ಪ್ರಧಾನ ಸುದ್ದಿ

ದೇವಿಶ್ರೀ ಜ್ಯೋತಿಷಿಯ ಪೋಲಿ ಭವಿಷ್ಯ

ದೇವಿಶ್ರೀ ಜ್ಯೋತಿಷಿಯ ಪೋಲಿ ಭವಿಷ್ಯ
Published On :

ಬೆಂಗಳೂರು: ಜ್ಯೋತಿಷ್ಯ ಹೇಳುವ ಮೂಲಕ ಜನರ ಸಂಕಷ್ಟಗಳನ್ನು ಬಗೆಹರಿಸುವುದಾಗಿ ಹೇಳಿ ಮಂಕು ಬೂದಿ ಎರಚುತ್ತಿದ್ದ ದೇವಿಶ್ರೀ ಗುರೂಜಿ ಅಲಿಯಾಸ್ ರಾಮಸ್ವಾಮಿ 'ರಾಸಲೀಲೆ' ಬಯಲಾಗಿದೆ.
ದಿನ ಬೆಳಗಾದರೆ ಟಿವಿ ವಾಹಿನಿಗಳಲ್ಲಿ ನೇರಾ ನೇರ ಪ್ರಶ್ನೆಗಳಿಗೆ ದೇವಲೋಕದಿಂದ ಇಳಿದು ಬಂದವನಂತೆ ಪುಂಖಾನುಪುಂಖವಾಗಿ ಬಿಟ್ಟಿ ಸಲಹೆಗಳನ್ನು ನೀಡುತ್ತಿದ್ದ ಗುರೂಜಿ ತನ್ನ ಕಚೇರಿಯಲ್ಲಿ ಮಹಿಳೆಯೊಂದಿಗೆ ಪೋಲಿಯಾಟ ಆಡಿದ್ದಾನೆ. ಆಶ್ರಮದಲ್ಲಿ ಕೆಲಸ ಮಾಡುವ ಮಹಿಳೆಯೊಂದಿಗೆ ಚಕ್ಕಂದ ಆಡುತ್ತಾ, ಚುಂಬಿಸುವುದು, ತಬ್ಬಿಕೊಂಡು ನುಲಿಯುವ ದೃಶ್ಯಗಳು ಟಿವಿ ಚಾನಲ್‌ಗಳಲ್ಲಿ ಪ್ರಸಾರವಾಗಿವೆ. ರಾಸಲೀಲೆ ದೃಶ್ಯ ಟಿವಿ ಚಾನಲ್‌ಗಳಲ್ಲಿ ಪ್ರಸಾರವಾಗುತ್ತಿದ್ದಂತೆ ದೇವಿಶ್ರೀ ಪರಾರಿಯಾಗಿದ್ದಾನೆ.
ಎಚ್‌ಎಸ್‌ಆರ್ ಬಡಾವಣೆ 26ನೇ ಕ್ರಾಸ್‌ನಲ್ಲಿರುವ ಎರಡು ಮಹಡಿ ಕಟ್ಟಡದಲ್ಲಿ ದೇವಿಶ್ರೀ ಪ್ರತಿಷ್ಠಾನ, ಆಶ್ರಮ, ಸ್ವಲ್ಪ ದೂರದಲ್ಲಿ ಸಂಬಂಧಿ, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದ. ಸಮಸ್ಯೆ ಎಂದು ಹೇಳಿಕೊಂಡು ಬಂದ ಮಹಿಳೆಯೊಬ್ಬರ ಬಗ್ಗೆ ಮಾಹಿತಿ ಸಂಗ್ರಹಿಸಿದ ಗುರೂಜಿ ತನ್ನ ಆಶ್ರಮದಲ್ಲೇ ಕೆಲಸ ಕೊಟ್ಟಿದ್ದ. ಆದರೆ, ಬರ ಬರುತ್ತಾ ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡು ರಾಸಲೀಲೆ ನಡೆಸಿದ್ದಾನೆ. ಈ ದೃಶ್ಯ ಕಚೇರಿಯಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪ್ರತಿಭಟನೆ
ರಾಸಲೀಲೆ ದೃಶ್ಯಗಳು ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ ಆಶ್ರಮದ ಸಿಬ್ಬಂದಿ ಬೋರ್ಡ್‌ಗಳನ್ನು ತೆರವುಗೊಳಿಸಿದ್ದಾರೆ. ಕರ್ನಾಟಕ ಯುವ ಸೇನೆ ಸಂಘಟನೆ, ನೂರಾರು ಜನ ಆಶ್ರಮದ ಎದುರು ಪ್ರತಿಭಟನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.