಲ್ಲಿಕೆಗೆ ಮುನ್ನ ಗಾಂಧಿನಗರದಲ್ಲಿ ಆಡ್ವಾಣಿ ಮತ್ತು ಮೋದಿ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಉಭಯ ನಾಯಕರು ಪರಸ್ಪರ ಮುಕ್ತಕಂಠದಿಂದ ಶ್ಲಾಘಿಸಿದರು.
ಮೋದಿ ಬಗ್ಗೆ ಆಡ್ವಾಣಿ ಹೇಳಿದ್ದು
- ಮೋದಿ ಒಬ್ಬ ಉತ್ತಮ ನಾಯಕ. ಈ ಬಾರಿಯ ಚುನಾವಣೆಯಲ್ಲಿ ಅವರು ಪ್ರಧಾನಿಯಾಗುವುದು ಖಚಿತ.
- ಅವರಂಥ ಒಬ್ಬ ಮೇಧಾವಿ, ದಕ್ಷ ಕಾರ್ಯಮ ಆಯೋಜಕ (ಈವೆಂಟ್ ಮ್ಯಾನೇಜರ್) ಮತ್ತೊಬ್ಬ ಇಲ್ಲ.
- ಅವರ ಈ ಕೌಶಲ್ಯ ಗುಜರಾತ್ ಸರ್ಕಾರದ ಆಡಳಿತದಲ್ಲೂ ಛಾಪು ಮೂಡಿಸಿದೆ.
- ಆರ್ಎಸ್ಎಸ್ ಪ್ರಚಾರಕನಾಗಿ, ಬಿಜೆಪಿ ನಾಯಕರಾಗಿ ಮೋದಿ ಸಾಧನೆ ಶ್ಲಾಘನೀಯ
- ಅಟಲ್ ಜಿ- ಮೋದಿ ನಡುವೆ ಹೋಲಿಕೆ ಸರಿಯಲ್ಲ. ಅಟಲ್ಗೆ ಅವರೇ ಸಾಟಿ
ಆಡ್ವಾಣಿ ಬಗ್ಗೆ ಮೋದಿ ಹೇಳಿದ್ದು
- ಆಡ್ವಾಣಿಯವರನ್ನು ಬಹುಮತದ ಅಂತರದಿಂದ ಗೆಲ್ಲಿಸಬೇಕು. ಈ ಬಗ್ಗೆ ನಮ್ಮ ಕಾರ್ಯಕರ್ತರು ಹೆಚ್ಚಿನ ಶ್ರಮ ವಹಿಸಬೇಕು.
- ನಮ್ಮ ಹಿರಿಯ ನಾಯಕ ಹಲವು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದಾರೆ. ಅವರ ಅನುಭವ ನಮಗೆ ಅಗತ್ಯವಿದೆ.
- ಈ ಚುನಾವಣೆ ವ್ಯಕ್ತಿಗಳ ನಡುವಿನ ಸ್ಪರ್ಧೆ ಅಲ್ಲ. ಆದರೆ ವಿಚಾರಗಳ ನಡುವೆ ಇದೆ ಎಂದು ಹೇಳಿರುವ ಆಡ್ವಾಣಿ ಮಾತು ಸರಿ. ಇದೇ ವೇಳೆ ಲಖನೌ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರಾಜನಾಥ್ ಸಿಂಗ್ ನಾಮಪತ್ರ ಸಲ್ಲಿಸಿದ್ದಾರೆ.
ಸುಳ್ಳೇ ಸುಳ್ಳು
ಗಾಂಧಿನಗರ ಕ್ಷೇತ್ರ ಬಿಟ್ಟು ಬೇರೆ ಸ್ಥಳದಿಂದ ಸ್ಪರ್ಧಿಸುವ ಇರಾದೆ ತಮಗೆ ಇರಲಿಲ್ಲ ಎಂದು ಆಡ್ವಾಣಿ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಯಾವುದೇ ರೀತಿಯ ವಿವಾದ ಉಂಟಾಗಿರಲಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. 'ಭೋಪಾಲ್ನಿಂದ ಸ್ಪರ್ಧಿಸಬೇಕೆಂದು ನನ್ನ ಸ್ನೇಹಿತರು ಬಯಸಿದ್ದರು. ಆದರೆ ನನ್ನ ಮತ್ತು ಗುಜರಾತ್ನ ಸಂಬಂಧ ವಿಶೇಷವಾಗಿ ಗಾಂಧಿನಗರದ ಜತೆಗಿನ ಸಂಬಂಧ ಗಾಢವಾದದ್ದು' ಎಂದು ಹಿರಿಯ ನಾಯಕ ಪ್ರತಿಪಾದಿಸಿದ್ದಾರೆ.
ಆಡ್ವಾಣಿ ಆಸ್ತಿ ವಿವರ
ಒಟ್ಟು ಆಸ್ತಿ 7 ಕೋಟಿ
ನಗದು 97.23 ಲಕ್ಷ
ಚಿನ್ನಾಭರಣ
(ಜಂಟಿ ಖಾತೆ) 40 ಲಕ್ಷ
ಮನೆಗಳು ಗಾಂಧಿನಗರದಲ್ಲಿ ಮತ್ತು ಗುರ್ಗಾಂವ್ನಲ್ಲಿ
ಅವುಗಳ ಮೌಲ್ಯ 5.57 ಕೋಟಿ
ಒಟ್ಟು ಆದಾಯ (12-13)29.79 ಲಕ್ಷ
ಯಾವುದೇ ಹಣಕಾಸು ಬಾಧ್ಯತೆ ಇಲ್ಲ ಯಾವುದೇ ವಾಹನ ಹೊಂದಿಲ್ಲ
ಕಮಲಾ ಆಡ್ವಾಣಿ ಆಸ್ತಿ ವಿವರ
ಠೇವಣಿ 67.13 ಲಕ್ಷ
ನಗದು 15 ಸಾವಿರ
ಒಟ್ಟು ಆದಾಯ (2012-13) 25.68 ಲಕ್ಷ
ದೇಶವನ್ನು ಒಬ್ಬ ಕಾರ್ಯಕ್ರಮ ಆಯೋಜಕ ಆಳಲು ಸಾಧ್ಯವಿಲ್ಲ. ಆಡಳಿತಕ್ಕೆ ಉತ್ತಮ ನಾಯಕತ್ವ ಬೇಕು ಎಂಬುದನ್ನು ಬಿಜೆಪಿ ಮರೆತಿದೆ. ಗುಜರಾತ್ನಲ್ಲಿ ಎಲ್ಲ ಉತ್ತಮವಾಗಿದೆ ಎಂದು ತೋರಿಸುತ್ತಿದ್ದಾರೆ.
- ರಣದೀಪ್ ಸುರ್ಜೇವಾಲ, ಕಾಂಗ್ರೆಸ್ ವಕ್ತಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


