ಪ್ರಧಾನ ಸುದ್ದಿ

ಶಿವಶಿವಾ, ವರ್ಷದ ನಂತರ ಬಂತು ಶವ!

Published On :

ಹುಮನಾಬಾದ್: ವಿದೇಶದಲ್ಲಿ ಮೃತಪಟ್ಟ ಕಾರ್ಮಿಕನ ಶವ ಬರೋಬ್ಬರಿ ವರ್ಷದ ನಂತರ ಭಾರತಕ್ಕೆ ಬಂದಿದೆ!
ಹುಮನಾಬಾದ್ ತಾಲೂಕಿನ ಚಿನಕೇರಾ ಗ್ರಾಮದ ಬಸವರಾಜ ತಿಪ್ಪಾರೆಡ್ಡಿ ಪುಟ್ನೆ (40)  ಹೊಟ್ಟೆಪಾಡಿಗಾಗಿ ಸೌದಿ ಅರೇಬಿಯಾಕ್ಕೆ ಹೋಗಿದ್ದರು. ಮೂರ್ನಾಲ್ಕು ವರ್ಷಗಳಿಂದ ಅಲ್ಲಿನ ಆಲ್ ಮುತೊದ್ದರ್ ಈಸ್ಟ್ ಎಂಬ ಕಂಪನೀಲಿ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದರು. 2013 ಜು. 26ಕ್ಕೆ ಹೃದಯಾಘಾತದಿಂದ ಮೃತಪಟ್ಟರೆನ್ನುತ್ತಾರೆ ಅವರ ಸ್ನೇಹಿತರು.
ಬಡತನ, ಅನಕ್ಷರತೆ, ಮಾಹಿತಿ ಕೊರತೆಯಿಂದ ಯಾರನ್ನು ಸಂಪರ್ಕಿಸಬೇಕೆಂದು ತಿಳಿಯದೇ 15 ದಿನ ಕಳೆದುಹೋಗಿತ್ತು. ಕೊನೆಗೆ ಅವರಿವರ ಸಲಹೆ ಮೇರೆಗೆ ಭಾರತೀಯ ರಾಯಭಾರ ಕಚೇರಿಗೆ ಪತ್ರ ಬರೆದು ಶವ ತರಿಸಿಕೊಡುವಂತೆ ಪತ್ರ ಬರೆದಿದ್ದರು. ಬಸವರಾಜ್ ಕುಟುಂಬ, ಶವದ ನಿರೀಕ್ಷೆಯಲ್ಲಿ ದಿನದೂಡಿತ್ತು. ಆದರೆ ನಾಲ್ಕು, 5 ತಿಂಗಳಾದರೂ ಯಾವುದೇ ಮಾಹಿತಿ ಬಾರದ್ದರಿಂದ ನಿರೀಕ್ಷೆ ಕೈಚೆಲ್ಲಿದ್ದರು. ವಿಚಿತ್ರವೆಂದರೆ ಆರು ತಿಂಗಳ ನಂತರ ರಾಯಭಾರ ಕಚೇರಿಯಿಂದ ಉತ್ತರ ಬಂದಿದ್ದು, ಬಸವರಾಜ ಶವವನ್ನು ಸೌದಿಯ ಶವಾಗಾರದಲ್ಲಿ ಇಡಲಾಗಿದ್ದು, ಅಲ್ಲಿಯೇ ಪಡೆಯಬೇಕು. ಇಲ್ಲದಿದ್ದರೇ ಅಲ್ಲೇ ಅಂತ್ಯಕ್ರಿಯೆ ನಡೆಸಲಾಗುತ್ತದೆಂದು ಸೌದಿ ಸರ್ಕಾರ ತಿಳಿಸಿರುವುದಾಗಿ ಸ್ಥಳೀಯ ತಹಸೀಲ್ದಾರ್ ಮೂಲಕ ಮಾಹಿತಿ ರವಾನಿಸಿತ್ತು.
'ಆರ್ಥಿಕ ಸಂಕಷ್ಟದಿಂದ ಹೋಗಲಾಗದು, ನೀವೇ ತರಿಸಿಕೊಡಿ' ಎಂದು ಬಸವರಾಜರ ಪತ್ನಿ ಪುನಃ ಪತ್ರ ಬರೆದಿದ್ದರು. ಇದಾಗಿ 6 ತಿಂಗಳ ನಂತರ ಮೃತದೇಹವನ್ನು ವಿಮಾನದ ಮೂಲಕ ಹೈದ್ರಾಬಾದ್‌ಗೆ ತರಿಸಿಕೊಳ್ಳಲಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಹೈದ್ರಾಬಾದ್ ವಿಮಾನ ನಿಲ್ದಾಣಕ್ಕೆ ಮಂಗಳವಾರ ತೆರಳಿದ ಕುಟುಂಬದವರು ಶವ ಪಡೆದು ಬುಧವಾರ ನಸುಕಿನ ಜಾವ ಚೀನಕೇರಾ ಗ್ರಾಮಕ್ಕೆ ತಂದಿದ್ದಾರೆ. ಅಂದೇ ಅಂತ್ಯಕ್ರಿಯೆ ನಡೆಸಲಾಗಿದೆ. ಇವರಿಗೆ ಪತ್ನಿ, ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳು ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.