ಪ್ರಧಾನ ಸುದ್ದಿ

ದುಬಾರೆಯಲ್ಲಿ ರ್ಯಾಫ್ಟಿಂಗ್ ಸಾಹಸ ಪುನಾರಂಭ

ದುಬಾರೆಯಲ್ಲಿ ರ್ಯಾಫ್ಟಿಂಗ್ ಸಾಹಸ ಪುನಾರಂಭ
Published On :

ಕುಶಾಲನಗರ: ಕಳೆದ ಕೆಲವು ದಿನಗಳಿಂದ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಏರುತ್ತಿದ್ದಂತೆಯೇ ದುಬಾರೆ ಸಾಕಾನೆ ಶಿಬಿರದ ಬಳಿ ನಡೆಯುತ್ತಿರುವ ಸಾಹಸ ಕ್ರೀಡೆ ರ್ಯಾಫ್ಟಿಂಗ್ ಪುನಾರಂಭಗೊಂಡಿದೆ.  ಏಕಗವಾಕ್ಷಿ ಟಿಕೆಟ್ ಕೌಂಟರ್ ತೆರೆಯುವುದರೊಂದಿಗೆ ಪ್ರವಾಸಿಗರಿಗೆ ಸಾಹಸ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಸಂದರ್ಭ ಸುರಕ್ಷಿತ ರ್ಯಾಫ್ಟಿಂಗ್‌ಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ದುಬಾರೆ ರಿವರ್ ರ್ಯಾಫ್ಟಿಂಗ್ ಅಸೋಸಿಯೇಶನ್ ಪ್ರಮುಖರು ತಿಳಿಸಿದ್ದಾರೆ.

ನುರಿತ ಗೈಡ್‌ಗಳ ನಿಯೋಜನೆ:
ದುಬಾರೆಯಲ್ಲಿ ಭಾನುವಾರ ರ್ಯಾಫ್ಟಿಂಗ್ ಅಸೋಶಿಯೇಷನ್ ಅಧ್ಯಕ್ಷ ಬಿ.ಸಿ. ಮಾದಯ್ಯ ಹಾಗೂ ನಿರ್ದೇಶಕ ಪ್ರಮೋದ್ ಮತ್ತಪ್ಪ  ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಪ್ರವಾಸಿಗರಿಗೆ ಉಂಟಾಗಿದ್ದ ಅನನುಕೂಲತೆಗಳನ್ನು ಸರಿಪಡಿಸಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲಾಗುತ್ತಿದೆ. ಕೀಡೆಯಲ್ಲಿ ಪಾಲ್ಗೊಳ್ಳುವವರಿಗೆ ಜೀವ ರಕ್ಷಕ ವ್ಯವಸ್ಥೆ ಹಾಗೂ ಜೀವರಕ್ಷಕ ಕವಚ, ಸೂಕ್ತ ತರಬೇತಿ ಹೊಂದಿರುವ ಗೈಡ್‌ಗಳ ಮೂಲಕ ರ್ಯಾಫ್ಟಿಂಗ್ ನಡೆಸಲಾಗುವುದು. ಹೃಷಿಕೇಶ, ದಾಂಡೇಲಿ ಹಾಗೂ ನೆರೆಯ ನೇಪಾಳದ ನುರಿತ ಗೈಡ್‌ಗಳು ಸೇರಿದಂತೆ ಸ್ಥಳೀಯ ತರಬೇತಿ ಹೊಂದಿದ ಯುವಕರು ಪ್ರವಾಸಿಗರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲಾಡಳಿತದ ಸೂಚನೆಯಂತೆ ಕಳೆದ ಕೆಲವು ಸಮಯ ರ್ಯಾಫ್ಟಿಂಗ್ ಕ್ರೀಡೆ ರದ್ದುಗೊಂಡಿತ್ತು. ಇತ್ತೀಚೆಗಷ್ಟೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ವಿಶೇಷ ಸಮಿತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ಎರಡು ದರ ನಿಗದಿ
ಸಾಮಾನ್ಯ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನದಿಯಲ್ಲಿ 7 ಕಿ.ಮೀ ವ್ಯಾಪ್ತಿಗೆ ಪ್ರವಾಸಿಗರಿಗೆ ತಲಾ ರು. 600 ಹಾಗು 12 ಕಿ.ಮೀ. ದೂರದ ವ್ಯಾಪ್ತಿಗೆ 1000 ದರ ವಿಧಿಸಲಾಗುತ್ತಿದೆ. ಪ್ರವಾಸಿಗರು ಸಾಹಸಿ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಮಾಹಿತಿಗಾಗಿ ಮೊ. ಸಂಖ್ಯೆ 9845263004, 9741817086ನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.