ಪ್ರಧಾನ ಸುದ್ದಿ

ಹೊರಬೀಳದ ಹುರಿಯಾಳುಗಳ ಪಟ್ಟಿ

Published On :

ಕ.ಪ್ರ.ವಾರ್ತೆ  ಬೆಂಗಳೂರು  ಫೆ. 1
ಎಲ್ಲರಿಗಿಂತ ಮೊದಲು ಲೋಕಸಭೆ ಚುನಾವಣೆ ಅಭ್ಯರ್ಥಿಗಳನು ಘೋಷಿಸುವುದಾಗಿ ಹೇಳಿರುವ ಮೂರೂ ಪ್ರಮುಖ ಪಕ್ಷಗಳು ಇನೂ ಆಯ್ಕೆ ಗೊಂದಲದಲ್ಲೇ ಮುಳುಗಿದ್ದು, ಪಟ್ಟಿ ಘೋಷಣೆ ದಿನಾಂಕ ಮುಂದಕ್ಕೆ ಹೋಗುತ್ತಲೇ ಇದೆ.
ಆಡಳಿತಾರೂಢ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಈ ಹಿಂದೆ ಹೇಳಿದಂತೆ ನಡೆದುಕೊಂಡಿದ್ದರೆ ಇಷ್ಟರಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಬೇಕಿತ್ತು. ಆದರೆ, ಪಟ್ಟಿ ಅಂತಿಮಗೊಳಿಸುವುದು ಅಂದುಕೊಂಡಷ್ಟು ಸುಲಭವಾಗಿಲ್ಲದ ಕಾರಣ ಮತ್ತು ಆಕಾಂಕ್ಷಿಗಳ ಲಾಬಿ ಹೆಚ್ಚಾದ ಹಿನೆಲೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತಲೇ ಇದೆ.
ಹಾಗೆ ನೋಡಿದರೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಎಲ್ಲಕ್ಕಿಂತ ಮುಂದಿದೆ. ಪ್ರಸ್ತುತ 15 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿದೆ. ಇನು ಕಾಂಗ್ರೆಸ್‌ನಲ್ಲಿ ಪ್ರಕ್ರಿಯೆ ಅರ್ಧಕ್ಕೆ ನಿಂತಿದ್ದರೆ, ಜೆಡಿಎಸ್ ಇನೂ ಆಯ್ಕೆ ಪ್ರಕ್ರಿಯೆಯನೇ ಆರಂಭಿಸಿಲ್ಲ. ಹೀಗಾಗಿ ಯಾವ ಪಕ್ಷವೂ ಚುನಾವಣೆ ಘೋಷಣೆಯಾಗುವ ವೇಳೆಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಲಕ್ಷಣ ಗೋಚರಿಸುತ್ತಿಲ್ಲ.
ಬಿಜೆಪಿಗೆ 10ರ ಸಮಸ್ಯೆ: ಲೋಕಸಭೆ ಚುನಾವಣೆಗೆ ಎಲ್ಲರಿಗಿಂತ ಮೊದಲು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಬೇಕು ಎಂದು ಹೊರಟಿರುವ ಬಿಜೆಪಿ ಪಾಲಿಗೆ ರಾಜ್ಯದ 10 ಕ್ಷೇತ್ರಗಳು ತಲೆ ತಿನುವಂತಾಗಿದೆ. ಒಟ್ಟು 28 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಯಾವುದೇ ಗೊಂದಲಗಳಿಲ್ಲದೆ ಕೊನೆಗೊಂಡಿದೆ. ಬಾಕಿ ಉಳಿದಿರುವ 13 ಕ್ಷೇತ್ರಗಳ ಪೈಕಿ ಹಾಸನ ಮತ್ತು ಮಂಡ್ಯ ಜಿಲ್ಲೆಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲವಾದ್ದರಿಂದ ಯಾರನು ಬೇಕಾದರೂ ಆಯ್ಕೆ ಮಾಡಬಹುದು.
ಬೆಂಗಳೂರು ಉತ್ತರದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಹೆಸರು ಅವರಿಗೆ ಟಿಕೆಟ್ ತಪ್ಪಿಸುವ ಪ್ರಯತ ಮುಂದುವರಿದಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ತುಳಸಿ ಮುನಿರಾಜು ಹೆಸರು ಅಂತಿಮಗೊಂಡಿದೆಯಾದರೂ ಇಲ್ಲಿ ಕೂಡ ಅಸಮಾಧಾನದ ಕಿಡಿ ಹಚ್ಚಲಾಗುತ್ತಿದೆ.
ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಹಾಲಿ ಸಂಸದ ಬಸವರಾಜು ಅವರಿಗೆ ಟಿಕೆಟ್ ನೀಡುವುದು ಬೇಡ ಎಂದು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿತ್ತಾದರೂ ಬಸವರಾಜು ತಮ್ಮ ಪ್ರಯತ ಮುಂದುವರಿಸಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರು ಕಣಕ್ಕಿಳಿಯಲು ನಿರಾಕರಿಸಿರುವುದರಿಂದ ಅವರ ಪುತ್ರ, ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅವರ ಹೆಸರೇ ಅಂತಿಮಗೊಳ್ಳುವುದು ಖಚಿತ. ಬಿಎಸ್‌ಆರ್ ಕಾಂಗ್ರೆಸ್‌ನ ಶ್ರೀರಾಮುಲು ಪಕ್ಷಕ್ಕೆ ಸೇರಿದರೆ ಬಳ್ಳಾರಿಯಲ್ಲಿ ಅವರೇ ಅಭ್ಯರ್ಥಿ. ಇಲ್ಲದೇ ಇದ್ದರೆ ಮಾಜಿ ಸಚಿವ ಸೋಮಲಿಂಗಪ್ಪ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಇನುಳಿದಂತೆ ಕೋಲಾರ, ಮೈಸೂರು, ಹಾವೇರಿ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದರೂ ಅಂತಿಮವಾಗಿ ಸರ್ವಸಮ್ಮತ ಅಭ್ಯರ್ಥಿಗಳ ಆಯ್ಕೆ ಸಮಸ್ಯೆಯಾಗುವುದಿಲ್ಲ ಎನುತ್ತವೆ ಬಿಜೆಪಿ ಮೂಲಗಳು.
ಕಾಂಗ್ರೆಸ್‌ನಲ್ಲಿ ಅರ್ಧಕ್ಕೆ ನಿಂತ ಪ್ರಯತ: ಜನವರಿ ಅಂತ್ಯದ ವೇಳೆಗೆ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸುವುದಾಗಿ ಘೋಷಿಸಿದ್ದ ಕಾಂಗ್ರೆಸ್ ನಾಯಕರ ಪ್ರಯತ ಅರ್ಧಕ್ಕೆ ನಿಂತಿದೆ. ಹಾಲಿ ಸಂಸದರಿಗೆ ಮತ್ತೆ ಟಿಕೆಟ್ ನೀಡಬೇಕು ಎಂಬ ನಿರ್ಣಯಕ್ಕೆ ಹೈಕಮಾಂಡ್ ಒಪ್ಪಿಗೆ ನೀಡಿರುವುದನು ಹೊರತುಪಡಿಸಿದರೆ ಉಳಿದ ಕ್ಷೇತ್ರಗಳಿಗೆ ಯಾರು ಅಭ್ಯರ್ಥಿಗಳು? ಎಂಬ ಪ್ರಶೆ ಇನೂ ಕಗ್ಗಂಟಾಗಿಯೇ ಉಳಿದಿದೆ.
ಹಾಲಿ ಸಂಸದರಿಗೆ ಈ ಬಾರಿ ಟಿಕೆಟ್ ತಪ್ಪಿಸುವುದಿಲ್ಲ. ಇನು ಕೆಲ ಕ್ಷೇತ್ರಗಳಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಸ್ಪರ್ಧೆ ಇದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ನಂದನ್ ನೀಲೇಕಣಿ ಹೆಸರು ಮಾತ್ರ ಅಂತಿಮಗೊಳಿಸಲಾಗಿದೆ. ಬಿಜಾಪುರದಿಂದಲೂ ಪ್ರಕಾಶ್ ರಾಥೋಡ್ ಹೆಸರು ಮಾತ್ರ ಕಳುಹಿಸಲಾಗಿದೆ.
ಮಂಗಳೂರು ಲೋಕಸಭೆ ಕ್ಷೇತ್ರದಿಂದ ಜನಾರ್ದನ ಪೂಜಾರಿ ಹೆಸರನು ಮಾತ್ರ ಪಟ್ಟಿಯಲ್ಲಿ ಕಳುಹಿಸಲಾಗಿತ್ತು. ನಂತರ ಹೈಕಮಾಂಡ್ ಪ್ರಭಾವದಿಂದ ಹರ್ಷ ಮೊಯ್ಲಿ ಹೆಸರು ಸೇರಿಕೊಂಡಿದೆ. ಈ ಹಿನೆಲೆಯಲ್ಲಿ ಮಂಗಳೂರು ಹಾಗೂ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಎಐಸಿಸಿಯೇ ಆಂತರಿಕ ಚುನಾವಣೆ ನಡೆಸಿ ಅಭ್ಯರ್ಥಿ ಆಯ್ಕೆ ನಡೆಸಲು ಮುಂದಾಗಿರುವುದೊಂದು ನಾಟಕೀಯ ಬೆಳವಣಿಗೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲೂ ಆಕಾಂಕ್ಷಿಗಳ ದಂಡೇ ಇದೆ. ಸಚಿವ ಕೃಷ್ಣ ಭೈರೇಗೌಡರನು ಕಣಕ್ಕಿಳಿಸುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸುಕರಾಗಿದ್ದಾರೆ. ಆದರೆ, ರಾಜ್ಯಸಭೆ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ ಕಣ್ಣು ಈ ಕ್ಷೇತ್ರದ ಮೇಲಿದೆ. ಜತೆಗೆ ರಮೇಶ್‌ಗೌಡ, ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಅವರೂ ಆಕಾಂಕ್ಷಿಗಳಾಗಿದ್ದಾರೆ. ಈ ನಡುವೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಸಿ.ಚಂದ್ರಶೇಖರ್ ಅವರ ಹೆಸರು ಪ್ರಮುಖವಾಗಿ ಚಲಾವಣೆಯಲ್ಲಿದೆ.
ಬೆಂಗಳೂರು ಕೇಂದ್ರ ಲೋಕಸಭಾ ಸ್ಥಾನವನು ಅಲ್ಪಸಂಖ್ಯಾತ ಸಮುದಾಯದವರಿಗೆ ಬಿಟ್ಟುಕೊಡಲು ನಿರ್ಧರಿಸಲಾಗಿದ್ದು, ಹಿರಿಯ ಮುಖಂಡ ಸಿ.ಕೆ.ಜಾಫರ್ ಷರೀಫ್, ಎಚ್.ಟಿ.ಸಾಂಗ್ಲಿಯಾನ, ಅಲೆಗ್ಸಾಂಡರ್, ಯುವ ಕಾಂಗ್ರೆಸ್ ಅಧ್ಯಕ್ಷ ಅರ್ಷದ್ ರಿಜ್ವಾನ್ ಆಕಾಂಕ್ಷಿಗಳು. ಇನುಳಿದ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಈಗಾಗಲೇ ಸಿದ್ಧವಾಗಿದೆ. ಆದರೆ, ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿಲ್ಲ.
ಜೆಡಿಎಸ್‌ನಲ್ಲಿ ಪ್ರಕ್ರಿಯೆಯೇ ಶುರುವಾಗಿಲ್ಲ: ಅಭ್ಯರ್ಥಿಗಳ ಆಯ್ಕೆಯಲ್ಲಿ ವಿಧಾನಸಭೆ ಚುನಾವಣೆ ಅನುಸರಿಸಿದ ವಿಳಂಬ ನೀತಿಯನು ಲೋಕಸಭೆ ಚುನಾವಣೆಯಲ್ಲಿ ಮುಂದುವರಿಸುವುದಿಲ್ಲ ಎಂದು ಜೆಡಿಎಸ್ ಸಾರಿಸಾರಿ ಹೇಳಿದ್ದರೂ ಫೆಬ್ರವರಿ ಆರಂಭವಾದರೂ ಅಭ್ಯರ್ಥಿಗಳನು ಆಯ್ಕೆ ಮಾಡುವ ಪ್ರಕ್ರಿಯೆಯನೇ ನಡೆಸಿಲ್ಲ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಂತಿಮ ದಿನಗಳವರೆಗೂ ಅಭ್ಯರ್ಥಿಯನು ಅಖೈರುಗೊಳಿಸಿರಲಿಲ್ಲ. ಕೊನೆ ಗಳಿಗೆಯಲ್ಲಿ ಇತರೆ ಪಕ್ಷಗಳಲ್ಲಿ ಟಿಕೆಟ್ ವಂಚಿತರಾದವರು ಬರುತ್ತಾರೆಂದು ನಿರೀಕ್ಷಿಸಿ ಜೆಡಿಎಸ್ ಕಾದುಕುಳಿತಿತ್ತು. ಅಂತಹರಿಗೆ ಟಿಕೆಟ್ ಅನೂ ನೀಡಿತು. ಆದರೆ, ಅವರೆಲ್ಲ ಸೋತರು. ಇದೇ ಲೆಕ್ಕಾಚಾರ ಲೋಕಸಭೆ ಚುನಾವಣೆಯಲ್ಲೂ ಮುಂದುವರಿಯುವ ಸಾಧ್ಯತೆ ಇದೆ.
ರಾಜ್ಯದಲ್ಲಿರುವ 28 ಲೋಕಸಭೆ ಕ್ಷೇತ್ರಗಳಿಗೆ ಗೆಲ್ಲುವ ಅಭ್ಯರ್ಥಿ ಇರಲಿ, ನಿಲ್ಲುವ ಅಭ್ಯರ್ಥಿಯೂ ಇಲ್ಲ ಎಂಬುದು ಪಕ್ಷದವರದ್ದೇ ಮಾತು. ಆದರೂ 10-15 ಸ್ಥಾನ ಗೆಲ್ಲುವುದಂತೂ ಖಾತರಿ ಎಂದು ನಾಯಕರು ಹೇಳುತ್ತಿದ್ದಾರೆ. ಆ 10-15 ಅಭ್ಯರ್ಥಿಗಳೇ ಇನೂ ಅಂತಿಮವಾಗಿಲ್ಲ.
ಹಾಸನದಲ್ಲಿ ದೇವೇಗೌಡ ಸ್ಪರ್ಧಿಸುವುದು ಖಾತರಿಯಾಗಿದೆ. ಕಾರವಾರದಲ್ಲಿ ಶಿವಾನಂದ ನಾಯ್ಕ ಅಭ್ಯರ್ಥಿ ಎಂದು ಆಗಲೇ ಘೋಷಿಸಲಾಗಿದೆ. ಇನು ಬೆಂಗಳೂರು ಗ್ರಾಮಾಂತರದಲ್ಲಿ ಅನಿತಾ ಕುಮಾರಸ್ವಾಮಿ ಅವರೇ ಕಣಕ್ಕಿಳಿಯಬೇಕಿದೆ. ಮಂಡ್ಯದಲ್ಲಿ ಸಿ.ಎಸ್. ಪುಟ್ಟರಾಜು ಅವರಿಗೆ ಟಿಕೆಟ್ ಖಾತರಿ ಆಗಿಲ್ಲ. ಕೋಲಾರದಲ್ಲಿ ಬೆಂಗಳೂರು ವಿವಿ ಮಾಜಿ ಕುಲಸಚಿವ ಮೈಲಾರಪ್ಪ ತಾನೇ ಸ್ಪರ್ಧಿ ಎಂದು ಹೇಳಿಕೊಳ್ಳುತ್ತಿದ್ದರೂ ಖಾತರಿಯಂತೂ ಇಲ್ಲ. ಶಿವಮೊಗ್ಗದಲ್ಲಿ ಗೆಲ್ಲೋದು ನಾವೇ ಎಂದು ಮಧುಬಂಗಾರಪ್ಪ ಹೇಳುತ್ತಿದ್ದರೂ ಯಾರು ಕಣಕ್ಕಿಳಿಯುತ್ತಾರೆ ಎಂಬುದು ಅಂತಿಮವಾಗಿಲ್ಲ. ಮೈಸೂರಿನಲ್ಲಿ ಗೆಲ್ಲುವ ಅಭ್ಯರ್ಥಿಯೇ ಸ್ಪರ್ಧೆಗಿಳಿಯುತ್ತಾರೆ ಎಂದರೂ ಅವರ್ಯಾರು ಎಂಬುದು ಯಾರಿಗೂ ಗೊತ್ತಿಲ್ಲ. ಬೀದರ್‌ನಿಂದ ಬಂಡೆಪ್ಪ ಕಾಶಂಪೂರ್ ಕಣಕ್ಕಿಳಿಯುವ ಲಕ್ಷಣಗಳಿವೆ. ಇನು ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಯಾವ ಕ್ಷೇತ್ರಕ್ಕೂ ಅಭ್ಯರ್ಥಿ ಪಟ್ಟಿ ಅಂತಿಮಗೊಂಡಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.