ಪ್ರಧಾನ ಸುದ್ದಿ

ಆಸ್ಪತ್ರೆಯಿಂದ ನವಜಾತ ಶಿಶು ಅಪಹರಣ

Published On :

ಬೆಳಗಾವಿ: ನಗರದ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ ನಾಲ್ಕೇ ಗಂಟೆಯಲ್ಲಿ ಗಂಡು ಶಿಶುವನ್ನು ನರ್ಸ್ ವೇಷದಲ್ಲಿ ಬಂದ ಮಹಿಳೆಯೊಬ್ಬಳು ಅಪಹರಿಸಿದ್ದಾಳೆ.
ಹುಬ್ಬಳ್ಳಿಯ ಇಂದ್ರಪ್ರಸ್ತ ನಗರದ ಐಶ್ವರ್ಯ ಗಣೇಶ ತಾಪಸಕರ ದಂಪತಿಯ ಮಗು ಅಪಹರಣವಾಗಿದೆ. ಮಧ್ಯಮ ವಯಸ್ಸಿನ ಮಹಿಳೆಯೊಬ್ಬಳು ನರ್ಸ್ ವೇಷದಲ್ಲಿ ಬಂದು ಐಶ್ವರ್ಯ ಮಡಿಲಿನಲ್ಲಿದ್ದ ಮಗುವಿಗೆ ಬಿಸಿಜಿ ಚುಚ್ಚು ಮದ್ದು ಹಾಕಿಸಿಕೊಂಡು ಬರುವುದಾಗಿ ಹೇಳಿ ಎತ್ತಿಕೊಂಡು ಹೋಗಿದ್ದಾಳೆ. ಅರ್ಧ ಗಂಟೆಯಾದರೂ ವಾಪಸ್ ಆಗದಿದ್ದದ್ದರಿಂದ ತಾಯಿ ಐಶ್ವರ್ಯ ಮತ್ತು ಅವರ ದೊಡ್ಡಮ್ಮ ಶಕುಂತಲಾ ಕಲಾಲ ಮಹಿಳೆಯನ್ನು ಹುಡುಕಿದ್ದಾರೆ. ನಂತರ ಆಸ್ಪತ್ರೆಯಲ್ಲಿದ್ದ ವೈದ್ಯರು, ನರ್ಸ್‌ಗಳನ್ನು ವಿಚಾರಿಸಿದಾಗ ಮಗು ಅಪಹರಣವಾದ ಸಂಗತಿ ತಿಳಿದು ಬಂದಿದೆ.
ಆಸ್ಪತ್ರೆಯಲ್ಲಿ ಸಿಸಿಟಿವಿ, ಬಿಗಿ ಭದ್ರತೆ ಇದ್ದರೂ ಮಗುವನ್ನು ಅಪಹರಿಸಲಾಗಿದೆ. ಮಗು ಅಪಹರಣ ಮಾಡಿದ ಮಹಿಳೆ ಆಸ್ಪತ್ರೆ ಪ್ರವೇಶಿಸುವುದು ಮತ್ತು ಮರಳಿ ಹೋಗುವ ದೃಶ್ಯಗಳು ಸಿಕ್ಕಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.