ಟಾರ್ಗೆಟ್ ಮೋದಿ ಪಾಕ್ ಹೊಸ ಆಪರೇಷನ್

ನವದೆಹಲಿ: ಭಾರತ ಮತ್ತು ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ವರ್ಚಸ್ಸಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಸಿ ಬಳಿಯಲು ಐಎಸ್ಐ ಈಗ ಹೊಸ ಆಪರೇಷನ್ ಆರಂಭಿಸಿದೆ.
ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತದಲ್ಲಿ ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ದಲಿತರಿಗೆ ಸುರಕ್ಷತೆ ಇಲ್ಲ ಎನ್ನುವ ಭಾವನೆ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಅದರಲ್ಲೂ ಮುಖ್ಯವಾಗಿ ಅಮೆರಿಕ ಮತ್ತು ವಿಶ್ವಸಂಸ್ಥೆಯಲ್ಲಿ ಬೆಳೆಸುವ ಪ್ರಯತ್ನ ಪಾಕ್ ಗುಪ್ತಚರ ಸಂಸ್ಥೆ ಮಾಡುತ್ತಿದೆ.
ಇದಕ್ಕೆ ಪೂರಕವಾಗಿ ಜುಲೈ ಮತ್ತು ಆಗಸ್ಟ್ ಮೊದಲ ವಾರದಲ್ಲಿ ಐಎಸ್ಐ ಸರಣಿ ಸಭೆಗಳನ್ನು ನಡೆಸಿದೆ. ಭಾರತ ನಿರಂಕುಶ ಪ್ರಭುತ್ವದ ರಾಷ್ಟ್ರ ಅನ್ನುವ ಭಾವನೆ ವಿಶ್ವಮಟ್ಟದಲ್ಲಿ ಹೇಗೆ ಹರಡಬಹುದೆನ್ನುವ ಕುರಿತು ತಂತ್ರ ರೂಪಿಸಲು ಕುರಿತು ಚರ್ಚೆ ಈ ಸಭೆಗಳಲ್ಲಿ ನಡೆದಿದೆ. ಉಗ್ರರ ಮೂಲಕ ಪರೋಕ್ಷ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಈಗಾಗಲೇ ಹಿನ್ನಡೆಯಾಗಿದೆ.
ಹಾಗಾಗಿ ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ(ಯುಎನ್ಎಚ್ಆರ್ಸಿ) 2015ರೊಳಗೆ ಈ ವಿಚಾರಕ್ಕೆ ಸಂಬಂಧಿಸಿ ಭಾರತದ ವಿರುದ್ಧ ಚರ್ಚೆ ನಡೆಸಬೇಕು ಎನ್ನುವ ಏಕೈಕ ಅಜೆಂಡಾವನ್ನು ಮುಂದಿಟ್ಟುಕೊಂಡು ಐಎಸ್ಐ ಕಾರ್ಯಾಚರಣೆ ನಡೆಸುತ್ತಿದೆ. ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿ ಭಾರತದ ವಿರುದ್ಧ ವಿಶ್ವಸಂಸ್ಥೆಯಲ್ಲಿ ದೂರು ದಾಖಲಿಸುವ ಸಂಬಂಧ ಐಎಸ್ಐ ತಂತ್ರ ರೂಪಿಸಿದೆ. ಈ ದೂರನ್ನು ಐಎಸ್ಐ ಸಲ್ಲಿಸಲಿದೆ. ಈ ಸಂಘಟನೆ ನೀಡುವ ದೂರಿನಲ್ಲಿ ಮೋದಿ ಸರ್ಕಾರದ ವಿರುದ್ಧ ಸಾಕಷ್ಟು ಆರೋಪಗಳಿರಲಿವೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಐಎಸ್ಐ ಹಣ
ಸಿಎಜಿ ಅಥವಾ ನರಮೇಧ ವಿರುದ್ಧದ ಒಕ್ಕೂಟ ಹಲವು ಎನ್ಜಿಒಗಳ ಒಂದು ಕೂಟ. ಈ ಕೂಟದಲ್ಲಿರುವ 47 ಎನ್ಜಿಒಗಳಲ್ಲಿ 16ಕ್ಕೆ ಐಎಸ್ಐನಿಂದ ನೇರ ಅಥವಾ ಗಲ್ಫ್ನ ಮೂಲಕ ಪರೋಕ್ಷವಾಗಿ ಪೂರ್ಣ ಅಥವಾ ಭಾಗಶಃವಾಗಿ ಹಣಕಾಸು ನೆರವು ಸಿಗುತ್ತಿದೆ. ಜತೆಗೆ, 9 ಎನ್ಜಿಒಗಳು ಪಾಕಿಸ್ತಾನದ ಪರ ಅಮೆರಿಕದ ಸಂಸತ್ತಿನಲ್ಲಿ ಲಾಬಿ ನಡೆಸುವ ಪಾಕಿಸ್ತಾನ್ ಅಮೆರಿಕನ್ ಕಮ್ಯುನಿಟಿ ಜತೆಗೆ ನಿಕಟ ಸಂಬಂಧ ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


