ಮೋದಿ ಕೈಲಿದೆ ರೇಲ್ವೆ ದರ ಏರಿಕೆ ಭವಿಷ್ಯ

ನವದೆಹಲಿ: ರೇಲ್ವೆ ಪ್ರಯಾಣ ದರ, ಸರಕು- ಸಾಗಣೆ ದರ ಹೆಚ್ಚಳ ಎರಡೂ ಈಗ ಪ್ರಧಾನಿ ಮೋದಿ ಮುಂದಿದೆ.
ಮಂಗಳವಾರ ಹಣಕಾಸು ಸಚಿವ ಅರುಣ್ ಜೇಟ್ಲಿ ಜತೆ ಚರ್ಚಿಸಿರುವ ರೇಲ್ವೆ ಸಚಿವ ಡಿ.ವಿ. ಸದಾನಂದ ಗೌಡರು, 'ನಮ್ಮ ಯೋಜನಾ ಗುರಿ ಮುಂದಿನ 5 ವರ್ಷದ ವರೆಗೆ. ಕೇವಲ 100 ದಿನಕ್ಕಲ್ಲ. ದರ ಏರಿಕೆ ಬಗ್ಗೆ ಶೀಘ್ರದಲ್ಲೇ ಪ್ರಧಾನಿಯವರನ್ನು ಭೇಟಿಯಾಗುವೆ' ಎಂದಿದ್ದಾರೆ.
ಆರ್ಥಿಕವಾಗಿ ಹಳಿ ತಪ್ಪಿರುವ ಭಾರತೀಯ ರೇಲ್ವೆ ಮರಳಿ ಹಳಿಗೆ ಬರಲು ಪ್ರಯಾಣಿಕರ ಜೇಬಿನ ಮೇಲೆ ಕಣ್ಣಿಟ್ಟಿರುವುದಂತೂ ಹೌದು. ಪ್ರಯಾಣಿಕರ ದರದಲ್ಲಿ ಹೆಚ್ಚಳ ಪರಿಷ್ಕರಣಾ ದರವನ್ನು ಶೀಘ್ರದಲ್ಲೇ ಮಂಡಿಸಲು ರೇಲ್ವೆ ಮಂಡಳಿ ಈಗಾಗಲೇ ಲೆಕ್ಕಿಸತೊಡಗಿದೆ.
ಜುಲೈ 2ನೇ ವಾರ ಬಜೆಟ್: ಜುಲೈ ಎರಡನೇ ವಾರದಲ್ಲಿ ರೇಲ್ವೆ ಬಜೆಟ್ ನಡೆಯಲಿದೆ. ಸಾಮಾನ್ಯವಾಗಿ ದರಗಳನ್ನು ಬಜೆಟ್ನ ಮೊದಲು ಅಥವಾ ನಂತರ ನಿರ್ಧರಿಸುವುದು ವಾಡಿಕೆ. ಈಗಾಗಲೇ ಒಂದು ಹಂತದಲ್ಲಿ ಅಂದರೆ ಚುನಾವಣಾ ಫಲಿತಾಂಶ ಬಂದ ಕೂಡಲೇ ದರ ಏರಿಸಲಾಗಿತ್ತು..
ಪ್ರಯಾಣಿಕರ ಸಂಖ್ಯೆ ಕುಸಿತ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಕುಸಿತವೇ ಟಿಕೆಟ್ ದರ ಏರಿಕೆಗೆ ಮೊದಲ ಕಾರಣ. ಕಳೆದ ಆರ್ಥಿಕ ವರ್ಷದ ಆರಂಭದಲ್ಲೇ 18 ದಶಲಕ್ಷ ಪ್ರಯಾಣಿಕರ ಕೊರತೆಯನ್ನು ಇಲಾಖೆ ಕಂಡಿದೆ. ಈ ನಷ್ಟವನ್ನು ಸರಿದೂಗಿಸಲು ಸರಕು ಸಾಗಣೆ- ಪ್ರಯಾಣಿಕರ ಟಿಕೆಟ್ ದರ ಹೆಚ್ಚಳದಿಂದ ಮಾತ್ರ ಸಾಧ್ಯ ಎನ್ನುತ್ತವೆ ಮಂಡಳಿ ಮೂಲಗಳು.
ಮೇಲ್ದರ್ಜೆ ವಿಭಾಗದಲ್ಲಿ ಹೆಚ್ಚಳ: ಅಷ್ಟಕ್ಕೂ ಈ ದರ ಹೆಚ್ಚಳದ ಹೊರೆ ಸಾಮಾನ್ಯ ವರ್ಗಕ್ಕೇನೂ ತಟ್ಟುವುದಿಲ್ಲ. ಎಸಿ ಕ್ಲಾಸ್ ವಿಭಾಗದಲ್ಲಿ ಪ್ರಯಾಣದ ದರ ಏರಿಕೆ ಹೆಚ್ಚಲಿದೆ. ಮುಂಗಡ ಟಿಕೆಟ್ ಹಾಗೂ ಟಿಕೆಟ್ ರದ್ದತಿ ದರವನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಆಕರ್ಷಣೆ ಕಳೆದುಕೊಳ್ಳುತ್ತಿರುವ ರೇಲ್ವೆಗೆ ಹೊಸ ರೂಪ ಕೊಡುವುದರ ಬಗ್ಗೆಯೂ ಚಿಂತನೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


