ಪ್ರಧಾನ ಸುದ್ದಿ

ಸರ್ವಜಾತಿಗಳ ರುದ್ರಭೂಮಿ: ಸರ್ಕಾರದ ಹೊಸ ಯೋಜನೆ

Published On :

ವಿಧಾನಪರಿಷತ್ತು: ಇನ್ನು ಮುಂದೆ ಜಾತಿವಾರು ರುದ್ರಭೂಮಿಗೆ ಜಾಗ ನೀಡದೆ ಎಲ್ಲಾ ಜಾತಿಯವರು ಒಂದೇ ರುದ್ರಭೂಮಿಯಲ್ಲಿ ಶವಸಂಸ್ಕಾರ ಮಾಡುವಂತೆ ರುದ್ರುಭೂಮಿಗಳನ್ನು ಗುರುತಿಸಲು ಇಲಾಖೆ ಚಿಂತಿಸಿದೆ. ರಾಜ್ಯದಲ್ಲಿ ಎಲ್ಲಾ ಜಾತಿ, ಜನಾಂಗದವರು ತಮ್ಮದೇ ಜಾತಿ ರುದ್ರಭೂಮಿಗಾಗಿ ಜಾಗ ಕೇಳಿ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ, ಸರ್ಕಾರ ಎಲ್ಲಾ ಜಾತಿಗಳಿಗೂ ಪ್ರತ್ಯೇಕ ಜಾಗ ನೀಡುವುದು ಕಷ್ಟವಾಗಿದೆ.
   ಇದನ್ನು ಪರಿಹರಿಸಲು ಸರ್ಕಾರ ಸಾಮಾನ್ಯ ರುದ್ರಭೂಮಿ ಮಾಡುತ್ತಿದೆ. ಈ ಮೂಲಕ ಮನುಷ್ಯ ಸತ್ತಮೇಲಾದರೂ ಒಂದಾಗುವಂತೆ ಮಾಡುತ್ತಿದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು. ಸದನದಲ್ಲಿ ಬುಧವಾರ ಕಾಂಗ್ರೆಸ್‌ನ ಗೋವಿಂದರಾಜು ಕೇಳಿದ ರುದ್ರಭೂಮಿಗಳ ಒತ್ತುವರಿ ಕುರಿತ ಪ್ರಶ್ನೆಗೆ ಉತ್ತರಿಸಿ, ಸರ್ಕಾರದ ಹೊಸ ಯೋಜನೆ ಬಗ್ಗೆ ವಿವರ ನೀಡಿದರು. ಸತ್ತಮೇಲೆ ಶೋಷಿತರು ಮತ್ತು ಹಿಂದುಳಿದವರ ರುದ್ರಭೂಮಿಯಲ್ಲಿ ಶವಸಂಸ್ಕಾರ ಮಾಡಿದರೆ ಅವರು ಸ್ವರ್ಗಕ್ಕೆ ಹೋಗುವುದಿಲ್ಲ ಎಂಬ ಮೂಢ ನಂಬಿಕೆ ಅನೇಕ ಜಾತಿಗಳಲ್ಲಿ ಇದೆ. ಇದೊಂದು ಸಾಮಾಜಿಕ ಪಿಡುಗಿನಂತಾಗಿದೆ. ಹೀಗಾಗಿ ಎಲ್ಲಾ ಜಾತಿಗಳು ಪ್ರತ್ಯೇಕ ರುದ್ರಭೂಮಿಗಾಗಿ ಜಾಗ ಕೇಳುತ್ತಿದ್ದಾರೆ. ಇದನ್ನು ತಪ್ಪಿಸಲು ಇಲಾಖೆ ಚಿಂತಿಸುತ್ತಿದೆ ಎಂದರು. ಇನ್ನುಮಂದೆ ತಮ್ಮ ಜಾತಿಯವರ ಶವಗಳನ್ನು ತಮ್ಮ ಜಾತಿ ರುದ್ರಭೂಮಿಯಲ್ಲೇ ಸಂಸ್ಕಾರ ಮಾಡಬಹುದು. ಇಲ್ಲದಿದ್ದರೆ, ಸಾಮಾನ್ಯ ರುದ್ರಭೂಮಿಯಲ್ಲಿ ಮಾಡಬೇಕಾಗುತ್ತದೆ. ಹೀಗಾಗಿ ಇನ್ನುಮುಂದೆ ಯಾರೇ ಜಾತಿವಾರು ರುದ್ರಭೂಮಿಗೆ ಜಾಗ ಕೇಳಿದರೆ ಸರ್ಕಾರ ನೀಡುವುದಿಲ್ಲ ಎಂದು ಶ್ರೀನಿವಾಸಪ್ರಸಾದ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.