ಪ್ರಧಾನ ಸುದ್ದಿ

ಮಲೆನಾಡನ್ನೆಲ್ಲ ಒಂದೇ ಜಿಲ್ಲೆ ಮಾಡಿಬಿಡಿ

Published On :

ವಿಧಾನಸಭೆ: ಮಲೆನಾಡಿನ ಜನರ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಕಾಳಜಿಯೇ ಇಲ್ಲ. ಬಯಲುಸೀಮೆಯಲ್ಲಿ ನಿರ್ಮಿಸುವಂತಹ ರಸ್ತೆಯನ್ನು ಈ ಪ್ರದೇಶಗಳಲ್ಲೂ ಮಾಡುತ್ತಾರೆ. ರಸ್ತೆಗಳು ಹಾಳಾಗುತ್ತಿವೆ. ನಮ್ಮ ಮಲೆನಾಡನ್ನೆಲ್ಲ ಒಂದು ಜಿಲ್ಲೆ ಮಾಡಿಬಿಡಿ. ಆಗಲಾದರೂ ಸಮಸ್ಯೆ ಸರಿಯಾಗಿಬಿಡಬಹುದು ಎಂದು ಜೆಡಿಎಸ್‌ನ ಎಚ್.ಕೆ. ಕುಮಾರಸ್ವಾಮಿ ಹಾಗೂ ಬಿಜೆಪಿಯ ಸಿ.ಟಿ. ರವಿ ಹೇಳಿದರು. ಲೋಕೋಪಯೋಗಿ ಇಲಾಖೆ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಎಚ್.ಕೆ. ಕುಮಾರಸ್ವಾಮಿ, ಸಕಲೇಶಪುರದಲ್ಲಿ 1991ರಿಂದಲೂ ರಸ್ತೆಯನ್ನು ಗುಣಮಟ್ಟವಾಗಿ ಮಾಡಿಲ್ಲ. ಕಾಂಕ್ರೀಟ್ ರಸ್ತೆ ಇನ್ನೂ ಮಾಡಿಲ್ಲ. ಅತಿಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಯಾವ ರೀತಿಯ ರಸ್ತೆ ಮಾಡಬೇಕೆಂಬುದೇ ಇಲಾಖೆಗೆ ಗೊತ್ತಿಲ್ಲ ಎಂದು ದೂರಿದರು. ಈ ಸಂದರ್ಭದಲ್ಲಿ ಸಿ.ಟಿ. ರವಿ ಕೂಡ ಇದಕ್ಕೆ ದನಿಗೂಡಿಸಿದರು. ಆಗ ಇಬ್ಬರೂ ಸೇರಿ ನಮಗೇ ಪ್ರತ್ಯೇಕ ಜಿಲ್ಲೆ ಕೊಟ್ಟುಬಿಡಿ. ನಾವು ರಾಜ್ಯ ಕೇಳೊಲ್ಲ. ಜಿಲ್ಲೆಯಾದರೂ ಆದರೆ ನಮಗೆ ಅಗತ್ಯವಾದ ರಸ್ತೆ ಆಗುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.