ರಾಜಿನಾಮೆ ಸರದಿ ಈಗ ಸಮಿತಿಗಳದ್ದು
ನವದೆಹಲಿ: ಯುಪಿಎ ಸರ್ಕಾರ ನೇಮಿಸಿದ ರಾಜ್ಯಪಾಲರ ರಾಜಿನಾಮೆ ಕೇಳಿರುವ ಮೋದಿ ಸರ್ಕಾರ ಈಗ ಸರ್ಕಾರಿ ಸ್ವಾಮ್ಯದ ಸಮಿತಿಗಳ ಮುಖ್ಯಸ್ಥರಿಗೂ ಪದತ್ಯಾಗಕ್ಕೆ ಸೂಚಿಸಿದೆ. ಅದಕ್ಕೆ ಪೂರಕವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಮತ್ತು ಐವರು ಸದಸ್ಯರು ಗುರುವಾರ ಸಂಜೆ ರಾಜಿನಾಮೆ ನೀಡಿದ್ದಾರೆ. ಇದರ ಜತೆಗೆ ರಾಷ್ಟ್ರೀಯ ಮಹಿಳಾ ಆಯೋಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಮುಖ್ಯಸ್ಥರು ಹಾಗೂ ಸದಸ್ಯರಿಗೂ ಪದತ್ಯಾಗ ಮಾಡುವಂತೆ ಸೂಚಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ಭಾರತೀಯ ಸಾಂಸ್ಕೃತಿಗಳ ಸಂಬಂಧಗಳ ಪರಿಷತ್ (ಐಸಿಸಿಆರ್) ಅಧ್ಯಕ್ಷ ಡಾ.ಕರಣ್ ಸಿಂಗ್ ಅವರಿಗೂ ಸ್ಥಾನ ಬಿಟ್ಟುಕೊಡುವಂತೆ ಸೂಚಿಸಲಾಗಿದೆ.
ಸರ್ಕಾರ ಬದಲಾದಂತೆ ರಾಜ್ಯಪಾಲರ ಬದಲಾವಣೆ ಸೂಕ್ತವಲ್ಲ. ಯಾವ ರಾಜ್ಯಪಾಲರೂ
ಅವಧಿಗೆ ಮುನ್ನ ರಾಜಿನಾಮೆ ನೀಡಬೇಕಿಲ್ಲ. ರಾಷ್ಟ್ರಪತಿಗಳಿಂದ ನೇಮಕವಾಗಿರುವ ನಾವು ಅವರ ಕಾರ್ಯವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ.
- ಎಚ್.ಆರ್. ಭಾರದ್ವಾಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

