ಹಿಂದೂ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ

272 ಸ್ಥಾನಗಳ ಗುರಿ ಸಾಧನೆಗಾಗಿ ಬಿಜೆಪಿ ತನ್ನ ಚುನಾವಣಾ ತಂತ್ರವನ್ನು ವಿವಿಧ ಹಂತಗಳಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿದೆ. ಮುಖ್ಯವಾಗಿ ಮುಂದಿನ ಹಂತಗಳಲ್ಲಿ ಹಿಂದಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಉತ್ತರಪ್ರದೇಶ, ಬಿಹಾರ, ಉತ್ತರಾಖಂಡ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್ ಲೋಕಸಭಾ ಕ್ಷೇತ್ರಗಳ ಚುನಾವಣೆ ಮೇಲೆ ಬಿಜೆಪಿ ಹೆಚ್ಚು ಗಮನ ಕೇಂದ್ರೀಕರಿಸಿದೆ. ಇವುಗಳಲ್ಲಿ 81 ಸ್ಥಾನಗಳು ಉತ್ತರಪ್ರದೇಶ ಮತ್ತು ಬಿಹಾರದಲ್ಲೇ ಇದೆ. ಹಾಗಾಗಿ ಈ ರಾಜ್ಯಗಳಲ್ಲಿ ನಿರ್ಣಾಯಕವಾಗಿರುವ ಹಿಂದೂ ಮತಗಳನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನ ಆರಂಭಿಸಿದೆ ಕೇಸರಿ ಪಡೆ.
ಮೇಲ್ವರ್ಗಕ್ಕೆ ಸೀಮಿತವಾಗಿಲ್ಲ
ಮಧ್ಯಭಾರತದ ಈ ನಿರ್ಣಾಯಕ ರಾಜ್ಯಗಳಲ್ಲಿ ಬಿಜೆಪಿಯ ಬಲ ಈಗ ಕೇವಲ ಮೇಲ್ವರ್ಗಕ್ಕಷ್ಟೇ ಸೀಮಿತವಾಗಿಲ್ಲ. ಮೋದಿ ಅಲೆಯಲ್ಲಿ ತೇಲುತ್ತಿರುವ ಬಿಜೆಪಿ ಈ ಪ್ರದೇಶಗಳಲ್ಲಿ ಇತರೆ ಜಾತಿಗಳಿಗೂ ತನ್ನ ನೆಲೆಯನ್ನು ವಿಸ್ತರಿಸಿಕೊಂಡಿದೆ. ಈ ಭಾಗದಲ್ಲಿ ಹಿಂದುಳಿದ ವರ್ಗಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಿಜೆಪಿ ದೊಡ್ಡ ಸಂಖ್ಯೆಯಲ್ಲಿ ಹಿಂದುಳಿದ ವರ್ಗದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಹಿನ್ನೆಲೆಯಲ್ಲಿ ಒಬಿಸಿ ಮತದಾರರು ಕೂಡ ಸಹಜವಾಗಿಯೇ ಬಿಜೆಪಿಯತ್ತ ವಾಲುತ್ತಿದ್ದಾರೆ. ಇನ್ನು ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ್ ಜನಶಕ್ತಿ ಪಕ್ಷದ ಮೂಲಕ ದಲಿತರ ಮತಗಳನ್ನೂ ಸೆಳೆಯುವ ಪ್ರಯತ್ನ ನಡೆಯುತ್ತಿದೆ.
ಬಿಹಾರದಲ್ಲಿ
ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯದ ಕೆಲವು ಪ್ರದೇಶಗಳಲ್ಲಿ ಮುಸ್ಲಿಂ ಮತದಾರರೇ ನಿರ್ಣಾಯಕರು. ಹಾಗಾಗಿ ಈ ಪ್ರದೇಶದಲ್ಲಿ ಬಿಜೆಪಿಯ ಜಾತಿ ಲೆಕ್ಕಾಚಾರ ಅಷ್ಟು ಕೆಲಸ ಮಾಡಲ್ಲ. ಇದೇ ಕಾರಣಕ್ಕಾಗಿ ಬಿಜೆಪಿ ಕೂಡ ಬದಲಿ ತಂತ್ರ ಹೆಣೆಯುತ್ತಿದೆ. ಬಿಹಾರದ ಅರಾರಿಯಾ, ಕೃಷ್ಣಗಂಜ್, ಕಟಿಹಾರ್ ಮತ್ತು ಪುರ್ನಿಯಾದಲ್ಲಿ ಶೇ.40ಕ್ಕಿಂತಲೂ ಹೆಚ್ಚು ಮುಸ್ಲಿಂ ಮತದಾರರಿದ್ದಾರೆ. ಹಾಗಾಗಿ ಬಿಜೆಪಿ ಈ ಭಾಗದಲ್ಲೆಲ್ಲೂ ಮುಖ್ಯಮಂತ್ರಿ ನಿತೀಶ್ ಕುಮಾರ್ರನ್ನು ಗುರಿ ಮಾಡಿಕೊಂಡು ಯಾವುದೇ ದಾಳಿ ಮಾಡುತ್ತಿಲ್ಲ. ಈ ಮೂಲಕ ಮುಸ್ಲಿಂ ಮತದಾರರು ಆರ್ಜೆಡಿಯತ್ತ ತಿರುಗುವಂತೆ ನೋಡಿಕೊಳ್ಳಲಾಗಿದೆ. ಮುಸ್ಲಿಮರ ಮತವಿಭಜನೆಯಾದರೆ ಆರ್ಜೆಡಿ ಮತ್ತು ಜೆಡಿಯು ಎರಡಕ್ಕೂ ನಷ್ಟ ಎನ್ನುವುದು ಬಿಜೆಪಿ ಲೆಕ್ಕಾಚಾರ.
ಉತ್ತರಪ್ರದೇಶದಲ್ಲಿ...
ಉತ್ತರಪ್ರದೇಶದಲ್ಲೂ ನಾಲ್ಕನೇ ಐದರಷ್ಟು ಕ್ಷೇತ್ರಗಳಲ್ಲಿ ಮುಸ್ಲಿಮರೇ ನಿರ್ಣಾಯಕರು. ಆದರೆ, ಇಲ್ಲಿ ಬಿಹಾರದಲ್ಲಿ ಅನುಸರಿಸುತ್ತಿರುವ ತಂತ್ರ ಬಿಜೆಪಿ ಅನುಸರಿಸುತ್ತಿಲ್ಲ. ಮುಸ್ಲಿಂ ಮತಗಳು ಎಸ್ಪಿ, ಬಿಎಸ್ಪಿ ನಡುವೆ ಹಂಚಿ ಹೋಗುತ್ತದೆ ಎಂದು ನಂಬಿಕೊಂಡಿದೆ. ಆದರೆ, ವಾರಾಣಸಿ ಸೇರಿದಂತೆ ಪಶ್ಚಿಮ ಉತ್ತರಪ್ರದೇಶದ ಬಹುತೇಕ ಭಾಗಗಳಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ ಇದೆ.
ಮಧ್ಯಪ್ರದೇಶ
10% ಕ್ಕಿಂತ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಸ್ಥಾನ
15% ಕ್ಕಿಂತ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಸ್ಥಾನ 04
ಇನ್ನು ಚುನಾವಣೆ ನಡೆಯಬೇಕಿರುವ ಸ್ಥಾನ 10
ಗುಜರಾತ್
10% ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಸ್ಥಾನ 10
15% ಕ್ಕಿಂತ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಸ್ಥಾನ 02
ಮತದಾನ ನಡೆಯಬೇಕಿರುವ ಸ್ಥಾನ 26
ಮಹಾರಾಷ್ಟ್ರ
10% ಕ್ಕಿಂತ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಸ್ಥಾನ 16
15% ಕ್ಕಿಂತ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಸ್ಥಾನ 08
ಮತದಾನ ನಡೆಯ ಬೇಕಿರುವ ಸ್ಥಾನ 19
ಉತ್ತರಾಖಂಡ
10% ಕ್ಕಿಂತ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಸ್ಥಾನ 03
15% ಕ್ಕಿಂತ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಸ್ಥಾನ 02
ಮತದಾನ ನಡೆಯಬೇಕಿರುವ ಸ್ಥಾನ 05
(ಏ.24)
6ನೇ ಹಂತದಲ್ಲಿ ಚುನಾವಣೆ ಎದುರಿಸಲಿರುವ ರಾಜ್ಯಗಳು
06 ಅಸ್ಸಾಂ
07 ಬಿಹಾರ
07 ಛತ್ತೀಸ್ಗಡ
01 ಜಮ್ಮು ಮತ್ತು ಕಾಶ್ಮೀರ
04 ಜಾರ್ಖಂಡ್
10 ಮಧ್ಯಪ್ರದೇಶ
19 ಮಹಾರಾಷ್ಟ್ರ
01 ಪುದುಚೇರಿ
05 ರಾಜಸ್ಥಾನ
39 ತಮಿಳುನಾಡು
12 ಉತ್ತರಪ್ರದೇಶ
06 ಪಶ್ಚಿಮ ಬಂಗಾಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


