ಬಸ್-ಟೆಂಪೋ ಡಿಕ್ಕಿ16 ಮಂದಿ ಸಾವು

ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜೂ.2
ಗುಲ್ಬರ್ಗ ಜಿಲ್ಲೆಯ ಆಳಂದ ಪಟ್ಟಣದ ಬಳಿ ಸೋಮವಾರ ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಮಹಾರಾಷ್ಟ್ರದ ಅಕ್ಕಲಕೋಟೆಯ ತಡೋಳಾ ಗ್ರಾಮದ ಮುಲ್ಲಾ ಕುಟುಂಬದ ಸದಸ್ಯರು, ಬಂಧುಗಳು ಸೇರಿ 16 ಮಂದಿ ಅಸುನೀಗಿದ್ದಾರೆ. ವಾಗ್ದರಿ- ರಿಬ್ಬನ್‌ಪಲ್ಲಿ ಅಂತಾರಾಜ್ಯ ಹೆದ್ದಾರಿಯಲ್ಲಿ ಆಳಂದ- ಗುಲ್ಬರ್ಗ ರಸ್ತೆಯಲ್ಲಿರುವ ಕೊಡ್ಲಹಂಗರ್ಗಾ ಕ್ರಾಸ್ ಬಳಿ ಟಾಟಾ ವಾಹನ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಮುಲ್ಲಾ ಕುಟುಂಬ, ಬಂಧುಗಳು ಟಾಟಾ ಪಿಕ್‌ಅಪ್ ವಾಹನದಲ್ಲಿ ಗುಲ್ಬರ್ಗದ ದರ್ಗಾಗೆ ತೆರಳುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಚಾಲಕ ಜೀವನ್ಮರಣ ಸ್ಥಿತಿಯಲ್ಲಿದ್ದಾನೆ.
ಮೃತಪಟ್ಟವರು
ಮಹಿಮೂನ್ ಬಿ. ನಬಿಲಾಲ್(50), ನಬಿಲಾಲ್ ಮಹಮದ್ ಅಲಿ (51), ರಂಜಾನ್ ದಾದಾಮಿಯಾ (21), ಬಾಷಾ ಮದರಸಾ (60) ಮೋಸಿಂ ಸಿಕಂದರ್ (14), ಹುಸೇನ್ ಮದರಸಾ (20), ರಿಹಾನಾ ಜಾವೇದ್ ಶೇಖ್ (30), ಪರ್ವೀನ್ ಸಿಖಂದರ್ (35), ನೂರ್‌ಜಾನ್ ರಜಾಕ್ (30), ಮಮ್ತಾಜ್ ಮಹಿಬೂನ ಲಾವಣಿ (40), ಸಮ್ಮಿರ್ ಸಿಕಂದರ್ (8), ಕಮಲಾಕರ್ ಶಿವಪ್ಪಾ (40), ಬಾಬಾ ಖಾಜಾಬಾಯಿ (4) ಗಾಯಗೊಂಡ 13 ಮಂದಿಯಲ್ಲಿ ಬಾಲಕಿ , 35 ವರ್ಷದ ಮಹಿಳೆ, 45 ವರ್ಷದ ಪುರುಷ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರ ಗುರುತು ಪತ್ತೆಯಾಗಿಲ್ಲ.
ಟ್ಯಾಂಕರ್ ಡಿಕ್ಕಿ: ಮೂರು ಸಾವು
ಉಪ್ಪಿನಂಗಡಿ: ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ತೂಫಾನ್ ಟ್ರ್ಯಾಕ್ಸ್ ವಾಹನಕ್ಕೆ ಡೀಸೆಲ್ ಟ್ಯಾಂಕರ್ ಡಿಕ್ಕಿ ಹೊಡೆದು ಮಗು ಸೇರಿ ಮೂವರು ಮೃತಪಟ್ಟ ಘಟನೆ ಶಿರಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಘಟನೆಯಲ್ಲಿ 11 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಮೃತಪಟ್ಟವರೆಲ್ಲ ದಾವಣಗೆರೆಯ ನಾಗನ್ನೂರು ಹಳ್ಳಿಯವರು. ಶ್ವೇತಾ (26), ಇವರ ಒಂದುವರೆ ವರ್ಷ ಮಗು ಗಣೇಶ್ ಹಾಗೂ ಚಾಲಕ ತಿಪ್ಪೇಶ (32) ಮೃತಪಟ್ಟವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


