ರಕ್ಷಣಾ ಕಾರ್ಯ ಸ್ಥಗಿತ; ಸಾರ್ವಜನಿಕರ ಆಕ್ರೋಶ
ಕಾಣಕೋಣ: ಕಾಣಕೋಣದಲ್ಲಿನ ರೂಬಿ ರೆಸಿಡೆನ್ಸಿ ಕಟ್ಟಡ ಬಿದ್ದು ಮೂರು ದಿನಗಳು ಕಳೆದಿವೆ. ಆದರೂ ಕಟ್ಟಡದ ಅವಶೇಷಗಳ ಅಡಿಂುಲ್ಲಿ ಸಿಲುಕಿರುವವರನ್ನು ಹೊರ ತೆಗೆಂುಲು ಸಾಧ್ಯವಾಗದ ಹಿನ್ನೆಲೆಂುಲ್ಲಿ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪಕ್ಕದ ಕಟ್ಟಡವೂ ಕುಸಿಯುವ ಭೀತಿ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಘಟನಾ ಸ್ಥಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರು ನೆರೆದಿದ್ದು, ದುರ್ಘಟನೆಗೆ ಕಾರಣರಾದವರನ್ನು 24 ಗಂಟೆಯಲ್ಲಿ ಬಂಧಿಸುವಂತೆ ಸ್ಥಳೀಯರು ಕಾಲಾವಕಾಶ ನೀಡಿದ್ದಾರೆ. ಅಲ್ಲದೇ ಈ ಸಂಬಂಧ ಉಪ ಜಿಲ್ಲಾಧಿಕಾರಿಗಳ ಕಾಂರ್ಾಲಂುಕ್ಕೆ ತೆರಳಿ ಮನವಿ ಸಲ್ಲಿಸಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುಮತಿ ನೀಡಿದ್ದವರನ್ನು ಈಗಾಗಲೇ ಅಮಾನತುಗೊಳಿಸಲಾಗಿದ್ದು, ಉಪನಗರ ನಿಂೋಜಕ ಪ್ರಕಾಶ ಬಾಂದೋಡಕರ್ ಅವರನ್ನು ಬಂಧಿಸಲಾಗಿದೆ. ಪುರಸಭೆ ಅಭಿಯಂತರ ಅಜಯ ದೇಸಾಯಿ, ಅಶಾಂಕ ಗಾಂವಕರ ಅವರನ್ನೂ ಅಮಾನತುಗೊಳಿಸಲಾಗಿದ್ದು, ಎಲ್ಲರೂ ತಲೆಮರೆಸಿಕೊಂಡಿದ್ದಾರೆ. ಬಿಲ್ಡರ್ ವಿಶ್ವಾಸ ದೇಸಾಯಿ ಜಾಮೀನಿಗಾಗಿ ಮಡಗಾಂವ್ ನ್ಯಾಂಾಲಂುದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ರೂಬಿ ರೆಸಿಡೆನ್ಸಿಯ ಇತರ ಕಟ್ಟಡ ಕೂಡಾ ತೀರಾ ಅಪಾಂುಕಾರಿಂಾಗಿದ್ದು, ಂಾವಾಗಬೇಕಾದರೂ ದುರ್ಘಟನೆ ಸಂಭವಿಸಬಹುದಾಗಿದೆ. ಇದರಿಂದಾಗಿ ಮತ್ತೊಂದು ಕಟ್ಟಡವನ್ನು ಕೆಡವಿದ ನಂತರವೇ ಇಲ್ಲಿ ರಕ್ಷಣಾ ಕಾಂರ್ು ಆರಂಭಿಸಲು ಸಾಧ್ಯವಾಗಲಿದೆ. ಈ ಕುರಿತು ಸೂಕ್ತ ನಿರ್ಣಂು ತೆಗೆದುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಮನೋಹರ್ ಪರೀಕರ್ ಅವರು ಉನ್ನತ ಮಟ್ಟದ ಸಮಿತಿಂೊಂದನ್ನು ರಚಿಸಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ವಿ.ಕೆ.ಝಾ ಅಧ್ಯಕ್ಷತೆಂುಲ್ಲಿ ತ್ರಿಸದಸ್ಯ ತನಿಖಾ ಸಮಿತಿ ರಚಿಸಲಾಗಿದೆ. ವಿಶ್ವಾಸ ದೇಸಾಯಿ ಭಾರತ ಡೆವಲಪರ್ಸ್ ಬಿಲ್ಡರ್ಸ್ಗಳಲ್ಲಿ ಒಬ್ಬರಾಗಿದ್ದಾರೆ. ಈ ಪ್ರಕರಣದಲ್ಲಿ ಎಲ್ಲ ಸಂಶಯಾಸ್ಪದ ವ್ಯಕ್ತಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ವೆನಾನ್ಸಿಂೊ ಪುರ್ತೂದೊ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಇನ್ನೂ 12 ಮೃತದೇಹ ಇರುವ ಸಾಧ್ಯತೆ
ರೂಬಿ ರೆಸಿಡೆನ್ಸಿ ಪಕ್ಕದ ಕಟ್ಟಡವೂ ಕುಸಿಂುತ್ತಿರುವುದರಿಂದ ಕಾಂರ್ಾಚರಣೆಗೆ ಅಡ್ಡಿಂುಂಟಾಗಿದೆ. ಈ ಕಟ್ಟಡದ ಅವಶೇಷಗಳ ಅಡಿಂುಲ್ಲಿ ಇನ್ನೂ ಸುಮಾರು 12 ಕಾರ್ಮಿಕರ ಮೃತದೇಹಗಳಿರುವ ಸಾಧ್ಯತೆಗಳಿವೆ. ಕಾಣಕೋಣದ ರೂಬಿ ರೆಸಿಡೆನ್ಸಿ ಕಟ್ಟಡದ ದುರ್ಘಟನೆಯಲ್ಲಿ ಬಲಿಂಾದವರು ಮತ್ತು ಕಟ್ಟಡ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರ ಸಂಖ್ಯೆ ಸರ್ಕಾರಿ ಅಧಿಕಾರಿಗಳಿಂದಲೂ ಲಭ್ಯವಾಗುತ್ತಿಲ್ಲ. ಜಾರ್ಖಂಡ್ ಮತ್ತು ಒಡಿಶಾ ಮೂಲದವರು ಹೆಚ್ಚಿನ ಕಾರ್ಮಿಕರು ಇದ್ದು, ಕಾರ್ಮಿಕ ವರ್ಗದಲ್ಲಿ ಹೆಚ್ಚಿನ ಆತಂಕ ಮನೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

