ಪ್ರಧಾನ ಸುದ್ದಿ

ವಿದ್ಯುತ್ ಘಟಕ ಅಣುವಷ್ಟೂ ಆಸಕ್ತಿ ಇಲ್ಲ

ವಿದ್ಯುತ್ ಘಟಕ ಅಣುವಷ್ಟೂ ಆಸಕ್ತಿ ಇಲ್ಲ
Published On :

ಕಾರವಾರ:  ರಾಜ್ಯ ಸರ್ಕಾರದ ಪರಮ ನಿರ್ಲಕ್ಷ್ಯವೋ, ನಿರಾಸಕ್ತಿಯೋ ಗೊತ್ತಿಲ್ಲ; ಕೈಗಾದಲ್ಲಿ ತಲಾ 700 ಮೆ.ವ್ಯಾ.ಸಾಮರ್ಥ್ಯದ ಎರಡು ಅಣು ವಿದ್ಯುತ್ ಘಟಕಗಳಿಗೆ ಕೇಂದ್ರ ಅನುಮತಿ ನೀಡಿದ್ದರೂ ರಾಜ್ಯ ಸರ್ಕಾರ ತನ್ನ ನಿಲುವು ಪ್ರಕಟಿಸದೆ ಯೋಜನೆ ನನೆಗುದಿಗೆಗೆ ಬಿದ್ದಿದೆ.
2012ರ ಜೂನ್‌ನಲ್ಲೇ ಕೇಂದ್ರ ಸಂಪುಟ ಕೈಗಾ 5 ಹಾಗೂ 6ನೇ ಘಟಕಕ್ಕೆ ಅನುಮತಿ ನೀಡಿದೆ. ಅದಾಗಿ ಎರಡು ವರ್ಷ ಕಳೆಯುತ್ತ ಬಂದರೂ ಕೇಂದ್ರಕ್ಕೆ ರಾಜ್ಯ ತನ್ನ ಒಪ್ಪಿಗೆ ಪತ್ರ ನೀಡಿಲ್ಲ.
ಬೇರೆ ಪೈಪೋಟಿ:  ಕರ್ನಾಟಕ ತೆಪ್ಪಗಿರುವಾಗಲೇ, ಹರಿಯಾಣ, ರಾಜಸ್ಥಾನ, ಗುಜರಾತ್ ರಾಜ್ಯಗಳು ಪೈಪೋಟಿ ನಡೆಸಿ, ಕೇಂದ್ರಕ್ಕೆ ಪತ್ರ ಬರೆದವು. ಪರಿಣಾಮ ಆ ಮೂರೂ ರಾಜ್ಯಗಳಲ್ಲಿ ಈಗಾಗಲೇ ಕಾಮಗಾರಿ ಆರಂಭವಾಗಿವೆ. ಗುಜರಾತಿನ ಕಕ್ರಾಪಾರದಲ್ಲಿ 2015ರ ವೇಳೆಗೆ ಘಟಕ ನಿರ್ಮಾಣ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಕೈಗಾ ಸೇರಿದಂತೆ ಈ ನಾಲ್ಕೂ ಕಡೆಗಳಿಗೆ ಕೇಂದ್ರ ಒಂದೇ ಸಮಯದಲ್ಲಿ ಅನುಮತಿ ನೀಡಿತ್ತು.
ಅಣು ವಿದ್ಯುತ್ ನಿಗಮಕ್ಕೆ ಏಕಕಾಲದಲ್ಲಿ ಮೂರು ಕಡೆ ಮಾತ್ರ ಘಟಕ ನಿರ್ಮಾಣ ಕೈಗೆತ್ತಿಕೊಳ್ಳುವ ಸಾಮರ್ಥ್ಯ ಇದೆ. ಒಂದೊಮ್ಮೆ ರಾಜ್ಯ ಸರ್ಕಾರ ಇನ್ನು ಒಪ್ಪಿಗೆ ಪತ್ರ ಬರೆದರೂ ಹರಿಯಾಣ, ರಾಜಸ್ಥಾನ ಹಾಗೂ ಗುಜರಾತ್‌ನಲ್ಲಿ ಕಾಮಗಾರಿ ಮುಗಿದ ಮೇಲಷ್ಟೇ ಇಲ್ಲಿ ಕೆಲಸ ಆರಂಭಿಸಬಹುದು ಎಂಬುದು ದುರದೃಷ್ಟಕರ.
1400
ಮೆ.ವ್ಯಾ. ವಿದ್ಯುತ್ ಉತ್ಪಾದನೆ ಆಗುತ್ತಿತ್ತು
700 ಮೆ.ವ್ಯಾ. ರಾಜ್ಯಕ್ಕೆ ದಕ್ಕುತ್ತಿತ್ತು
2012
ಆ ವರ್ಷವೇ ಕೇಂದ್ರ ಅನುಮತಿ ನೀಡಿತ್ತು

1400
ಮೆ.ವ್ಯಾ. ವಿದ್ಯುತ್ ಉತ್ಪಾದನೆ ಆಗುತ್ತಿತ್ತು
700 ಮೆ.ವ್ಯಾ. ರಾಜ್ಯಕ್ಕೆ ದಕ್ಕುತ್ತಿತ್ತು
2012
ಆ ವರ್ಷವೇ ಕೇಂದ್ರ ಅನುಮತಿ ನೀಡಿತ್ತು

 ಏನು ಲಾಭ?
ಕೇಂದ್ರದ ಹೊಸ ನೀತಿ ಪ್ರಕಾರ ಯಾವ ರಾಜ್ಯದಲ್ಲಿ ಅಣು ವಿದ್ಯುತ್ ಉತ್ಪಾದನೆಯಾಗುವುದೋ ಆ ರಾಜ್ಯಕ್ಕೆ ಒಟ್ಟು ಉತ್ಪಾದನೆಯ ಶೇ.50 ವಿದ್ಯುತ್ ಕೊಡಲೇಬೇಕು. ಅಂದರೆ ಕೈಗಾದಲ್ಲಿ ತಲಾ 700 ಮೆ.ವ್ಯಾ.ಗಳ (ಒಟ್ಟು 1400 ಮೆ.ವ್ಯಾ.) 2 ಘಟಕಗಳು ತಲೆ ಎತ್ತಿದಲ್ಲಿ ರಾಜ್ಯಕ್ಕೆ 700 ಮೆ.ವ್ಯಾ. ಲಭ್ಯ. ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರ ಹೆಚ್ಚುತ್ತಲೇ ಇದೆ; ಇನ್ನೊಂದೆಡೆ ಇಂಥ ಅವಕಾಶ ಬಳಸಿಕೊಳ್ಳಲು ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ. ಘಟಕಕ್ಕೆ ಭೂಸ್ವಾಧೀನದ ಆವಶ್ಯಕತೆಯೇ ಇರಲಿಲ್ಲ.ನಿಗಮದ ಬಳಿ ಭೂಮಿ ಇದೆ. ಸ್ಥಳಾಂತರ, ಪರಿಹಾರದ ಪ್ರಶ್ನೆಯೂ ಇಲ್ಲ. ಇನ್ನಷ್ಟು ಉದ್ಯೋಗಾವಕಾಶವೂ ಲಭ್ಯವಾಗುತ್ತಿತ್ತು.


- ವಸಂತಕುಮಾರ್ ಕತಗಾಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.