ವಿಬ್ಗ್ಯೊರ್ ಶಾಲೆ ಅಧ್ಯಕ್ಷನ ಬಂಧನ
ಐಪಿಸಿ ಕಲಂ 201(ಸಾಕ್ಷ್ಯ ನಾಶ ಯತ್ನ), ಬಾಲಾಪರಾಧ ನ್ಯಾಯ ಕಾಯ್ದೆ ಕಲಂ 23 (ಅತ್ಯಾಚಾರದ ಬಗ್ಗೆ ಮಾಹಿತಿ ನೀಡಲು ವಿಳಂಬ) ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 2012 (ಪೋಸ್ಕೋ) ಕಲಂ 21(ಮಕ್ಕಳ ಭದ್ರತೆ ಮತ್ತು ಪಾಲನೆಯಲ್ಲಿ ನಿರ್ಲಕ್ಷ್ಯ) ಅನ್ವಯ ರುಸ್ತುಂ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ರೆಡ್ಡಿ ತಿಳಿಸಿದರು. ಪ್ರಕರಣ ಸಂಬಂಧ ಈಗಾಗಲೇ ಸ್ಕೇಟಿಂಗ್ ತರಬೇತುದಾರ ಮುಸ್ತಫಾನನ್ನು ಬಂಧಿಸಲಾಗಿದೆ. ತನಿಖೆ ಹಂತದಲ್ಲಿ ಇತರರ ವಿರುದ್ಧ ಸಾಕ್ಷ್ಯ ದೊರೆತಲ್ಲಿ ಅವರನ್ನೂ ಬಂಧಿಸುತ್ತೇವೆ, ಯಾರನ್ನೂ ಬಿಡುವುದಿಲ್ಲ ಎಂದು ಆಯುಕ್ತ ರೆಡ್ಡಿ ತಿಳಿಸಿದರು.
ತನಿಖೆ ಪ್ರಗತಿಯಲ್ಲಿರುವುದರಿಂದ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗದು. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುವುದು. ಡಿಸಿಪಿ ಅಭಿಷೇಕ್ ಗೋಯಲ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು ಶಾಲಾ ಶಿಕ್ಷಕರು, ತರಬೇತುದಾರರು ಸೇರಿದಂತೆ ಎಲ್ಲ ಸಿಬ್ಬಂದಿ ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದೆ ಎಂದು ರೆಡ್ಡಿ ಮಾಹಿತಿ ನೀಡಿದರು.
ನಿಲ್ಲದ ಅತ್ಯಾಚಾರ ಸರಣಿ
ಇದನ್ನು ಕಂಡ ಸಾರ್ವಜನಿಕರು ಆಕೆಯನ್ನು ಬಾಲ ಮಂದಿರಕ್ಕೆ ಒಪ್ಪಿಸಿದ್ದಾರೆ. ಮಹಿಳಾ ಸಹಾಯವಾಣಿ ಸಿಬ್ಬಂದಿ ಬುಧವಾರ ವಿಚಾರಣೆ ಮಾಡಿದಾಗ ನಿಜ ವಿಚಾರ ಹೇಳಿದ್ದಾಳೆ.
ಮನೆಗೆ ನುಗ್ಗಿ ಬಲಾತ್ಕಾರ: ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣದಲ್ಲಿ ಯುವತಿ ಮನೆಗೆ ನುಗ್ಗಿದ ಲಂಬೋದರ (23) ಎಂಬಾತ ಅತ್ಯಾಚಾರ ನಡೆಸಿದ್ದಾನೆ. ಲಂಬೋದರನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಂಡ್ಯ ತಾಲೂಕು ಮಳವಳ್ಳಿ ಪಟ್ಟಣದ ಗಂಗಾಮತದಲ್ಲಿ ಪ್ರೀತಿಸುವ ನಾಟಕವಾಡಿದ ಹುಲಿಯೂರುದುರ್ಗದ ರವಿಶಂಕರ್ ಎಂಬಾತ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಈಕೆ ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣಳಾಗಿದ್ದು, ಪಟ್ಟಣದ ಖಾಸಗಿ ದಂತ ಚಿಕಿತ್ಸಾಲಯವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಮೂರು ದಿನಗಳ ಹಿಂದೆ ಈಕೆ ನಾಪತ್ತೆಯಾಗಿದ್ದಳೆಂದು ತಾಯಿ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ರವಿಶಂಕರ್ ಮನೆಯಲ್ಲಿ ಈಕೆಯನ್ನು ಪತ್ತೆ ಹಚ್ಚಿದ್ದಾರೆ. ರವಿಶಂಕರ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅತ್ಯಾಚಾರ ಯತ್ನ: ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಮಾಗೋಡ ಗ್ರಾಮದಲ್ಲಿ ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಅದೇ ಗ್ರಾಮದ ಹನುಮಂತಪ್ಪ ಉಜ್ಜಪ್ಪ ಮಾಕನೂರು (35) ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

