ಕಲ್ಲಿದ್ದಲು ಹಗರಣ ವಿಶೇಷ ಕೋರ್ಟ್

ನವದೆಹಲಿ: ಕಲ್ಲಿದ್ದಲು ಬ್ಲಾಕ್ ಹಂಚಿಕೆ ಹಗರಣದ ವಿಚಾರಣೆಗೆ ವಿಶೇಷ ಕೋರ್ಟ್ ರಚಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ. ಜತೆಗೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸಿದ ಪ್ರಕರಣಗಳ ವಿಚಾರಣೆಗೆ ನ್ಯಾಯಾಧೀಶರ ನೇಮಕಕ್ಕೂ ದೆಹಲಿ ಹೈಕೋರ್ಟ್ಗೆ ಸೂಚಿಸಿದೆ.
ವಾರದೊಳಗೆ ವಿಶೇಷ ಸರ್ಕಾರಿ ವಕೀಲನನ್ನು ನೇಮಿಸ ಬೇಕೆದು ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧಾರನ್ನೊಳಗೊಂಡ ಪೀಠ ಸೂಚಿಸಿತು. ಜತೆಗೆ, ಈ ಹೊಣೆಯನ್ನು ಹಿರಿಯ ವಕೀಲ ಗೋಪಾಲ ಸುಬ್ರಮಣಿಯಮ್ ಅವರಿಗೆ ವಹಿಸಲು ಸಿಜೆಐ ಸೇರಿದಂತೆ ಹೆಚ್ಚಿನವರು ಆಸಕ್ತಿ ವಹಿಸಿದ್ದೂ ಕಂಡುಬಂತು. ಕಳಂಕವಿರದ, ಪ್ರಾಮಾಣಿಕ ಹಾಗೂ ಉತ್ತಮ ಕಾನೂನಾತ್ಮಕ ಮನಸ್ಸು ಹೊಂದಿರುವವರೇ ಈ ಹುದ್ದೆಗೆ ಸೂಕ್ತ ಎಂದು ಮು. ನ್ಯಾ. ಲೋಧಾ ಅಭಿಪ್ರಾಯಪಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


