ಸೋನಿಯಾ ಆಣತಿ ಪ್ರಧಾನಿ ಸಮ್ಮತಿ

ಫೈಲ್ಗಳನ್ನು ನೋಡುವ ಕೆಲಸ ಸೋನಿಯಾ ಅವರದ್ದಾದರೆ, ಸಹಿ ಮಾಡುವುದಷ್ಟೇ ಪ್ರಧಾನಿ ಕೆಲಸವಾಗಿತ್ತು ಎಂಬುದೂ ಬಾರು ಪುಸ್ತಕದಲ್ಲಿ ಅಡಕವಾಗಿದೆ.
ನವದೆಹಲಿ: ಚುನಾವಣೆ ಕಾವಿನಲ್ಲಿ ತೆರೆ ಮರೆಗೆ ಸರಿದಂತಾಗಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರ 'ಮೌನ ಅಧಿಕಾರ'ದ ಹಿಂದೆ ಸೋನಿಯಾ ಗಾಂಧಿ 'ಪವರ್' ಇತ್ತು ಎಂಬುದು ಈಗ ಬಹಿರಂಗವಾಗಿದೆ.
ಇಷ್ಟೇ ಅಲ್ಲ, ಅಂಗಪಕ್ಷ ಹೇಳಿದಂತೆ ಕುಣಿಯುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರೆಂಬುದೂ ಹೊರಬಿದ್ದಿದೆ. ಯುಪಿಎಯಲ್ಲಿ ದ್ವಿಕೇಂದ್ರಿತ ಅಧಿಕಾರ ವ್ಯವಸ್ಥೆ ಕುರಿತು ಭಾರಿ ಚರ್ಚೆ ನಡೆಯುತ್ತಿದ್ದವು. ಇದೀಗ ಏಕ ಕೇಂದ್ರಿತ ಅಧಿಕಾರ ವ್ಯವಸ್ಥೆ ಬಗ್ಗೆ ಪ್ರಧಾನಿ ಕಾರ್ಯಾಲಯದ ಮಾಜಿ ಅಧಿಕಾರಿ ಸಂಜಯ್ ಬಾರು ಬಾಯಿಬಿಟ್ಟಿದ್ದಾರೆ.
'ಅಧಿಕಾರ' ಎಂದಿಗೂ ಪ್ರಧಾನಿ ಕೈಯಲ್ಲಿಯೇ ಇರಲಿಲ್ಲ, ಎಲ್ಲವೂ ಸೋನಿಯಾ ಆಣತಿಯಂತೆಯೇ. 2009ರಲ್ಲಿ ಸರ್ಕಾರ ರಚನೆಯಾದಾಗ, ಪ್ರಣಬ್ರನ್ನು ಹಣಕಾಸು ಸಚಿವರನ್ನಾಗಿಸಿದ್ದು ಸೋನಿಯಾರೇ. ಇದನ್ನು ನೆಪಕ್ಕೂ ಪ್ರಧಾನಿಗೆ ಹೇಳಿರಲಿಲ್ಲ. 2004-08ರವರೆಗೆ ಪ್ರಧಾನಿಗೆ ಮಾಧ್ಯಮ ಸಲಹೆಗಾರ ಸಂಜಯ ಬಾರು ಬರೆದ ಪುಸ್ತಕದಲ್ಲಿ ಇವು ಪ್ರಸ್ತಾಪವಾಗಿವೆ. 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಹೊತ್ತಗೆಯ ಅಂಶಗಳನ್ನು ಪ್ರಧಾನಿ ಕಾರ್ಯಾಲಯ ತಿರಸ್ಕರಿಸಿದೆ.
ಬಾರು ಅಂಶಗಳು
-ಹಿರಿಯ ಸಚಿವರು ಪ್ರಧಾನಿಗೆ ಏನನ್ನೂ ಹೇಳುತ್ತಿರಲಿಲ್ಲ.
-ಆಗಿನ ವಿದೇಶ ಸಚಿವ ಪ್ರಣಬ್, ಸೋನಿಯಾಗೆ ಹೇಳಿ 3 ದಿನ ಬಳಿಕ ಪ್ರಧಾನಿಗೆ ಅಮೆರಿಕ ಪ್ರವಾಸ ವರದಿ ನೀಡಿದ್ದರು!
-ವಯಲಾರ್ ರವಿ, ಎ.ಕೆ. ಆ್ಯಂಟನಿ ಸೇರಿದಂತೆ ಕೆಲ ಹಿರಿಯ ಸಚಿವರು ಪ್ರಧಾನಿಗೆ ಸಂಕಷ್ಟ ಸಮಯ ತಂದಿಟ್ಟಿದ್ದರು.
-ನರೇಗಾ, ಭಾರತ್ ನಿರ್ಮಾಣ್ ಸೇರಿ ಕೆಲವು ಯೋಜನೆಗಳ ಬಗ್ಗೆ ಸೋನಿಯಾ, ರಾಹುಲ್ ಮಾತ್ರ ಹೆಗ್ಗಳಿಕೆ ಪಡೆದಿದ್ದರು.
-ರಾಷ್ಟ್ರೀಯ ಸಲಹಾಗಾರ ಮಂಡಳಿ(ಎನ್ಎಸಿ) ರಚಿಸಿದ್ದೇ ಸೋನಿಯಾಗೆ ಅಧಿಕಾರ ದೊರೆಯುವಂತೆ ಮಾಡಲು.
-ಪ್ರಧಾನಿ ಸಂಬಂಧ ಚಿದು ಜೊತೆಗೇ ಚೆನ್ನಾಗಿತ್ತು. ಆದರೆ ಪ್ರಣಬ್ ಸೌಜನ್ಯಕ್ಕೂ ಬಜೆಟ್ ಕರಡು ತೋರಿಸುತ್ತಿರಲಿಲ್ಲ.
-ಒಂದು ವೇಳೆ 2009ರಲ್ಲಿ ಯುಪಿಎ ಸೋತಿದ್ದರೆ ಸಂಪೂರ್ಣ ಹೊಣೆ ಪ್ರಧಾನಿಯವರದ್ದೇ ಆಗಿರುತ್ತಿತ್ತು.
-ಸಂಪುಟಕ್ಕೆ 2009ರಲ್ಲಿ ರಾಜಾ, ಟಿ.ಆರ್. ಬಾಲು ತೆಗೆದುಕೊಳ್ಳಲು ಒಪ್ಪಿರಲಿಲ್ಲ. ಆದರೆ ಇವರ ಮಾತೇ ನಡೆಯಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


