ಪ್ರಧಾನ ಸುದ್ದಿ

ಮುಂದಿನ ತಿಂಗಳು ಮೋದಿ ಸಂಪುಟ ಪುನಾರಚನೆ?

ಮುಂದಿನ ತಿಂಗಳು ಮೋದಿ ಸಂಪುಟ ಪುನಾರಚನೆ?
Published On :

ನವದೆಹಲಿ:  ಹಿರಿಯ ಸಚಿವರಿಬ್ಬರ ಭಾರ ಕಡಿಮೆ ಮಾಡಲು ಸಂಸತ್ತಿನ ಮುಂಗಾರು ಅಧಿವೇಶನ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಂಪುಟ ಪುನರ್ ರಚಿಸುವ ಸಾಧ್ಯತೆ ಇದೆ.
ಹಣಕಾಸಿನ ಜತೆಗೆ ರಕ್ಷಣೆ, ಕಾರ್ಪೊರೇಟ್ ವ್ಯವಹಾರಗಳನ್ನೂ ನೋಡಿಕೊಳ್ಳುತ್ತಿರುವ ಅರುಣ್ ಜೇಟ್ಲಿ ಹಾಗೂ ಗೃಹ ಸಚಿವ ರಾಜನಾಥ ಸಿಂಗ್ ಅವರ ಹೊಣೆಯನ್ನು ಕೊಂಚ ಕಡಿಮೆ ಮಾಡುವುದು ಪ್ರಧಾನಿ ಇರಾದೆ. ಹೀಗಾಗಿ ರಕ್ಷಣೆ ಮತ್ತು ಗೃಹ ಖಾತೆಗಳಿಗೆ ಹೆಚ್ಚುವರಿಯಾಗಿ ತಲಾ ಒಬ್ಬರು ರಾಜ್ಯ ಸಚಿವರನ್ನು ನೇಮಕ ಮಾಡುವ ಸಂಭವ ಇದೆ. ಅಲ್ಲದೆ ದೇಶದಲ್ಲಿ ಬರ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಕೃಷಿ ಖಾತೆಯನ್ನು ಅನುಭವಿಯೊಬ್ಬರಿಗೆ ವಹಿಸಿ, ಹಾಲಿ ಕೃಷಿ ಸಚಿವ ರಾಧಾ ಮೋಹನ ಸಿಂಗ್ ಅವರಿಗೆ ಬೇರೆ ಖಾತೆ ನೀಡುವ ನಿರೀಕ್ಷೆ ಇದೆ.
ಈ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಆದರೆ ಸರ್ಕಾರ ಮತ್ತು ಪಕ್ಷದಲ್ಲಿ ಚರ್ಚೆಯಾಗಿದ್ದು, ಆ.14ರ ಬಳಿಕ ಸಂಪುಟ ಪುನರ್ ರಚಿಸುವ ಸಾಧ್ಯತೆ ಇದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಗೋಪಿನಾಥ ಮುಂಡೆ ನಿಧನದಿಂದ ತೆರವಾಗಿರುವ ಸ್ಥಾನವನ್ನು ಇದೇ ಸಂದರ್ಭದಲ್ಲಿ ಭರ್ತಿ ಮಾಡಲಾಗುವುದು.
ರಾಜ್ಯ ಸಚಿವರ ಎರಡು ತಿಂಗಳ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ತೃಪ್ತಿಕರವಾಗಿ ಕೆಲಸ ಮಾಡದ ಸಚಿವರನ್ನು ಕೈ ಬಿಟ್ಟರೂ ಅಚ್ಚರಿ ಇಲ್ಲ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.