ಟಿಡಿಎಸ್

ನವದೆಹಲಿ: ದಿಕ್ಕು ತಪ್ಪಿರುವ ಆರ್ಥಿಕತೆ ಸರಿದಾರಿಗೆ ತರುವುದು ಮತ್ತು 'ಟಿಡಿಎಸ್' ಸೂತ್ರದೊಂದಿಗೆ ಜಾಗತಿಕ ಮಟ್ಟದಲ್ಲಿ 'ಬ್ರಾಂಡ್ ಇಂಡಿಯಾ' ನಿರ್ಮಾಣ- ಇವು ಮೋದಿ ಸರ್ಕಾರದ ನೀಲನಕ್ಷೆ.
16ನೇ ಲೋಕಸಭೆ ಅಸ್ತಿತ್ವಕ್ಕೆ ಬಂದ ಬಳಿಕ ಸೋಮವಾರ ಮೊದಲ ಬಾರಿ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ. 50 ನಿಮಿಷಗಳ ಭಾಷಣದಲ್ಲಿ ಮೋದಿಯವರ 23 ಸೂತ್ರದ ಛಾಯೆ. ಬೆಳವಣಿಗೆ ಸಾಧಿಸಲು ಏಗುತ್ತಿರುವ ಆರ್ಥಿಕತೆಗೆ ಪುನಶ್ಚೇತನ ನೀಡುವುದು ತುರ್ತು ಅಗತ್ಯ ಎನ್ನುವುದನ್ನು ಸರ್ಕಾರ ಮನಗಂಡಿರುವುದು ಸ್ಪಷ್ಟ.
'ಏಕ್ ಭಾರತ್, ಶ್ರೇಷ್ಠ ಭಾರತ್' ಮತ್ತು 'ಸಬ್ ಕೆ ಸಾಥ್, ಸಬ್ ಕಾ ವಿಕಾಸ್' - ಮೋದಿ ಪ್ರಚಾರ ಸಭೆಗಳಲ್ಲಿ ಪ್ರಮುಖವಾಗಿ ಪ್ರಸ್ತಾಪಿಸುತ್ತಿದ್ದ ವಿಚಾರ. ಜನಸಾಮಾನ್ಯರ ಖುಷಿಗೊಳಿಸುವ ಹಲವು ವಿಚಾರಪ್ರಸ್ತಾಪ. ಇದೆಲ್ಲ ಸಾಧಿಸುವ ಗುಟ್ಟು ಅಡಕವಾಗಿರುವುದು 5 'ಟಿ', 3 'ಡಿ', 3 'ಎಸ್' ಮಂತ್ರದಲ್ಲಿ.
ಸಾಮಾನ್ಯ ಮಾರಾಟ ತೆರಿಗೆ (ಜಿಎಸ್ಟಿ), ನೇರ ವಿದೇಶಿ ಬಂಡವಾಳಕ್ಕೆ ಪ್ರೋತ್ಸಾಹ, ಪ್ರಮುಖ ಕೈಗಾರಿಕೆಗಳಿಗೆ ವಿಳಂಬರಹಿತ ಅನುಮೋದನೆ, ಉದ್ಯೋಗ ಸೃಷ್ಟಿ, ಪಾರದರ್ಶಕ, ನ್ಯಾಯಸಮ್ಮತ ಹಾಗೂ ಊಹಿಸಬಹುದಾದ ವಾತಾವರಣ ನಿರ್ಮಾಣ, ಆಹಾರ ಹಣದುಬ್ಬರಕ್ಕೆ ಕಡಿವಾಣ, ಹೂಡಿಕೆ-ಉದ್ಯಮ-ಆರ್ಥಿಕ ಬೆಳವಣಿಗೆ ಉತ್ತೇಜಿಸಲು ವ್ಯತಿರಿಕ್ತವಲ್ಲದ ತೆರಿಗೆ ವ್ಯವಸ್ಥೆ ಇವು ಮೋದಿ ಸರ್ಕಾರ ಪ್ರಕಟಿಸಿರುವ ಪ್ರಮುಖ ಕ್ರಮ.
- ಭ್ರಷ್ಟಾಚಾರಕ್ಕೆ ಕಡಿವಾಣ, ಆಹಾರ ಹಣದುಬ್ಬರ ತಡೆಯುವುದು ಆದ್ಯತೆ; ಕಪ್ಪುಹಣ ಪಿಡುಗು, ಕಾಳಸಂತೆ ಹಾವಳಿ ಹತ್ತಿಕ್ಕುವುದು; 'ದಕ್ಷ, ಸ್ವಚ್ಛ ಆಡಳಿತ'ಕ್ಕಾಗಿ ಲೋಕಪಾಲ್ ಕಾಯ್ದೆ ಜಾರಿಗೆ ಬದ್ಧ
- ಸರಿಯಾದ ಶಿಕ್ಷಣ, ಕೌಶಲ ಅಭಿವೃದ್ಧಿ, ಅವಕಾಶ ಒದಗಿಸುವುದು; ರಾಷ್ಟ್ರೀಯ ಶಿಕ್ಷಣ ನೀತಿ ಜತೆಗೆ ಆನ್ಲೈನ್ ಕೋರ್ಸ್ಆರಂಭಿಸುವುದು; ಪ್ರತಿ ರಾಜ್ಯದಲ್ಲಿ ಐಐಟಿ, ಐಐಎಂ ಸ್ಥಾಪನೆ
- ಸಣ್ಣ ಕೈಗಾರಿಕೆ, ಗೃಹೋದ್ಯಮ, ಜಾಗತಿಕ ವ್ಯಾಪಾರ, ರಫ್ತು ಉತ್ತೇಜನ; ಮಾರಾಟ ವ್ಯವಸ್ಥೆಗೆ ತಾಂತ್ರಿಕತೆಯ ಬಲ
- 2022ರ ಹೊತ್ತಿಗೆ ಪ್ರತಿ ಕುಟುಂಬಕ್ಕೂ ಸೂರು ಮತ್ತು 24್ಗ7 ವಿದ್ಯುತ್ ಪೂರೈಕೆ
- ನಗರ, ಗ್ರಾಮೀಣರ ಭೇದ ಅಳಿಸಿ, ಕೃಷಿಕರಲ್ಲಿ ಆತ್ಮವಿಶ್ವಾಸ ಮೂಡಿಸಲು ಕ್ರಮ; ಜಲ ಭದ್ರತೆಗಾಗಿ 'ಪ್ರಧಾನಿಗಳ ಕೃಷಿ ಸಂಚಯಿನಿ ಯೋಜನೆ' ಶೀಘ್ರ ಘೋಷಣೆ
- ಎಲ್ಲ್ಲ ಕ್ರೀಡೆಗಳ ಪ್ರೋತ್ಸಾಹಕ್ಕೆ ರಾಷ್ಟ್ರೀಯ ಪ್ರತಿಭಾ ಶೋಧ
- ಮಹಿಳೆಯರ ವಿರುದ್ಧದ ದೌರ್ಜನ್ಯ ತಡೆಯಲು 'ಝಿರೊ ಟಾಲರೆನ್ಸ್' ನೀತಿ; ಶಾಸನಸಭೆಗಳಲ್ಲಿ ಶೇ. 33 ಮೀಸಲು
- ಶೀಘ್ರ ಹೊಸ ಆರೋಗ್ಯ ನೀತಿ; ನೈರ್ಮಲ್ಯೀಕರಣಕ್ಕಾಗಿ ಸ್ವಚ್ಛ ಭಾರತ್ ಮಿಷನ್
- ಪ್ರಾದೇಶಿಕ ಶಾಂತಿ ಸ್ಥಾಪನೆಗೆ 'ನೆರೆರಾಷ್ಟ್ರ'ಕ್ಕೆ 'ಭಯೋತ್ಪಾದನೆ ರಫ್ತು' ತಡೆ; ಸಶಸ್ತ್ರ ಪಡೆಗಳ ಬಲವರ್ಧನೆ
- ದ್ವಿಪಕ್ಷೀಯ ಮಾತುಕತೆಗಳಲ್ಲಿ ಭಾರತದ ಹಿತಕ್ಕೆ ಒತ್ತು
- ಅಭಿವೃದ್ಧಿಯಲ್ಲಿ ಅಲ್ಪಸಂಖ್ಯಾತರೂ ಸಮಾನ ಪಾಲುದಾರರು; ಮದರಸಾಗಳ ಆಧುನೀಕರಣಕ್ಕೆ ಒತ್ತು
- ಸಣ್ಣ ನಗರಗಳಿಗೆ ವಾಯುಯಾನ ಸಂಪರ್ಕ ಕಲ್ಪಿಸಲು ಕಡಿಮೆ ವೆಚ್ಚದ ವಿಮಾನ ನಿಲ್ದಾಣಗಳ ಸ್ಥಾಪನೆ; ಬಂದರು ಕೇಂದ್ರಿತ ಅಭಿವೃದ್ಧಿಗೂ ಆದ್ಯತೆ
- ತ್ವರಿತ ಅನುಮೋದನೆಗಾಗಿ ಕೇಂದ್ರ, ರಾಜ್ಯಗಳಲ್ಲಿ ಏಕಗವಾಕ್ಷಿ ಯೋಜನೆ
- ದೇಶದಲ್ಲಿ ಚತುಷ್ಕೋನ ಹೈಸ್ಪೀಡ್ ರೈಲು ವ್ಯವಸ್ಥೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


