ಪ್ರಧಾನ ಸುದ್ದಿ

ಭೂ ಸಂತ್ರಸ್ತರಿಗೆ ಕೆಲಸ ಕೊಟ್ಟಿಲ್ಲ

Published On :

ಬಳ್ಳಾರಿ: ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ(ಬಿಟಿಪಿಎಸ್) ಆರಂಭವಾಗಿ 8-10 ವರ್ಷ ಕಳೆದು, 1,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಆದರೆ, ಭೂ ಸಂತ್ರಸ್ತ ರೈತರ ಬೇಡಿಕೆ ಇನ್ನೂ ಈಡೇರಿಲ್ಲ. ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗ ನೀಡುವ ಭರವಸೆ ಇನ್ನೂ ಈಡೇರಿಲ್ಲ. ಬಳ್ಳಾರಿ ಸಮೀಪದ ಕುಡಿತಿನಿ ಹಾಗೂ ತಿಮ್ಮಲಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ 1850 ಎಕರೆ ಪ್ರದೇಶವನ್ನು ಭೂಸ್ವಾಧೀನ ಪಡಿಸಿಕೊಂಡು ಸರ್ಕಾರ ಉಷ್ಣ ವಿದ್ಯುತ್ ಘಟಕ ಸ್ಥಾಪಿಸಿದೆ. 500 ಮೆ.ವ್ಯಾ. ಸಾಮರ್ಥ್ಯದ 2 ವಿದ್ಯುತ್ ಘಟಕಗಳು 1000 ಮೆ.ವ್ಯಾ. ವಿದ್ಯುತ್ ಉತ್ಪಾದಿಸುತ್ತಿವೆ. 750 ಮೆಗಾವ್ಯಾಟ್ ಸಾಮರ್ಥ್ಯದ ಮೂರನೇ ಘಟಕದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇನ್ನೆರಡು ವರ್ಷಗಳಲ್ಲಿ ಅದೂ ವಿದ್ಯುತ್ ಉತ್ಪಾದನೆ ಆರಂಭಿಸಲಿದೆ.
ಈ ಘಟಕಗಳಿಗಾಗಿ ಒಟ್ಟು 354 ರೈತರ 1,850 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ, ಬಿಟಿಪಿಎಸ್ ಭೂ ಸಂತ್ರಸ್ತರ ಸಂಖ್ಯೆ ಕೇವಲ 293 ಎನ್ನುತ್ತಿದೆ. 2006 ಹಾಗೂ 2009ರಲ್ಲಿ 136 136 ಭೂ ಸಂತ್ರಸ್ತರಿಗೆ ಮಾತ್ರ ಉದ್ಯೋಗಾವಕಾಶ ಕಲ್ಪಿಸಿದೆ. 31 ರೈತರು ಕೋರ್ಟ್ ಮೊರೆ ಹೋಗಿದ್ದಾರೆ. ರೈತರಿಗೆ ತರಬೇತಿ ನೀಡಿ, ಉದ್ಯೋಗ ನೀಡುವಂತೆ ಕೋರ್ಟ್ ಹೇಳಿದ್ದರೂ ಪ್ರಯೋಜನವಿಲ್ಲ. 83 ರೈತರಿಗೆ ಕೆಲಸ ಕೊಡುವುದು ಬಾಕಿ ಇದೆ ಎಂದು ಕಂಪನಿ ಹೇಳುತ್ತಿದೆ. ನಿಜವಾಗಿ 354 ಜನ ಭೂಮಿ ಕೊಟ್ಟಿದ್ದಾರೆ, ಈಗ ಅವರಿಗೆ ಉದ್ಯೋಗವಿಲ್ಲ ಎಂಬುದು ರೈತರ ಅಳಲು. 1998ರ ಪೂರ್ವದಲ್ಲಿ 3 ವರ್ಷ ಪಟ್ಟಧಾರ ಅನುಭವ ಇರಬೇಕೆಂಬ ನಿಯಮ ಸರಿಯಲ್ಲ. ಅದನ್ನು 48 ದಿನಗಳಿಗೆ ಸಡಿಲಗೊಳಿಸಬೇಕು. ದತ್ತು ಮಕ್ಕಳಿಗೆ ಉದ್ಯೋಗಾವಕಾಶ ಕೊಡಬೇಕು, ಗಂಡು ಸಂತಾನವಿಲ್ಲದಾಗ, ಮಗಳ ಗಂಡನಿಗೂ ಕೆಲಸ ಕೊಡಬೇಕು ಎಂದು ರೈತರು ಹೋರಾಟ, ಪ್ರತಿಭಟನೆ ಮಾಡಿ ಸಚಿವರು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಬೇಡಿಕೆ ಈಡೇರುತ್ತಿಲ್ಲ ಎಂದು ಭೂ ಸಂತ್ರಸ್ತ ರೈತ ವೆಂಕಟರಮಣ ಬಾಬು ವಿವರಿಸುತ್ತಾರೆ.



ಕರಡಿ ಧಾಮಕ್ಕೆ ಆತಂಕ
ಉಷ್ಣ ವಿದ್ಯುತ್ ಸ್ಥಾವರ ಜಿಲ್ಲೆಯ ದರೋಜಿ ಕರಡಿ ಧಾಮದಿಂದ ಕನಿಷ್ಠ 10 ಕಿ.ಮೀ. ದೂರದಲ್ಲಿರಬೇಕೆಂದು ನ್ಯಾಷನಲ್ ಬೋರ್ಡ್ ಆಫ್ ವೈಲ್ಡ್ ಲೈಫ್ ಹೇಳಿದೆ. ಆದರೆ, ಈ ಸ್ಥಾವರ ಏಳೆಂಟು ಕಿ.ಮೀ. ದೂರದಲ್ಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.