ಅಕಾಲಿಕ ವರುಣನ ಅಬ್ಬರಕ್ಕೆ ಜನಾತಂಕ

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಶನಿವಾರವೂ ಅಕಾಲಿಕ ಮಳೆಯಾಗಿದ್ದು ಭಾರಿ ಪ್ರಮಾಣದ ಬೆಳೆಹಾನಿ ಹಾಗೂ ಜಾನುವಾರುಗಳ ಸಾವು ಸಂಭವಿಸಿದೆ. ಮಡಿಕೇರಿಯಲ್ಲಿ ಸಿಡಿಲಿಗೆ ವ್ಯಕ್ತಿಯೊಬ್ಬರು ಅಸನೀಗಿದ್ದಾರೆ.
ಗದಗದಲ್ಲಿ ಸಿಡಿಲು ಬಡಿದು 29 ಕುರಿಗಳು ಸಾವನ್ನಪ್ಪಿದ್ದು, ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಲ್ಲಿ ಬಿರುಗಾಳಿಗೆ ಬೃಹತ್ ಆಲದ ಮರ ಉರುಳಿ ಬಿದ್ದಿದೆ. ಇದರಿಂದಾಗಿ ಹಿರೇಕೆರೂರು- ಚಿಕ್ಕೇರೂರು ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಧಾರವಾಡ, ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ತುಂತುರು ಮಳೆಯಾಗಿದೆ. ಮಿಂಚು-ಗುಡುಗು ಆರ್ಭಟ ಇತ್ತು. ಕೆಲವು ಕಡೆ ರಭಸದ ಗಾಳಿಯಿಂದಾಗಿ ಮಾವಿನ ಫಸಲು ನೆಲಕ್ಕುರುಳಿದೆ.
ಬೆಳಗಾವಿ ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನ್ನ ಗಾಳಿ, ಗುಡುಗು ಸಿಡಿಲು ಸಹಿತ ಮಳೆಗೆ ಹಲವಾರು ಗಿಡ-ಮರಗಳು ನೆಲಕ್ಕುರಳಿ ಬಿದ್ದಿವೆ. ಅನೇಕ ಮನೆಗಳ ಛಾವಣಿಗಳು ಹಾರಿಹೋಗಿವೆ. ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳ್ಳಿ ಹೊಬಳಿಯಲ್ಲಿ ಒಟ್ಟು 43 ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, 4 ವಿದ್ಯುತ್ ಪರಿವರ್ತಕ(ಟಸಿ)ಗಳು ಸುಟ್ಟು ಹೋಗಿವೆ. ಎಮ್ಮೆಯೊಂದು ಸಾವನ್ನಪ್ಪಿದೆ. ಜಿಲ್ಲೆಯ ಹಲವು ಕಡೆಗಳಲ್ಲಿ ಬಾಳೆ, ಮಾವು, ಗೋವಿನ ಜೋಳ, ಕಬ್ಬು ಸೇರಿದಂತೆ ಲಕ್ಷಾಂತರ ರುಪಾಯಿ ಮೌಲ್ಯದ ಬೆಳೆದು ನಿಂತಿದ್ದ ಫಸಲು ಅಕಾಲಿಕ ಮಳೆಯ ಹೊಡೆತಕ್ಕೆ ಧರೆಗುರುಳಿ ಬಿದ್ದಿವೆ.
ಮಡಿಕೇರಿ: ಮೊಬೈಲ್ನಲ್ಲಿ ಮಾತನಾಡುತ್ತಿದ್ದ ವೇಳೆ ಸಿಡಿಲು ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕರಡ ಗ್ರಾಮದಲ್ಲಿ ನಡೆದಿದೆ.
ಭಾರತೀನಗರ: ಮಂಡ್ಯ ಜಿಲ್ಲೆ ಭಾರತೀನಗರದ ಹಲವೆಡೆ ಶುಕ್ರವಾರ ರಾತ್ರಿ ಭಾರಿ ಮಳೆಯಾಗಿದೆ. ಎರಡು ವಿದ್ಯುತ್ ಕಂಬಗಳು ಮನೆಯೊಂದರ ಮೇಲೆ ಬಿದ್ದ ಘಟನೆ ಸಮೀಪದ ಹಾಗಲಹಳ್ಳಿಯಲ್ಲಿ ನಡೆದಿದೆ.
ಚಳ್ಳಕೆರೆ: ತಾಲೂಕಿನ ಸಾಣೀಕೆರೆ, ಖಡೇನಹಳ್ಳಿ ಗೊಲ್ಲರಹಟ್ಟಿ, ಗಂಜಿಗುಂಟೆ ಲಂಬಾಣಿಹಟ್ಟಿ, ಗೋಪನಹಳ್ಳಿ, ಪರಶುರಾಮಪುರ ಹೋಬಳಿಯ ದೊಡ್ಡ ಚಲ್ಲೂರು, ಟಿ.ಎನ್. ಕೋಟೆ ಮುಂತಾದ ಕಡೆ ಸುರಿದ ಆಲಿಕಲ್ಲು ಭಾರಿ ಹಾನಿ ಸಂಭವಿಸಿದೆ. ಹಲವಾರು ಮನೆಗಳ ಮೇಲ್ಭಾಗದ ಶೀಟ್ಗಳು ಹಾರಿ ಹೋಗಿವೆ. ಕೆಲವೆಡೆ ಪಪ್ಪಾಯಿ ಗಿಡಗಳು ನೆಲಕ್ಕುರುಳಿದ್ದು ಸಾಣೀಕೆರೆ ಗೊಲ್ಲರಹಟ್ಟಿಯಲ್ಲಿ ಕುರಿ ಹಾಗೂ ಮೇಕೆಗಳು ಮೃತಪಟ್ಟಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


