ಪ್ರಧಾನ ಸುದ್ದಿ

ಬೈನಾ ಕನ್ನಡಿಗರಿಗೆ ಕೊನೆಗೂ ಸೂರು

ಬೈನಾ ಕನ್ನಡಿಗರಿಗೆ ಕೊನೆಗೂ ಸೂರು
Published On :

ಪಣಜಿ: ಬೈನಾ ನಿರಾಶ್ರಿತ ಕನ್ನಡಿಗರಿಗೆ ಗೋವಾ ಸರ್ಕಾರ ವಾಸ್ಕೋ ಬುಡ್ಡೆಬಾಟ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಎರಡು ತಿಂಗಳ ಮಟ್ಟಿಗೆ ವಸತಿ ವ್ಯವಸ್ಥೆ ಕಲ್ಪಿಸಿದೆ.
ಈ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಸುಮಾರು 25 ಕುಟುಂಬಗಳು ವಾಸಿಸುವಷ್ಟು ಒಳಾಂಗಣವಿದ್ದು, ಇನ್ನುಳಿದ ಕುಟುಂಬಗಳಿಗೆ ಬೇರೆಡೆ ವ್ಯವಸ್ಥೆ ಕಲ್ಪಿಸುವುದಾಗಿ ಜಿಲ್ಲಾಡಳಿತ ತಿಳಿಸಿದೆ. ಈ ಹಿನ್ನೆಲೆಂುಲ್ಲಿ ಕನ್ನಡಿಗರ ಕುಟುಂಬಗಳು ಸೋಮವಾರ ಸಂಜೆ ಬುಡ್ಡೆಬಾಟ ಸ್ಪೋರ್ಟ್ಸ್ ಕ್ಲಬ್‌ಗೆ ತೆರಳಲು ಬಾಡಿಗೆ ರಿಕ್ಷಾ, ಬೈಕ್ ತರಿಸಿ ಮನೆಂು ಉಳಿದ ಚಿಕ್ಕಪುಟ್ಟ ಸಾಮಾನುಗಳನ್ನು ಒಂ್ಯುಲು ಆರಂಭಿಸಿದರು. ಎರಡು ತಿಂಗಳ ನಂತರದಲ್ಲಿ ಬೈನಾ ನಿರಾಶ್ರಿತ ಕುಟುಂಬಗಳಿಗೆ ಶಾಶ್ವತ ಪುನರ್ವಸತಿ ವ್ಯವಸ್ಥೆ ಕಲ್ಪಿಸುವುದಾಗಿ ಗೋವಾ ಸರ್ಕಾರ ಭರವಸೆ ನೀಡಿದೆ.
ದಾಖಲಾತಿ ಪರಿಶೀಲನೆ: ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಿರಾಶ್ರಿತ ಕುಟುಂಬಗಳ ಅಗತ್ಯ ದಾಖಲೆ ಪರಿಶೀಲಿಸಿದ ನಂತರವೇ ಪ್ರವೇಶಾವಕಾಶ ಕಲ್ಪಿಸಲಾಗುತ್ತಿದೆ. 'ಗೋವಾ ಕನ್ನಡ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ  ಬೆಂಬಲದಿಂದ ವಸತಿ ವ್ಯವಸ್ಥೆ ಸಿಕ್ಕಿದೆ.  ನಾನಾ ಮಠಾಧೀಶರು, ಸಂಘಟನೆಗಳೂ ನಮಗೆ ಸಹಾಂುಹಸ್ತ ನೀಡಿವೆ' ಎಂದು ಬೈನಾ ಕನ್ನಡಿಗರು ಸ್ಮರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.