ಪ್ರಧಾನ ಸುದ್ದಿ

ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಣೆ: 200 ಕ್ವಿಂಟಲ್ ವಶ

Published On :

ಗಂಗಾವತಿ: ಗಂಗಾವತಿ ಸಮೀಪದ ಜಂಗಮರ ಕಲ್ಗುಡಿ ಗ್ರಾಮದಿಂದ ತುಮಕೂರಿಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ಸಾಗಣೆ ಮಾಡುತ್ತಿದ್ದಾಗ ತಹಸೀಲ್ದಾರ್ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.  ಕರವೇ ಕಾರ್ಯಕರ್ತರ ಮಾಹಿತಿ ಮೇರೆಗೆ ತಹಸೀಲ್ದಾರ್ ಗಂಗಪ್ಪ ಅವರು 200 ಕ್ವಿಂಟಲ್(400 ಚೀಲ) ಅಕ್ಕಿ ಜಪ್ತಿ ಮಾಡಿದ್ದಾರೆ. ಜಂಗಮರ ಕಲ್ಗುಡಿ ಗ್ರಾಮದಿಂದ ಗಂಗಾವತಿ ಮಾರ್ಗವಾಗಿ ತುಮಕೂರಿಗೆ ತೆರಳುತ್ತಿದ್ದ ಲಾರಿಯಲ್ಲಿ ಅನ್ನಭಾಗ್ಯ ಯೋಜನೆಯ 200 ಕ್ವಿಂಟಲ್ ಅಕ್ಕಿ ತುಂಬಿಕೊಂಡು ಹೋಗಲಾಗುತ್ತಿತ್ತು. ನಗರದ ಮಂಜುನಾಥ ಟ್ರಾರ್ನ್ಸ್‌ಪೋರ್ಟ್‌ನ ಮಾಲೀಕರು ಲಾರಿ ಕಳಿಸಿ ಜಂಗಮರ ಕಲ್ಗುಡಿಯಲ್ಲಿರುವ ಅಕ್ಕಿಯನ್ನು ತುಮಕೂರಿಗೆ ಸಾಗಣೆ ಮಾಡಬೇಕೆಂದು ತಿಳಿಸಿದ್ದರೆಂದು ಲಾರಿ ಚಾಲಕ ತಿಳಿಸಿದ್ದಾನೆ.
ಲಾರಿ ಒಪ್ಪಿಸಲು ಮೀನಾಮೇಷ: ಕಲ್ಗುಡಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆಗೆ ಅಕ್ಕಿ ಲಾರಿ ಜಪ್ತಿ ಮಾಡಿದ್ದರೂ ಆಹಾರ ಇಲಾಖೆಯವರು ಲಾರಿ ಮತ್ತು ಚಾಲಕರನ್ನು ಪೊಲೀಸರ ವಶಕ್ಕೆ ಒಪ್ಪಿಸಲು ಮೀನಮೇಷ ಮಾಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಅಕ್ಕಿ ವಶ ಸಂದರ್ಭದಲ್ಲಿ ತಹಸೀಲ್ದಾರ್ ಗಂಗಪ್ಪ, ಆಹಾರ ಇಲಾಖೆಯ ಶಿರಸ್ತೇದಾರ, ಇನ್‌ಸ್ಪೆಕ್ಟರ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಇದ್ದರೂ ಅಕ್ಕಿ ಮಾಲೀಕರು ಮತ್ತು ಸಾಗಾಟ ಮಾಡುವ ಸ್ಥಳ ಏಕೆ ಗೊತ್ತಿಲ್ಲ ಎನ್ನುವ ಪ್ರಶ್ನೆ ಕೇಳಿ ಬರುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.