ಹಣದಾಸೆಗೆ ಭೂಮಿ ಮಾರಬೇಡಿ: ಮೇಧಾ ಪಾಟ್ಕರ್
ಬಾಗಲಕೋಟೆ/ಕೂಡಲಸಂಗಮ: ಹಣದಾಸೆಗೆ ಫಲವತ್ತಾದ ಭೂಮಿಯನ್ನು ಮಾರಿಕೊಂಡು ಗುಲಾಮರಾಗಿ ಬದುಕಬೇಡಿ ಎಂದು ಖ್ಯಾತ ಪರಿಸರವಾದಿ, ನರ್ಮದಾ ಬಚಾವ್ ಆಂದೋಲನದ ರೂವಾರಿ ಮೇಧಾ ಪಾಟ್ಕರ್ ರೈತರಿಗೆ ಕರೆ ನೀಡಿದರು.
ಲಿಂಗಾಯಿತ ಪಂಚಮಸಾಲಿ ಜಗದ್ಗುರು ಮಹಾಪೀಠ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಮಂಗಳವಾರ ಕೂಡಲಸಂಗಮದ 'ಕೃಷಿ ವಿಜ್ಞಾನಿ ಪ್ರಫುಲ್ಲಚಂದ್ರ ಸ್ಮರಣಾರ್ಥ ಮಹಾವೇದಿಕೆ'ಂುಲ್ಲಿ ಆಯೋಜಿಸಿದ್ದ 'ಬಸವ ಕೃಷಿ ಪ್ರಶಸ್ತಿ-2014' ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಉದ್ದಿಮೆದಾರರು ಕಾರ್ಖಾನೆಗಳನ್ನು ಸ್ಥಾಪಿಸುವ ಉದ್ದೇಶದಿಂದ ರೈತರಿಗೆ ಹಣದಾಸೆ ತೋರಿಸಿ ಜಮೀನನ್ನು ಕಬಳಿಸುವ ಪ್ರಯತ್ನ ನಡೆಸುತ್ತಿದ್ದು, ಯಾರೊಬ್ಬರೂ ಅವರ ಆಮಿಷಕ್ಕೆ ಒಳಗಾಗಬಾರದು. ರೈತರು ಸಂಘಟಿತರಾಗಿ ಇದನ್ನು ವಿರೋಧಿಸಬೇಕು ಎಂದರು. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ನಿರಾಶ್ರಿತರಾದ ರೈತರ ಪರವಾಗಿಯೂ ತಾವು ಹೋರಾಟ ನಡೆಸುವೆ ಎಂದು ಹೇಳಿದ ಅವರು, ರೈತರ ಮತ್ತು ಸಂತ್ರಸ್ತರ ನ್ಯಾಯಯುತವಾದ ಹೋರಾಟವನ್ನು ತಾವು ಸದಾ ಬೆಂಬಲಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿ, 'ಕೃಷಿಕರು ಮತ್ತು ಕೃಷಿಯನ್ನು ರಕ್ಷಿಸುವ, ಪ್ರೇರೇಪಿಸುವ ಉದ್ದೇಶದಿಂದ 2012ರಲ್ಲಿ ಬಸವ ಕೃಷಿ ಎಂಬ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು' ಎಂದು ಪ್ರಶಸ್ತಿಯ ವಿವರ ನೀಡಿದರು.
ಮೆರವಣಿಗೆ: ಪ್ರಶಸ್ತಿ 50 ಸಾವಿರ ನಗದು ಹಾಗೂ ಸ್ಮರಣಿಕೆ ಹೊಂದಿದೆ. ಮೇಧಾ ಪಾಟ್ಕರ್ ಅವರಿಗೆ ಆಕರ್ಷಕ ನೇಗಿಲಿನ ಪ್ರತಿರೂಪವನ್ನು ಸ್ಮರಣಿಕೆ ರೂಪದಲ್ಲಿ ನೀಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಮೇಧಾ ಪಾಟ್ಕರ್ ಅವರನ್ನು ುನ ಚಕ್ಕಡಿಯಲ್ಲಿ ಮೆರವಣಿಗೆ ಮಾಡಲಾಯಿತು. ಬಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ರಂಜಾನ್ ದರ್ಗಾ, ಮೇಧಾ ಪಾಟ್ಕರ್ ಅವರ ಹೋರಾಟದ ಕುರಿತು ಮಾತನಾಡಿದರು. ಶಾಸಕರಾದ ಡಾ. ವಿಜಂಾನಂದ ಕಾಶಪ್ಪನವರ, ಶಿವಾನಂದ ಪಾಟೀಲ್, ಅಶೋಕ ಆಲೂರ, ಪಂಚಪ್ಪ ಕಲ್ಬುರ್ಗಿ, ಬಸರಾಜ ಸವರಾಜ ಕುಂಬಾರ, ಎಂ.ಪಿ. ನಾಡಗೌಡ, ಶಂಕರ ದಂಡಿನ ಮುಂತಾದವರು ಕಾರ್ಯಕ್ರಮದಲ್ಲಿ ಇದ್ದರು.
17, 18ಕ್ಕೆ ಆಪ್ ಸೇರ್ಪಡೆ ನಿರ್ಧಾರ
ಬಾಗಲಕೋಟೆ: ಆಮ್ ಆದ್ಮಿ ಪಕ್ಷ(ಆಪ್)ವನ್ನು ಬೆಂಬಲಿಸುವ ಮತ್ತು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಬಗ್ಗೆ ಜ.17 ಹಾಗೂ ಜ.18ರಂದು ನಿರ್ಧರಿಸಲಾಗುವುದು ಎಂದು ನರ್ಮದಾ ಬಚಾವೋ ಆಂದೋಲನದ ಮುಖ್ಯಸ್ಥೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಹೇಳಿದರು.
ಹುನಗುಂದ ತಾಲೂಕಿನ ಸುಕ್ಷೇತ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗ ಆಮ್ ಆದ್ಮಿ ಪಕ್ಷಕ್ಕೆ ನೀಡಿರುವ ಬೆಂಬಲ ಕೇವಲ ಬೆಂಬಲಕ್ಕೆ ಸೀಮಿತವೇ ಅಥವಾ ಅದನ್ನು ಇನ್ನಷ್ಟು ವಿಸ್ತರಿಸಬೇಕೇ ಎಂಬುದರ ಬಗ್ಗೆ ಬಗ್ಗೆ ವಿವಿಧ ಹಂತದ ಚರ್ಚೆಗಳು ನಡೆದಿವೆ ಮತ್ತು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಚುನಾವಣೆಗೆ ಸ್ಪರ್ಧಿಸಬೇಕೆಂಬ ಬೇಡಿಕೆಯೂ ಇದೆ. ಆದರೆ, ಸಧ್ಯಕ್ಕೆ ಯಾವುದನ್ನೂ ಹೇಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈಗಾಗಲೇ ನರ್ಮದಾ ತೀರದ ಜನರಿಂದ ಸ್ಪರ್ಧಿಸುವಂತೆ ಒತ್ತಾಯ ಬರುತ್ತಿದೆ. ಆಮ್ ಆದ್ಮಿ ಪಕ್ಷಕ್ಕೆ ಬೆಂಬಲವನ್ನೂ ಘೋಷಿಸಿದ್ದೇನೆ. ಮುಂದಿನ ತೀರ್ಮಾನಕ್ಕೆ ಜನಾಂದೋಲನ ಸಮಿತಿಯ ಅಭಿಪ್ರಾಯ ಪಡೆಯುವುದಾಗಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

