ಪ್ರಧಾನ ಸುದ್ದಿ

ಬಾಲಕಿಗೆ ಚಿತ್ರಹಿಂಸೆ ನೀಡಿದ ಮಲತಂದೆ

ಬಾಲಕಿಗೆ ಚಿತ್ರಹಿಂಸೆ ನೀಡಿದ ಮಲತಂದೆ
Published On :

ಪುತ್ತೂರು: ಆರು ವರ್ಷದ ಬಾಲಕಿಗೆ ಆಕೆಯ ತಾಯಿಯ ಕುಮ್ಮಕ್ಕಿನಿಂದಾಗಿ ಮಲತಂದೆ ಕತ್ತಿಯಿಂದ ಗೀರಿ, ಸಿಗರೇಟ್ ಬೆಂಕಿಯಿಂದ ಚುಚ್ಚಿ ಚಿತ್ರಹಿಂಸೆ ನೀಡಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುತ್ತೂರಿನ ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ನಿವಾಸಿ ಜೊಹರಾ ಎಂಬವರ ಮೊಮ್ಮಗಳು ಫಾಹಿಮಾ (6) ಗಾಯಗೊಂಡ ಬಾಲಕಿ. ಫಾಹಿಮಾಳ ತಾಯಿ ಫೌಜಿಯಾಳ ಎರಡನೇ ಪತಿ ಬೆಳ್ತಂಗಡಿಯ ಶಾಫಿ ಎಂಬಾತ ಮಗುವಿಗೆ ಚಿತ್ರ ಹಿಂಸೆ ನೀಡಿದ ಆರೋಪಿ. ತಾಯಿಯನ್ನು ಬಂಧಿಸಿದ್ದು, ಮಲತಂದೆ ತಲೆಮರೆಸಿ ಕೊಂಡಿದ್ದಾನೆ. ಪೊಲೀಸರು ಶೋಧ ನಡೆಸುತ್ತಿದ್ದಾರೆ.    

ತಾಯಿಯಿಂದಲೇ ವಿಷ
ಮಂಡ್ಯ:
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿಯೇ 11 ತಿಂಗಳ ಕಂದಮ್ಮನಿಗೆ ವಿಷ ಉಣಿಸಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಮಳವಳ್ಳಿ ತಾಲೂಕಿನ ಹಂಗಾರಪುರ ಗ್ರಾಮದಲ್ಲಿ ನಡೆದಿದೆ. ನಂಜುಂಡ ಮತ್ತು ರಂಜಿತಾ ದಂಪತಿ ಪುತ್ರಿ ಇಂಪನಾ (11 ತಿಂಗಳು)ಳಿಗೆ ತಾಯಿ ರಂಜಿತಾ ಬೆಳಗ್ಗೆ ಇಡ್ಲಿಯಲ್ಲಿ ಕೀಟನಾಶಕ ಬೆರೆಸಿ ತಿನ್ನಿಸಿದ್ದಾರೆ. ಅಲ್ಲದೇ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.