ಬಲವಂತದ ಮತಾಂತರವನ್ನು ಬಿಜೆಪಿ ವಿರೋಧಿಸುತ್ತದೆ: ಅಮಿತ್ ಶಾ

ದೇಶದಲ್ಲಿ ಬಲವಂತದ ಮತಾಂತರವನ್ನು ಬಿಜೆಪಿ ವಿರೋಧಿಸುತ್ತದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ...
ಅಮಿತ್ ಶಾ
ಅಮಿತ್ ಶಾ
Updated on: 
ಕೊಚ್ಚಿ:  ದೇಶದಲ್ಲಿ ಬಲವಂತದ ಮತಾಂತರವನ್ನು ಬಿಜೆಪಿ ವಿರೋಧಿಸುತ್ತದೆ ಎಂದು  ಬಿಜೆಪಿ ಅಧ್ಯಕ್ಷ ಅಮಿತ್ ಶಾ  ಹೇಳಿದ್ದಾರೆ. ಅದೇ ವೇಳೆ ಜಾತ್ಯಾತೀತ ದ ಬಗ್ಗೆ ಮಸೂದೆ ತರುವುದಾದರೆ  ಇತರ ರಾಜಕೀಯ ಪಕ್ಷಗಳು ಈ ಮಸೂದೆಗೆ ಒಪ್ಪಿಗೆ ಸೂಚಿಸುತ್ತವೆಯೇ? ಎಂದು ಶಾ ಪ್ರಶ್ನಿಸಿದ್ದಾರೆ.
ಕೇರಳದ  ಪಾಲಕ್ಕಾಡ್‌ನಲ್ಲಿ ಬಿಜೆಪಿ ಸದಸ್ಯರ ಸೇರ್ಪಡೆ ಅಭಿಯಾನಕ್ಕಾಗಿ ಶನಿವಾರ ಅಮಿತ್ ಶಾ ಕೇರಳಕ್ಕೆ ಭೇಟಿ ನೀಡಿದ್ದರು.
ಬಿಜೆಪಿ ಬಲವಂತದ ಮತಾಂತರವನ್ನು ಒಪ್ಪುವುದಿಲ್ಲ. ಆದ್ದರಿಂದಲೇ ನಾವು ಹೊಸ ಕಾನೂನನ್ನು ತರಬೇಕೆಂದಿದ್ದೀವೆ. ಹೀಗಿರುವಾಗ ಸೋ ಕಾಲ್ಡ್ ಸೆಕ್ಯೂಲರ್  ಪಾರ್ಟಿಗಳು ಬಿಜೆಪಿಯ ನಿಲುವನ್ನು ಒಪ್ಪಬೇಕು ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಶಾ ಹೇಳಿದ್ದಾರೆ.
ಈ ಬಗ್ಗೆ ಅಲ್ಪ ಸಂಖ್ಯಾತ ಸಂಘಟನೆಗಳ ಜತೆ ಮಾತನಾಡಲು ಬಿಜೆಪಿ  ತಯಾರಿದೆಯೇ? ಎಂದು ಕೇಳಿದಾಗ ರಾಜಕೀಯ ಪಕ್ಷಗಳ ಜತೆ ಸಮಾಲೋಚನೆ ನಡೆಸಿದ ನಂತರವೇ ಸಾರ್ವಜನಿಕ ಚರ್ಚೆ ನಡೆಸಲಾಗುವುದು ಎಂದು ಉತ್ತರಿಸಿದ್ದಾರೆ.
 ಹಿಂದೂ ಸಂಘಟನೆಗಳು ನಡೆಸಿದ 'ಘರ್ ವಾಪಸಿ' ಮತಾಂತರ ಕಾರ್ಯಕ್ರಮದ ಬಗ್ಗೆ ಕೇಳಿದಾಗ ಪ್ರಸ್ತುತ ಪ್ರಕರಣ ನ್ಯಾಯಾಲಯದ ಮುಂದಿದೆ, ಈ ಬಗ್ಗೆ ನಾನೇನು ಹೇಳಲಾರೆ ಎಂದಿದ್ದಾರೆ ಶಾ.
ಏತನ್ಮಧ್ಯೆ, ಬಿಜೆಪಿ ದೇಶವನ್ನು ಒಡೆದು ಆಳುತ್ತಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಆರೋಪದ ಬಗ್ಗೆ ಕೇಳಿದಾಗ, ಈ ಆರೋಪ ನಿರಾಧಾರ ಎಂದಿದ್ದು ಕಪ್ಪು ಹಣ ವಾಪಸ್ ತರುವ ಬಗ್ಗೆ ಪ್ರಶ್ನೆ ಕೇಳಿದಾಗ, ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ತರಲು ಬಿಜೆಪಿ ಬದ್ಧವಾಗಿದೆ ಎಂದು  ಉತ್ತರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com