ಪ್ರಧಾನ ಸುದ್ದಿ

ಭಾರತ ನೇಪಾಳ ಸಂಬಂಧ ಗಂಗೆ, ಹಿಮಾಲಯದಂತೆ

ಭಾರತ ನೇಪಾಳ ಸಂಬಂಧ ಗಂಗೆ, ಹಿಮಾಲಯದಂತೆ
Published On :

ಕಠ್ಮಂಡು: ನೇಪಾಳದೊಂದಿಗಿನ ಭಾರತದ ಸಂಬಂಧದಲ್ಲಿ ಹೊಸ ಅಧ್ಯಾಯ ಬರೆಯಲು ಪ್ರಧಾನಿ ನರೇಂದ್ರ ಮೋದಿ  ಮುಂದಾಗಿದ್ದಾರೆ. ಇದೇ ಉದ್ದೇಶವನ್ನಿಟ್ಟುಕೊಂಡು ಅವರು ಭಾನುವಾರ ನೇಪಾಳ ಪ್ರವಾಸ ಆರಂಭಿಸಿದ್ದಾರೆ. ಭಾನುವಾರ ಇಲ್ಲಿನ ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಪ್ರಧಾನಿಗೆ ಆತ್ಮೀಯ ಸ್ವಾಗತ ದೊರೆಯಿತು. ಖುದ್ದು ನೇಪಾಳ ಪ್ರಧಾನಿ ಸುಶೀಲ್ ಕೊಯಿರಾಲಾ ಅವರೇ ಮೋದಿಯನ್ನು ಬರಮಾಡಿಕೊಂಡರು. ನಂತರ ಪ್ರಧಾನಿ ಮೋದಿ ಅವರು ನೇಪಾಳದ ಸಂಸತ್ ಅನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ನೇಪಾಳ ಪ್ರಧಾನಿ ಕೊಯಿರಾಲಾ ಹಾಗೂ ಮೋದಿ 3 ಒಪ್ಪಂದಗಳಿಗೆ ಸಹಿ ಹಾಕಿದರು. ಇದೇ ವೇಳೆ, ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಭಾರತವು ನೇಪಾಳಕ್ಕೆ 6,286  ಕೋಟಿ ಸಾಲ ನೀಡುವುದಾಗಿ ಪ್ರಧಾನಿ ಘೋಷಿಸಿದರು.

ಮೋದಿ ಹೇಳಿದ್ದೇನು?
- ನೇಪಾಳ- ನಮ್ಮ ಸಂಬಂಧ ಹಿಮಾಲಯ- ಗಂಗೆಯಷ್ಟು ಪ್ರಾಚೀನ.
- ನೀವೇನು ಮಾಡುತ್ತಿದ್ದೀರಿ ಎನ್ನುವುದರೊಳಗೆ ಮೂಗುತೂರಿಸೆವು. ಬದಲಾಗಿ ನೀವು ಸಾಗುವ ಪಥಕ್ಕೆ ಬೆಂಬಲ ನೀಡುವುದಷ್ಟೇ ನಮ್ಮ ಕೆಲಸ
- ಯುದ್ಧದ ಹಾದಿ ತೊರೆದು, ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಎಲ್ಲ ನೇಪಾಳಿಗರಿಗೂ ನನ್ನ ಅಭಿನಂದನೆಗಳು. ಸಾಮ್ರಾಟ ಅಶೋಕ ಯುದ್ಧ (ಸಮರ)ದಿಂದ ಬುದ್ಧ(ಜ್ಞಾನ)ನೆಡೆಗೆ ತಿರುಗಿದ.
- ನಿಮ್ಮ ನೆರೆಯವರಾಗಿ ಹಾಗೂ ನಮ್ಮ ಅನುಭವದಿಂದ ಹೇಳುವುದಾದರೆ ನೀವು ಸಾಗುತ್ತಿರುವ ಪಥದ ಬಗ್ಗೆ ನಮಗೆ ಹರ್ಷವಿದೆ.
- ಭಾರತ ಮತ್ತು ನೇಪಾಳದ ನಡುವಿನ ಗಡಿಯು ಸಂಬಂಧದ ಸೇತುವಾಗಬೇಕು ದ್ವೇಷದ ಪ್ರತಿಬಂಧವಾಗಬಾರದು
- ನಾವು ಮೊಬೈಲ್ ಸೇವಾದಾರ ಸಂಸ್ಥೆಗಳೊಂದಿಗೆ ಮಾತನಾಡಿ, ನೇಪಾಳ ಮತ್ತು ಭಾರತದ ಐಎಸ್‌ಡಿ ದರ ಕಡಿಮೆ ಮಾಡುವಂತೆ ಮನವಿ ಮಾಡಬೇಕು
-  ಸಾರ್ಕ್ ರಾಷ್ಟ್ರಗಳೆಲ್ಲ ಒಂದಾಗಿ ಬಡತನದ ವಿರುದ್ಧ ಸಮರ ಸಾರಬೇಕು
-  ನಾವು ತುಂಬಾ ಹತ್ತಿರದವರು. ಆದರೂ ಇಲ್ಲಿಗೆ ಬರಲು 17 ವರ್ಷಗಳೇ ಬೇಕಾಯಿತು. ಇನ್ನು ಮುಂದೆ ಈ ರೀತಿ ಆಗುವುದಿಲ್ಲ. ನಾನು ಮತ್ತೆ ಬರುತ್ತೇನೆ, ಸಾರ್ಕ್ ಶೃಂಗದಲ್ಲಿ ಪಾಲ್ಗೊಳ್ಳುತ್ತೇನೆ
- ವಿಶ್ವಾದ್ಯಂತದ ಸಾಹಸಿ ಯುವಕರು ಇಲ್ಲಿಗೆ ಭೇಟಿ ನೀಡುತ್ತಾರೆ. ನೇಪಾಳದ ಭೂಮಿಗೆ ಅಂತಹ ಸಾಮರ್ಥ್ಯವಿದೆ.
-  ನೇಪಾಳವು ಗಿಡಮೂಲಿಕೆಗಳ ಔಷಧಗಳ ಪ್ರಮುಖ ರಫ್ತುದಾರ ರಾಷ್ಟ್ರವಾಗಬೇಕು. ಅದಕ್ಕೆ ನಮ್ಮ ಬೆಂಬಲವಿದೆ
- ನೇಪಾಳ ಬಲಿಷ್ಠ ರಾಷ್ಟ್ರವಾಗುವುದನ್ನು ನಾವು ನೋಡಬೇಕು.  ಪ್ರಗತಿಯು ಹಿಮಾಲಯದಷ್ಟು ಎತ್ತರಕ್ಕೆ ಬೆಳೆಯಬೇಕು.
-  ಈ ಭೂಮಿಯಿಂದಲೇ ವಿಶ್ವಕ್ಕೆ ಶಾಂತಿ ಪಸರಿಸಲಿದೆ. ಇಲ್ಲಿನ ಸಂವಿಧಾನವೇ ಅದಕ್ಕೆ ಪ್ರೇರಕವಾಗಲಿದೆ
- ಇಲ್ಲಿನ ಸಂವಿಧಾನ ಕೇವಲ ಪುಸ್ತಕವಲ್ಲ. ಅದು ಭೂತ, ವರ್ತಮಾನ ಮತ್ತು ಭವಿಷ್ಯದ ಸಮಗ್ರತೆ. ಸಂವಿಧಾನವು ಯಾವತ್ತೂ ಎಲ್ಲವನ್ನೂ ಒಗ್ಗೂಡಿಸುತ್ತದೆ, ವಿಭಜಿಸುವುದಿಲ್ಲ
- ಕಾಶಿಯ ಅರ್ಚಕ ನೇಪಾಳಿ. ನೇಪಾಳದ ಅರ್ಚಕ ಭಾರತೀಯ. ಇದುವೇ ನಮ್ಮ ನಡುವಿನ ಬಾಂಧವ್ಯಕ್ಕೆ  ಸಾಕ್ಷಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.