ಭೈರಪ್ಪ ಆಹ್ವಾನಕ್ಕೆ ಪ್ರತಾಪ್ ಒತ್ತಾಯ

ಬೆಂಗಳೂರು: ದಕ್ಷಿಣ ಭಾರತದಲ್ಲಿ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಏಕೈಕ ಸಾಹಿತಿಯಾದ ಡಾ.ಎಸ್.ಎಲ್.ಭೈರಪ್ಪ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವಂತೆ ಮೈಸೂರು ಸಂಸದ ಪ್ರತಾಪ್ ಸಿಂಹ ಉನ್ನತಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಭೈರಪ್ಪ ಅವರು ಮೈಸೂರು ಭಾಗದವರು. ಅಲ್ಲಿನ ಸಾಂಸ್ಕೃತಿಕ ರಿವಾಜುಗಳ ಬಗ್ಗೆ ಆಳವಾದ ಅರಿವಿದೆ. ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ ದಕ್ಷಿಣ ಭಾರತದ ಏಕೈಕ ಸಾಹಿತಿ ಎಂಬ ಹೆಗ್ಗಳಿಕೆ ಅವರದ್ದು. ಜತೆಗೆ ಸರಸ್ವತಿ ಸಮ್ಮಾನ್, ಜ್ಞಾನಪೀಠ ಪ್ರಶಸ್ತಿಯಷ್ಟೇ ಮೌಲ್ಯಯುತವಾದದ್ದು ಎಂದು ಪ್ರತಾಪ್ ಅಭಿಪ್ರಾಯಪಟ್ಟರು.
ಆದರೆ ಪೂರ್ವನಿರ್ಧರಿತರಾಗಿಯೇ ಬಂದಂತೆ ಕಂಡ ಸಿದ್ದರಾಮಯ್ಯ ಈ ಬಾರಿ ಗಿರೀಶ್ ಕಾರ್ನಾಡ್ರನ್ನೇ ಕರೆಯೋಣ ಎಂದು ಹೇಳಿದ್ದರಿಂದ ಸಭೆ ಒಪ್ಪಬೇಕಾಯಿತು. ಈ ಸಂದರ್ಭದಲ್ಲಿ ಮೈಸೂರಿನ ಕಸದ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದ ಪ್ರತಾಪ್ಸಿಂಹ, ಈ ಬಗ್ಗೆ ಸೂಕ್ತ ಯೋಜನೆ ರೂಪಿಸುವುದು ಅಗತ್ಯ. ಜತೆಗೆ ಮೈಸೂರು ಮಹಾರಾಣಿ ಪ್ರಮೋದಾ ದೇವಿ ಅವರನ್ನು ರಾಜಮರ್ಯಾದೆಯೊಂದಿಗೆ ಆಹ್ವಾನಿಸಬೇಕು ಎಂದು ಸಲಹೆ ನೀಡಿದರು.
9 ದಿನದ ಆಚರಣೆ: ದಸರಾದ 9ನೇ ದಿನ ಸಾಂಸ್ಕೃತಿಕ ಕಾರ್ಯಕ್ರಮ ಮೊಟಕುಗೊಳಿಸಿ ಎಂದು ಸಲಹೆ ನೀಡಿದ್ದ ಮೈಸೂರು ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಅವರ ಸಲಹೆಗೆ ಙಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನವರಾತ್ರಿ ಎಂದರೆ 9 ದಿನ ನಡೆಯುವ ನಾಡ ಹಬ್ಬ. ಇಲ್ಲಿನ ಯಾವ ಆಚರಣೆಯೂ ಮೊಟಕುಗೊಳ್ಳುವಂತಿಲ್ಲ. ಹಿಂದೆಲ್ಲ ಹೀಗೆಯೇ ನಡೆದಿದೆ. ಯಾರೂ ಆಕ್ಷೇಪ ಮಾಡಿಲ್ಲ. ಈಗ ನೀವು ಹೇಳಿದರೆ ಹೇಗೆ? ದಸರಾದ ಯಾವ ಆಚರಣೆಯೂ ಮೊಟಕುಗೊಳ್ಳುವಂತಿಲ್ಲ ಎಂದು ತಾಕೀತು ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


