ಪ್ರಧಾನ ಸುದ್ದಿ

ಕತ್ತಲೆ ಬದುಕಿಗೆ 'ನವಶಕ್ತಿ' ಬೆಳಕು

Published On :

ಬೆಳಗಾವಿ: ಮನಸ್ಸಿದ್ದರೆ ಮಾರ್ಗ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ ಗೋಕಾಕದ ಲೈಂಗಿಕ ಕಾರ್ಯಕರ್ತೆಯರು. ಸ್ವಾವಲಂಬಿ ಬದುಕಿನ ಕನಸು ಕಂಡವರಿಗೆ ಕಾಣಿಸಿದ್ದು ಸಹಕಾರಿ ತತ್ವ. ಫಲವಾಗಿ ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದಿದೆ ನವಶಕ್ತಿ ಮಹಿಳಾ ವಿವಿಧೋದ್ದೇಶಗಳ ಸಹಕಾರಿ ಸಂಘ.
ಸಂಘವು ಲೈಂಗಿಕ ಕಾರ್ಯಕರ್ತೆಯರಿಗೆ ಆರ್ಥಿಕ ನೆರವು ನೀಡುತ್ತಿದ್ದು, ಸ್ವಾವಲಂಬಿ ಜೀವನ ಸಾಗಿಸಲು ಅಗತ್ಯವಿರುವ ಸಣ್ಣಪುಟ್ಟ ಸಹಾಯ ಮಾಡುತ್ತಿದೆ. ಮಕ್ಕಳ ಶಿಕ್ಷಣ ಮತ್ತಿತರ ಅಗತ್ಯ ಸಂದರ್ಭದಲ್ಲಿ ಸಾಲ ನೀಡಲಾಗುತ್ತಿದೆ. ಇದಲ್ಲದೇ ಉಳಿತಾಯ ಮನೋಭಾವವನ್ನು ಬಿತ್ತುವ ಮಹತ್ವದ ಕಾರ್ಯವನ್ನೂ ಮಾಡುತ್ತಿದ್ದು, ಒಂದು ವರ್ಷದಲ್ಲೇ 10 ಲಕ್ಷಕ್ಕೂ ಹೆಚ್ಚು ಮೊತ್ತ ಠೇವಣಿ ರೂಪದಲ್ಲಿ ಸಂಗ್ರಹವಾಗಿದೆ. ಆ ಮೂಲಕ
ಪರಿಸ್ಥಿತಿಯ ಒತ್ತಡದಿಂದಲೋ, ಮೋಸದಿಂದಲೋ ಈ ವೃತ್ತಿಗೆ ಇಳಿದಿರುವ ಲೈಂಗಿಕ ಕಾರ್ಯಕರ್ತೆಯರ ಬದುಕಿನಲ್ಲಿ ಹೊಸ ಬೆಳಕು ಮೂಡಿಸಿದೆ.
ಕಳೆದ ವರ್ಷ ಜೂನ್‌ನಲ್ಲಿ ಸ್ಥಾಪನೆಗೊಂಡ ಸಂಘ ಬೆಳಗಾವಿ ಜಿಲ್ಲಾದ್ಯಂತ ಕಾರ್ಯಚಟುವಟಿಕೆ ವಿಸ್ತರಿಸಲು ಉದ್ದೇಶಿಸಿದೆ. ಇದು ರಾಜ್ಯದಲ್ಲಿ ಲೈಂಗಿಕ ಕಾರ್ಯಕರ್ತೆಯರ ಎರಡನೇ ಸಹಕಾರ ಸಂಘ. ಈಗಾಗಲೇ ಬೆಂಗಳೂರಿನಲ್ಲಿ ಇಂತಹ ಸಂಘವೊಂದು ಸ್ಥಾಪನೆಯಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ.1432 ಸದಸ್ಯೆಯರು
ಸದ್ಯ ಗೋಕಾಕ ನಗರದಲ್ಲಿ ಬಾಡಿಗೆ ಕಟ್ಟಡವೊಂದರಲ್ಲಿ ಕಚೇರಿ ಹೊಂದಿರುವ ಸಂಘವು ರು. 10.75 ಲಕ್ಷ ಠೇವಣಿ ಹೊಂದಿದೆ.

1432 ಸದಸ್ಯೆಯರು
ಸದ್ಯ ಗೋಕಾಕ ನಗರದಲ್ಲಿ ಬಾಡಿಗೆ ಕಟ್ಟಡವೊಂದರಲ್ಲಿ ಕಚೇರಿ ಹೊಂದಿರುವ ಸಂಘವು ರು. 10.75 ಲಕ್ಷ ಠೇವಣಿ ಹೊಂದಿದೆ. 1432 ಲೈಂಗಿಕ ಕಾರ್ಯಕರ್ತೆಯರು ಸದಸ್ಯತ್ವ ಪಡೆದಿದ್ದಾರೆ. ಈವರೆಗೆ 295 ಜನರಿಗೆ ರು. 8 ಲಕ್ಷ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿಯೊಬ್ಬರಿಗೆ ತಲಾ ರು. 10ರಿಂದ 15 ಸಾವಿರವರೆಗೆ ಸಾಲ ಸೌಲಭ್ಯ ಒದಗಿಸುತ್ತಿದೆ. 647 ಉಳಿತಾಯ ಖಾತೆಗಳಿದ್ದರೆ, 980 ಪಿಗ್ಮಿ ಖಾತೆಗಳಿವೆ. ಅಧ್ಯಕ್ಷೆ, ಉಪಾಧ್ಯಕ್ಷೆ, ಕಾರ್ಯದರ್ಶಿ ಮತ್ತು ಖಜಾಂಚಿಯನ್ನು ಒಳಗೊಂಡ 11 ಸದಸ್ಯರ ಆಡಳಿತ ಮಂಡಳಿಯಲ್ಲಿ  ಮೂವರು ಎಚ್‌ಐವಿ ಸೋಂಕಿತರು.
ಆರ್ಥಿಕ ನೆರವಿನ ಧ್ಯೇಯ
ಕ್ಲಿಷ್ಟ ಸಮಸ್ಯೆಗಳ ಮಧ್ಯೆ ಜೀವನ ಸಾಗಿಸುತ್ತಿರುವವ ಲೈಂಗಿಕ ಕಾರ್ಯಕರ್ತೆಯರಿಗೆ ಆರ್ಥಿಕ ನೆರವು ನೀಡುವುದೇ ಸಂಸ್ಥೆಯ ಮುಖ್ಯ ಧ್ಯೇಯ. ಲೈಂಗಿಕ ಕಾರ್ಯಕರ್ತೆಯರು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸಬಲರಾಗಬೇಕು. ಗೌರವದಿಂದ ಬದುಕಬೇಕು. ಅವರ ಸಂಕಷ್ಟ ದೂರವಾಗಬೇಕು ಎಂಬ ಸದುದ್ದೇಶದಿಂದ ಎಲ್ಲರೂ ಸಂಘಟಿತರಾಗಿ ಸಹಕಾರಿ ಸಂಸ್ಥೆಯನ್ನು ಆರಂಭಿಸಲಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಈ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲಾಗುವುದು.
- ಗಂಗವ್ವ ತೇಲಿ, ಸಂಸ್ಥೆಯ ಉಪಾಧ್ಯಕ್ಷೆ

 ಶ್ರೀಶೈಲ ಮಠದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.