ಶಾಲೆಯತ್ತ ಲಗ್ಗೆ ಇಟ್ಟ ಕಾಡಾನೆ: ವಿದ್ಯಾರ್ಥಿಗಳ ಆತಂಕ
ಸಕಲೇಶಪುರ: ತಾಲೂಕಿನ ಹಾನುಬಾಳು ಹೋಬಳಿಯ ಗ್ರಾಮಗಳಿಗೆ ಕಾಡಾನೆಗಳು ಹಾವಳಿ ನಡೆಸುತ್ತಿದ್ದು, ಮಂಗಳವಾರ ಶಾಲೆಯೊಂದರ ಮುಂಭಾಗದ ತೆಂಗಿನ ಮರವನ್ನು ಉರುಳಿಸಿವೆ.
ಹೋಬಳಿಯ ಮಲ್ಲೇಗದ್ದೆ, ನಡಹಳ್ಳಿ, ದೇಖ್ಲ, ಗುರ್ಜನಹಳ್ಳಿ, ಗುಡಾಣಕೆರೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಡಾನೆಗಳು ನಿರಂತರ ಹಾವಳಿ ನಡೆಸುತ್ತಿದ್ದು, ಇದರಿಂದ ಬಾಳೆ, ಅಡಿಕೆ ಬೆಳೆ ಸಂಪೂರ್ಣ ನಾಶವಾಗಿದೆ. ಸಂಜೆ 4 ರ ವೇಳೆಗೆ ತಂಗುದಾಣದಿಂದ ಹೊರಡುವ ಕಾಡಾನೆ ಗುಂಪು ಪ್ರಮುಖ ರಸ್ತೆಗಳಲ್ಲೆ ನಿರ್ಬಯವಾಗಿ ಸಂಚರಿಸುತ್ತಿರುವುದರಿಂದ ಜನರು ಜೀವ ಭಯ ಎದುರಿಸುವಂತಾಗಿದೆ.
ತೆಂಗಿನ ಮರ ನಾಶ: ಮಂಗಳವಾರ ಮಲ್ಲೇಗದ್ದೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿರುವ ತೆಂಗಿನ ಮರಗಳನ್ನು ಕೆಡವಿ ಹಾಕಿವೆ. ಇದರಿಂದಾಗಿ ಶಾಲೆಗೆ ವಿದ್ಯಾರ್ಥಿಗಳು ಶಾಲೆಗೆ ಬರಲು ಹೆದರುವಂತಾಗಿದೆ. ಬುಧವಾರ ಭಯದಿಂದಲೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರಾರ್ಥನೆ ಸಲ್ಲಿಸಿದರು.
ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೆ ಪ್ರಯೋಜವಾಗಿಲ್ಲ ಎಂದು ದೂರಿರುವ ಗ್ರಾಮಸ್ಥರು, ಕಾಡಾನೆ ಹಾವಳಿಯನ್ನು ತಡೆಗಟ್ಟದಿದ್ದರೆ ಅರಣ್ಯ ಇಲಾಖೆ ಮುಂಬಾಗ ಅಮರಣಾಂತ ಉಪವಾಸ ಧರಣಿ ಆರಂಬಿಸಲಾಗುವುದು ಎಂದು ಗ್ರಾಪಂ ಸದಸ್ಯ ಮೇಘರಾಜ್ ಇತರರು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

