

ಅಹಮದಾಬಾದ್: ಭಾರತದ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಪೂರ್ವಿಕರು ಹಿಂದೂಗಳಾಗಿದ್ದರು ಎಂದು ವಿಶ್ವ ಹಿಂದೂ ಪರಿಷತ್ (ವಿಹಿಂಪ) ನಾಯಕ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.
ಭಾರತದಲ್ಲಿನ ಮುಸ್ಲಿಮರ ಪೂರ್ವಿಕರು ಹಿಂದೂಗಳು, ಹಾಗೆಯೇ ಕ್ರಿಶ್ಚಿಯನ್ನರ ಪೂರ್ವಿಕರೂ ಹಿಂದೂಗಳೇ. ಹಿಂದೆ ಮೊಗಲ ಚಕ್ರವರ್ತಿಗಳ ಆಳ್ವಿಕೆಯಿದ್ದಾಗ ಅವರ ದಬ್ಬಾಳಿಕೆಗೆ ಹೆದರಿ ಜನರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂಬುದಾಗಿ ಚರಿತ್ರೆ ಹೇಳುತ್ತದೆ ಎಂದು ತೊಗಾಡಿಯಾ ಹೇಳಿದ್ದಾರೆ.
ಗುಜರಾತ್‌ನ ಭಾವ್‌ನಗರ್‌ನಲ್ಲಿ ವಿಹಿಂಪದ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಮಾತನಾಡಿದ ತೊಗಾಡಿಯಾ, ಪ್ರಸ್ತುತ ನಮ್ಮ ದೇಶದಲ್ಲಿ ಹಿಂದೂಗಳ ಮೇಲೆ ಯಾರೂ ದಬ್ಬಾಳಿಕೆ ನಡೆಸುತ್ತಿಲ್ಲ. ಹೀಗಿರುವಾಗ ಯಾರಾದರೂ ಹಿಂದೂ ಧರ್ಮಕ್ಕೆ ಮತಾಂತರವಾಗುತ್ತಿದ್ದರೆ, ಅವರನ್ನು ಹಿಂದೂಗಳು ಪೂರ್ಣ ಮನಸ್ಸಿನಿಂದ ಸ್ವೀಕರಿಸುತ್ತಾರೆ.
ಡಿಸೆಂಬರ್ 8ರಂದು ಆಗ್ರಾದಲ್ಲಿ ಧರ್ಮ ಜಾಗರಣ್ ಮಂಚ್ ನೂರರಷ್ಟು ಮುಸ್ಲಿಂರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಿದ್ದು ವಿವಾದ ಸೃಷ್ಟಿಸಿತ್ತು.
ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕೆಂದು ಸಂಸತ್‌ನಲ್ಲಿ ವಿಪಕ್ಷಗಳು ಒತ್ತಾಯಿಸಿ ಗದ್ದಲವೆಬ್ಬಿಸಿದ್ದವು.
ಆದಾಗ್ಯೂ, ಮತಾಂತರ ಪ್ರಕರಣದಲ್ಲಿ ಪ್ರಥಮ ಆರೋಪಿ ನಂದ್ ಕಿಶೋರ್ ಬಾಲ್ಮೀಕಿ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದರು.