ಪ್ರಧಾನ ಸುದ್ದಿ

ಕನ್ನಡಕ್ಕೆ ಮೂರೇ ಪ್ರಶಸ್ತಿ

ಕನ್ನಡಕ್ಕೆ ಮೂರೇ ಪ್ರಶಸ್ತಿ
Published On :

-ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ಪಿ.ಶೇಷಾದ್ರಿ ನಿರ್ದೇಶನದ 'ಡಿಸೆಂಬರ್ 1' ಚಿತ್ರ ಅತ್ಯುತ್ತಮ ಪ್ರಾದೇಶಿಕ ಪ್ರಶಸ್ತಿ (ರಜತ ಕಮಲ) ಪಡೆದಿದೆ. ಇದೇ ಚಿತ್ರದ ಅತ್ಯುತ್ತಮ ಚಿತ್ರಕಥೆಗೆ (ಮೂಲ) ಪಿ.ಶೇಷಾದ್ರಿ 'ರಜತ ಕಮಲ' ಪಡೆದಿದ್ದಾರೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಪಕೃತಿ' ಚಿತ್ರಕ್ಕೆ  ಚಿತ್ರಕಥೆ (ರೂಪಾಂತರ) ಬರೆದ  ಪಂಚಾಕ್ಷರಿ  ರಜತ ಕಮಲ ಗಳಿಸಿದ್ದಾರೆ. ಪಿ.ಶೇಷಾದ್ರಿ ಅವರಿಗೆ ಇದು ಎಂಟನೇ ರಾಷ್ಟ್ರೀಯ ಪ್ರಶಸ್ತಿ.
ಲಕ್ಷ್ಮಿಕಾಂತ್ ಶೆಟ್‌ಗಾಂವ್‌ಕರ್ ನಿರ್ದೇಶನದ ಕೊಂಕಣಿ ಚಿತ್ರ 'ಬಾಗ ಬೀಚ್‌' ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದಿದೆ. 61ನೇ ರಾಷ್ಟ್ರೀಯ ಚಲನಚಿತ್ರಪ್ರಶಸ್ತಿಗಳನ್ನು ಬುಧವಾರ ಪ್ರಕಟಿಸಲಾಗಿದ್ದು,  ಮೂರೇ ಪ್ರಶಸ್ತಿಗಳಿಗೆ ಕನ್ನಡ ಚಿತ್ರರಂಗ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.
ಅತ್ಯುತ್ತಮ ಚಿತ್ರ:  ಆನಂದ್‌ಗಾಂಧಿ ನಿರ್ದೇಶನದ 'ಶಿಪ್ ಆಫ್ ಥೀಸಿಸ್‌' ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಮೊದಲ ಚಿತ್ರಕ್ಕೆ ನೀಡುವ ಇಂದಿರಾಗಾಂಧಿ ಪ್ರಶಸ್ತಿಯನ್ನು ನಾಗರಾಜ್ ಮಂಜುಳೆ ನಿರ್ದೇಶನದ ಮರಾಠಿ ಚಿತ್ರ 'ಫಂಡ್ರಿ' ಪಡೆದಿದೆ. ಒಲಂಪಿಕ್ ಪದಕ ವಿಜೇತ  ಮಿಲ್ಕಾ ಸಿಂಗ್ ಜೀವನಾಧಾರಿತ ಚಿತ್ರ 'ಭಾಗ್ ಮಿಲ್ಕಾ ಭಾಗ್‌' ಚಿತ್ರ 'ಅತ್ಯುತ್ತಮ ಮನರಂಜಾನಾ ಚಿತ್ರ 'ಪ್ರಶಸ್ತಿ ಗೆದ್ದಿದೆ.ರಾಷ್ಟ್ರೀಯ ಸಮಗ್ರತೆಗಾಗಿ ನೀಡುವ ನರ್ಗಿಸ್ ದತ್ತ್ ಪ್ರಶಸ್ತಿ ಬಾಲು ಮಹೇಂದ್ರ ನಿರ್ದೇಶನದ 'ತಲೈ ಮುರುಗಳ್‌'ಚಿತ್ರದ ಪಾಲಾಗಿದೆ.
ಸಾಮಾಜಿಕ ವಿಷಯಗಳ ಕುರಿತ ಅತ್ಯುತ್ತಮ ಚಿತ್ರ ಪ್ರಶಸ್ತಿ ಮರಾಠಿಯ 'ತುಹ್ಯಾ ಧರ್ಮ ಕೊಂಚ'ಕ್ಕೆ ದಕ್ಕಿದೆ. ಮಲಯಾಳಂನ 'ಪೆರಾರಿಯಾಥವರ್‌' ಪರಿಸರ ಕುರಿತ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಬಾತುಲ್ ಮುಕ್ತಿಯಾರ್ ನಿರ್ದೇಶನದ 'ಕಪಾಲ್‌' ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಗೆದ್ದಿದೆ.

ಡಿಸೆಂಬರ್ 1
ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ರೂಪುಗೊಂಡ ಚಿತ್ರ 'ಡಿಸೆಂಬರ್ 1'. ಡಿಸೆಂಬರ್ 1ರಂದು ಉತ್ತರ ಕರ್ನಾಟಕ ಗ್ರಾಮವೊಂದರ ಮದೇವಪ್ಪ- ದೇವಕ್ಕನ  ಮನೆಗೆ ಮುಖ್ಯಮಂತ್ರಿ ಭೇಟಿ. ಭೇಟಿ ಹಿನ್ನೆಲೆಯಲ್ಲಿ ಮನೆ ನವೀಕರಣ. ನಂತರ ಮುಖ್ಯಂತ್ರಿಗಳು ಮನೆಗೆ ಬಂದಾಗ ತಮ್ಮ ಮನೆಯಲ್ಲೇ ಈ ಕುಟುಂಬ ಅನುಭವಿಸುವ ಪರಕೀಯತೆ, ಅವಮಾನ, ಮುಜುಗರ, ಭ್ರಮನಿರಸನಗಳ ಜತೆಗೆ ಸಂವೇದನಾ ರಹಿತ ಆಡಳಿತ ಯಂತ್ರದ ಅಮಾನವೀಯತೆಯನ್ನು ಕಟ್ಟಿಕೊಡುವ ಚಿತ್ರ.

ಪ್ರಶಸ್ತಿ ಪಡೆದವರು
ನಿರ್ದೇಶಕ: ಶಾಹಿದ್ (ಹಿಂದಿ)- ಹಂಸಲ್ ಮೆಹ್ತಾ.
ನಟ:  ರಾಜ್‌ಕುಮಾರ್(ಶಾಹಿದ್) ಮತ್ತು ಸೂರಜ್ ವಂಜರಮೂಡು(ಪೆರಾರಿಯಾಥವರ್)
ನಟಿ: ಗೀತಾಂಜಲಿ ಥಾಪಾ (ಲೈಯರ್ಸ್ ಡೈಸ್)
ಪೋಷಕ ನಟ: ಸೌರಭ್ ಶುಕ್ಲಾ (ಜಾಲಿ ಎಲ್‌ಎಲ್‌ಬಿ)
ಪೋಷಕ ನಟಿ: ಅಮೃತ ಸುಭಾಷ್ (ಅಸ್ತು) ಆಯಿದಾ ಅಲ್‌ಕಾಶಿಪ್ (ಶಿಪ್‌ಆಫ್ ಥೀಸಿಸ್)
ಬಾಲ ಕಲಾವಿದ: ಸೋಮನಾಥ್ ಅವಗಡೆ (ಫಂಡ್ರಿ) ಸಾಧನ (ತಂಗ ಮೀಂಗಳ್)
ಹಿನ್ನೆಲೆ ಗಾಯಕ: ರೂಪಾಂಕರ್
ಹಿನ್ನೆಲೆ ಗಾಯಕಿ: ಬೇಲಾ ಶಿಂಧೆ
ಛಾಯಾಗ್ರಹಣ: ರಾಜೀವ್ ರಾಯ್ (ಲೈಯರ್ಸ್ ಡೈಸ್)
ಚಿತ್ರಕಥೆ: (ಮೂಲ)- ಪಿ.ಶೇಷಾದ್ರಿ (ಡಿಸೆಂಬರ್ 1)
ಚಿತ್ರಕತೆ: (ರೂಪಾಂತರ) ಪಂಚಾಕ್ಷರಿ (ಪ್ರಕೃತಿ)
ಸಂಗೀತ ನಿರ್ದೇಶಕ: ಕಬಿರ್ ಸುಮನ್ ಜತಿಶ್ವರ್
ಹಿನ್ನೆಲೆ ಸಂಗೀತ: ಶಂತನು ಮೊಯಿತ್ರಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.